“ಬುಡದಲ್ಲೇ ಬಾಡಿ ಹೋಗುತ್ತಿರುವ ಬಾಲ ಕಾರ್ಮಿಕರು “

Source: shabbir ahmed | By Arshad Koppa | Published on 29th January 2017, 12:54 PM | Special Report | Guest Editorial |

ಶ್ರೀನಿವಾಸಪುರ: ನಮ್ಮ ವಿದ್ಯಾಭ್ಯಾಸಕ್ಕೆ ಬೆಂಕಿಹಾಕ! ನಮ್ಮ ಸರ್ಕಾರಿಗಳಿಗೆ ಸಂಕಲ್ಪ ಇಲ್ಲ ನಮ್ಮ ರಾಜಕೀಯ ನಾಯಕರಿಗೆ ಚಿತ್ತಸುದ್ದಿ ಇಲ್ಲಾ ನಮಗೆ ಈ ಲಕ್ಷಣಗಳೆ ಇರುವುದಾದರೆ ದೇಶದಲ್ಲಿ ಇರುವ ಬಾಲ ಕಾರ್ಮಿಕರು ಸ್ಕೂಲ್‍ಗಳಿಗೆ ಇರುವವರು. ಬೇವರು ಸುರಿಸುವ ಅಗತ್ಯ ಇಲ್ಲದೆ ನೀಟಾಗಿ ವಿದ್ಯಾಭ್ಯಾಸವೆಂಬ ವೃಕ್ಷದ ಕೆಳಗೆ ವಿದ್ಯೆಯನ್ನು ಕಲಿಯುತ್ತಿದ್ದರು. ಕೆಲವು ಸರ್ವೆಗಳ ಪ್ರಕಾರ ಪ್ರಪಂಚದಾಂತ್ಯ 16.8 ಕೋಟಿ ಮಂದಿ ಬಾಲ ಕಾರ್ಮಿಕರು ಶಾಲೆಗಳಿಗೆ ಹೋಗುವುದಕ್ಕೆ ಆಗದೆ, ಕೆಲಸದಲ್ಲಿ ಬಾಡಿಹೋಗುತ್ತಿದ್ದಾರೆ. ಇವರಲ್ಲಿ ಸಾಕಷ್ಟು ಮಕ್ಕಳು ಉಚಿತವಾಗಿ ಕೆಲಸಗಳು ಬಾನಿಸಗಳಾಗಿ ಬದುಕುತ್ತಿದ್ದಾರೆ. ನಮ್ಮ ಮಹಾನ್ ಭಾರತದಲ್ಲಿ 5 ರಿಂದ 14 ವರ್ಷಗಳ ಒಳಗೆ ಇರುವ ಮಕ್ಕಳ ಸಂಖ್ಯೆ ಸರಿಸುಮಾರು 25.3 ಕೋಟಿ ಇವರಲ್ಲಿ 1.26 ಕೋಟಿ ಮಂದಿ ಶಾಲೆಗಳಿಗೆ ದೂರವಾದ ಮೈನರ್ ಬಾಲ ಕಾರ್ಮಿಕರೇ 


* ಕೈಯಲ್ಲಿ ಸ್ಲೇಟು ಬಳಪ ಇಟ್ಟಿಕೊಳ್ಳಬೇಕಾದ ಆ ಚಿಕ್ಕ ಪುಟಾಣ  ಕೈಯಿಗಳು ಚೆನ್ನಿಕೆ, ಗುದ್ದಲಿ, ಹೋಟೆಲ್‍ಗಳಲ್ಲಿ ತಟ್ಟೆಗಳನ್ನು ತೊಳೆಯುವುದಲ್ಲಿ ಮೆಕಾನಿಕ್ ಶೆಡುಗಳಲ್ಲಿ ಸ್ಪಾನರ್‍ಗಳು ಇಟ್ಟಿಕೊಳ್ಳತ್ತವೆ.
* ಅಕ್ಷರಗಳು ತಿದ್ದುಕೊಳ್ಳಬೇಕಾದ ಕೈಯಿಗಳು ಕಷ್ಟವಾದ ಕೆಲಸಗಳಲ್ಲಿ ತೊಡಗಿ ಇಟ್ಟಿಗೆ ಕಾರ್ಖಾನೆÀಗಳಲ್ಲಿ ಮತ್ತು ಗಾರೆ ಕೆಲಸಗಳಲ್ಲಿ ಬಾರಿ ವಸ್ತುಗಳನ್ನು ಎತ್ತಿ ಕೈಯಿಗಳಿಗೆ ಬೊಬ್ಬೆಗಳು ಎಬ್ಬಿಸಿಕೊಳ್ಳುತ್ತಿದ್ದಾರೆ.
* ಅವರಿಗೆ ಮಾತ್ರ ಶಾಲೆಗೆ ಹೋಗಬೇಕೆಂದು ಇರುವುದಿಲ್ಲವೆ? 
* ಸಹಪಾಠಿಗಳ ಮಕ್ಕಳ ಜೊತೆ ಆಟವಾಡಿ ಕೊಳ್ಳಬೇಕೆಂದು ಇರುವುದಿಲ್ಲವೇ?
* ನಮಗೆ ಸ್ವತಂತ್ರ ಬಂದ ಸರಿ ಸುಮಾರು 70 ವರ್ಷಗಳ ಆಗುತ್ತಿದೆ. “ಗರಿಬಿ ಹಠಾವ್“ 40 ವರ್ಷಗಳು ತುಂಬಿವೆ, ಆದರೂ “ಬಾಲ” ಭಾರತವನ್ನು ದಾರಿದ್ರ್ಯವು ಇಟ್ಟಿಕೊಂಡು ಪೀಡಿಸುತ್ತೇನೆ ಇದೇ ಈ ಪರಿಸ್ಥಿತಿಯನ್ನು ಸರಿಪಡಿಸುವುದಕ್ಕೆ ಇಷ್ಟು ವರ್ಷಗಳು ನಮ್ಮ ಸರ್ಕಾರಗಳು ಬಾಲಕಾರ್ಮಿಕರಿಗೆ  ಸಾಧನೆಗಳೇನೂ?
* ವಿದ್ಯಾಭ್ಯಾಸದಿಂದ ಸಮಾಜದಲ್ಲಿ ಉನ್ನತ ಸ್ಥಿತಿಗೆ ಹೋಗಿರುವವರು ಬಾಲಕಾರ್ಮೀಕರಗೋಸ್ಕರ ಮಾಡಿದ್ದಾರು ಏನೋ? 


    ನಮ್ಮ ದೇಶದ ಜನಸಂಖ್ಯೆ ಸರಿ ಸುಮಾರು 130 ಕೋಟಿ ಅದರಲ್ಲಿ ಸುಮಾರು 25 ಕೋಟಿ ಮೇಲ್ಪಟ್ಟು ಮಕ್ಕಳು ಬಾಲ ಕಾರ್ಮೀಕರಾಗಿ ಇದ್ದಾರೆ? ಆದರೆ ಅವರಲ್ಲಿ ಸುಮಾರು 1.20 ಕೋಟಿ ಮಂದಿ ಮಕ್ಕಳಿಗೆ ಬಾಲ್ಯವೇ ಇಲ್ಲ ಶಾಲೆಗಳಲ್ಲಿ ಇರಬೇಕಾದ ಮಕ್ಕಳು ಬಾಲಕಾರ್ಮಿಕರಾಗಿ ಬೆಳೆಯುತ್ತಿದ್ದಾರೆ. ಅಂತರಾಷ್ಟ್ರೀಯ ಕಾರ್ಮೀಕ ಸಂಸ್ಥೆ ಐ.ಎಲ್.ಓಯಿಂದ ಪ್ರತಿ ವರ್ಷ ಜೂನ್ 12 ರಂದು ಬಾಲ ಕಾರ್ಮೀಕರ ದಿನವಾಗಿ ಪ್ರಪಂಚ ದೇಶಗಳು ಪಾಲಿಸುತ್ತಿವೆ. ಇದೇ ತಿಂಗಳಲ್ಲಿ ಹಾಗೂ ಹೀಗೂ ನಮ್ಮ ದೇಶದಲ್ಲಿ ಶಾಲೆಗಳು ಗಂಟೆ ಮೋಗುತ್ತವೆ, ಎಷ್ಟೂ ಮಂದಿ ಚಿಕ್ಕ ಮಕ್ಕಳು ಹೊಸ ಯೂನಿಫಾರಂ ಹಾಕಿಕೊಂಡು ಭುಜಕ್ಕೆ ಬ್ಯಾಗಗಳನ್ನು ತಗಲಿಸಿಕೊಂಡು ಸಂತೋಷದಿಂದ ಉಲ್ಲಾಸವಾಗಿ ಶಾಲೆಗೆ ಹೋಗುತ್ತಿದ್ದಾರೆ. ಕಣ್ಣುಗಳ ಮುಂದೆ ಶಾಲೆಗಳು ಕಾಣುತ್ತಿದ್ದುರು, ಶಾಲೆಯ ಬೆಲ್ಲಿನ ಶಬ್ಧವು ಕಿವಿಗೆ ಕೇಳಿಸುತ್ತದ್ದರೂ ಒಳ ಒಳಗೆ ಆ ಪುಟಾಣ  ಮಕ್ಕಳಿಗೆ ಶಾಲೆಗೆ ಹೋಗಬೇಕೆಂದು ಕೋರಿಕೆ ಬಲವಾಗಿದ್ದರೂ ಹೆಚ್ಚು ಮಂದಿ ಚಿಕ್ಕಮಕ್ಕಳು ಅಂತಹ ಅದೃಷ್ಟಕ್ಕೂ ಕೂಡಾ ವಂಚನೆಯಾಗಿರುತ್ತಾರೆ. ತಮ್ಮ ವಯಸ್ಸಿನ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ಚೆನ್ನಿಕೆ, ಗುದ್ದಲಿ, ಸ್ಪಾನರ್ಸ್ ಇತ್ಯಾದಿ ಕೈಯಿಗಳಿಗೆ ಹಿಡಿದು ಕೆಲಸಕ್ಕೆ ಹೋಗುತ್ತಿದ್ದಾರೆ. ಹಳ್ಳಿ ಪ್ರದೇಶಗಳಲ್ಲಿ ಹೆಚ್ಚು ಮಂದಿ ಮಕ್ಕಳು ಚೆನ್ನಿಕೆ, ಗುದ್ದಲಿ ಹಿಡಿದು ವ್ಯವಸಾಯ ಮಾಡುತ್ತಿದ್ದು ಇನ್ನೂ ಕೆಲವರು ಪಟ್ಟಣ ಪ್ರದೇಶಗಳ ವಲಸೆ ಹೋಗಿ ಶ್ರೀಮಂತರ ಮನೆಗಳಲ್ಲಿ ಕಸ ಗುಡಿಸುವುದು, ಪಾತ್ರೆಗಳು ತೊಳೆಯುವುದು, ಸಿಮೆಂಟ್, ಇಟ್ಟಿಗೆ, ಬಾರ್‍ಗಳಲ್ಲಿ ಬಾನ ಸಂಚಾರ, ಗಣ , ರಾಸಾಯನ,  ಕಾರ್ಖಾನೆಗಳಲ್ಲಿ ಹಲವು ಪ್ರಮಾದಕರವಾದ ಕಾರ್ಖಾನೆಗಳಲ್ಲಿ ತಮ್ಮ ಬೆವರನ್ನು ಸುರಿಸುತ್ತಾ, ಬಿಸಿನೀರಿಗೆ ತನ್ನೀರಾಗಿ ಅವರ ಕುಟುಂಬಕ್ಕೆ ಈ ಬಾಲ ಕಾರ್ಮಿಕರು ಅಸರೆಯಾಗಿ ನಿಲ್ಲುತ್ತಿದ್ದಾರೆ. 


     ವಿದ್ಯಾಹಕ್ಕು:-   ದೇಶದಲ್ಲಿ 6 ರಿಂದ 14 ವರ್ಷಗಳ ವಯಸ್ಸುಳ್ಳ ಮಕ್ಕಳಿಗೆ ಉಚಿತ ನಿರ್ಭಂದ ಪ್ರಾಥಮಿಕ ವಿದ್ಯೆಯ್ನನು ಜಾರಿ ಮಾಡಬೇಕೆಂಬ ಸಂಕಲ್ಪದಿಂದ ನಮ್ಮ ಕೇಂದ್ರ ಸರ್ಕಾರವು 2009 ರಲ್ಲಿ ಆರ್.ಟಿ.ಇ ಕಾನೂನು ರಚನೆ ಮಾಡಿದ್ದು, 2012 ರಲ್ಲಿ ಈ ಕಾನೂನು ಜಾರಿಗೆ ಬಂತೂ ಈ ಕಾನೂನು ಪ್ರಕಾರ 6 ರಿಂದ 14 ವರ್ಷಗಳ ವಯಸ್ಸಿರುವವರ ಮಕ್ಕಳಿಗೆ ವಿದ್ಯೇಯ ಪ್ರಾಥಮಿಕ ಹಕ್ಕು ಈ ಕಾನೂನನ್ನು ಜಾರಿಗೆ ತಂದಿದ್ದರಿಂದ ವಿದ್ಯೆಯನ್ನು ಪ್ರಾಥಮಿಕ ಹಕ್ಕಾಗಿ ಗುರ್ತಿಸಿದ ದೇಶಗಳಲ್ಲಿ ಭಾರತ ದೇಶ 135ನೇ ದೇಶವಾಗಿ ಆರಂಭಿಸಿದ್ದು, ಈ ಕಾನೂನು ಬಂದು ಸುಮಾರು 7 ವರ್ಷ ಆದರೂ ಇನ್ನೂ ಸರಿ ಸುಮಾರು ಕೋಟಿ ಮಂದಿ ಮಕ್ಕಳು ಶಾಲೆಗೆ ದೂರವಾಗಿ ಉಳಿದಿದ್ದಾರೆ. ಇದು ಈಗಿದ್ದರೆ ದೇಶದಾಂತ್ಯ ಸರ್ಕಾರಿ ಶಾಲೆಗಳಲ್ಲಿ ಇರಬೇಕಾದ ಉಪಾಧ್ಯಾಯರಗಿಂತ ಸುಮಾರು 5.8 ಲಕ್ಷ ಮಂದಿ ಟೀಚರ್ಸ್ ಕಮ್ಮಿಯಾಗಿದ್ದಾರೆ. ವಿದ್ಯಾ ಹಕ್ಕು ಹಕ್ಕಾಗಿಯೇ ಉಳಿದು ಹೋಗುತ್ತಿದೆ ಎನ್ನುವುದಕ್ಕೆ ಈ ಅಂಕಿ ಅಂಶಗಳೇ ನಿರ್ದಶನ. ಪ್ರಚಾರ ಅರ್ಭಟಿಗಳಿಗೆ ಕೋಟಿ ಗಟ್ಟಲೆ ಪ್ರಜಾ ಹಣವನ್ನು ದುರುಪಯೋಗ ಮಾಡುತ್ತಿರುವ ಪ್ರಜಾ ಪ್ರಭುತ್ವಗಳು ಸ್ವಲ್ಪವಾದರು ಚಿತ್ತ ಸುದ್ದಿ ಇದರೆ ವಿದ್ಯಾ ಹಕ್ಕು ಕಾನೂನು ಜಾರಿಗೊಳಿಸುವುದರ ಮೇಲೆ ದೃಷ್ಟಿ ಇದ್ದರೆ ಈ ದುರದೃಷ್ಟ ನಮ್ಮ ದೇಶದಲ್ಲಿರುವ ಬಾಲ ಕಾರ್ಮೀಕರಿಗೆ ಇರುವುದೇ ಇಲ್ಲಾ. 


ಬಾಲಕಾರ್ಮೀಕರು ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದರು ಸರ್ಕಾರಗಳು/ಅಧಿಕಾರಿಗಳು ಕಣ್ಣುಲ್ಲಿದ ಕುರಡರಂತೆ ಬಾಲಕಾರ್ಮೀಕರ ಪಾಲಿಗೆ ದೃಷ್ಟರಾಗಿ ನಿಂತಿದ್ದಾರೆ. ಬಾಲಕಾರ್ಮೀಕರ ಬಗ್ಗೆ ಸಮೀಕ್ಷೆ ಕೆಲವರು ಮಾಡಿರುವ ಪ್ರಕಾರ,
* ವಜ್ರಕಾರ್ಖಾನೆಗಳಲ್ಲಿ :- ಕಣ ್ಣಗೆ ಮಿಂಚುವಂತಹ ಬೆಳಕು ತುಂಬುವಂತಹ ಆ ವಜ್ರಗಳ ತೆಯಾರಿಕೆಯಲ್ಲಿ ಬಾಲ ಕಾರ್ಮೀಕರ ಬೆವರು, ರಕ್ತ, ಶ್ರಮ ಇರುತ್ತದೆ ಎಂದು ಎಷ್ಟೂ ಜನಾಂಗಕ್ಕೆ ಹರಿವು ಇದೆ? ಭಾರತದಲ್ಲಿ, ಆಫ್ರಿಕಾ ದೇಶಗಳಲ್ಲಿ ವಜ್ರಗಳ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರು ಐ.ಎಲ್.ಓ ಸಂಸ್ಥೆ ಪ್ರಕಾರ ಕೆಳಗೆ ತಿಳಿಸಿರುವ ರೀತಿಯಲ್ಲಿ ವಜ್ರಗಳ ಕಾರ್ಖಾನೆಗಳಲ್ಲಿ ಬಾಲಕಾರ್ಮೀಕರು ಕೆಲಸ ಮಾಡುತ್ತಿರುವದು ನಿಜವೆಂದು ದಕ್ಷಿಣ ಗುಜರಾತ್ ವಜ್ರಗಳ ಕಾರ್ಖಾನೆಯಲ್ಲಿ ಕಾರ್ಮೀಕರ ಸಂಘ ಅಂಗೀಕರಿಸಿತ್ತು. ಅದರೆ ಅವರ ಸಂಖ್ಯೆ1% ಗಿಂತೆ ಕಮ್ಮಿ ಇದೆ ಎಂದು ಸುಳ್ಳು ಮಾಹಿತಿ ನೀಡಿತ್ತು. ಭಾರತದಲ್ಲಿ ವಜ್ರಗಳ ಕಾರ್ಖಾನೆಗಳಲ್ಲಿ ಅಂದಾಜು 15 ಲಕ್ಷ ಮಂದಿ ಕಾರ್ಮೀಕರು ಕೆಲಸ ಮಾಡುತ್ತಿದ್ದು ಅದರು 20 ಸಾವಿರ ಬಾಲ ಕಾರ್ಮೀಕರು ಇದ್ದಾರೆಂದು ಐ.ಎಲ್.ಓ ಸಂಸ್ಥೆ ಸ್ಪಷ್ಟ ಪಡಿಸಿದೆ.
*ಸಿಲ್ಕ್ ಕಾರ್ಖಾನೆಗಳಲ್ಲಿ:- ಕರ್ನಾಟಕ, ತೆಮಿಳುನಾಡುಗಳಲ್ಲಿ ವಿಸುತ್ತವಾಗಿರುವ ಸಿಲ್ಕ್ ಕಾರ್ಖಾನೆಗಳಲ್ಲಿ 5 ವರ್ಷಗಳಿಂದ ಸುಮಾರು 14 ವರ್ಷದ ಮಕ್ಕಳು ಕೆಲಸ ಮಾಡುತ್ತಿದ್ದು, ಈ ಕಾರ್ಖಾನೆಯ ಮಾಲೀಕರು ದಿನಕ್ಕೆ 12 ಗಂಟೆ ಕೆಲಸ ಮಾಡಿಸಿಕೊಂಡು ಕಡಿಮೆ ವೇತನ ನೀಡಿ ಅವರ ಬಾಲನ್ನು ಬಾಡಿಹೋಗುವುಂತೆ ಮಾಡುತ್ತಿದ್ದಾರೆ. 
* ಗಣ  ಕಾರ್ಖಾನೆಗಳಲ್ಲಿ  :- 18 ವರ್ಷಗಳ ಒಳಗೆ ಇರುವಂತಹ ಮಕ್ಕಳ ಕೈಗಳಲ್ಲಿ ಕೆಲಸ ನಿರ್ವಹಿಸಬಾರದೆಂದು ಕಾನೂನುಗಳು ರಚನೆಯಾಗಿದ್ದು ನಮ್ಮ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಕೆಲವು ಕಡೆ ಗಣ  ಕಾನೂನುಗಳನ್ನು ಗಾಲಿಗೆ ತೂರಿ ಅನಾಧಿಕಾರಿಕವಾಗಿ ಬಾಲಕಾರ್ಮಿಕರನ್ನು ಉಪಯೋಗಿಸಿಕೊಂಡು ಕೋಟಿಗಟ್ಟಲೇ ಹಣವನ್ನು ಸಂಪಾದನೆ ಮಾಡಿ ತಮಗೆ ಬೇಕಾಗಿರುವಂತಹ ರಾಜಕೀಯ ಆಭ್ಯರ್ಥಿಗಳಿಗೆ  ಚುನಾವಣೆ ಸಂಧರ್ಭಗಳಲ್ಲಿ ಹಣವನ್ನು ಚೆಲ್ಲಿ ಗೆಲ್ಲಿಸಿಕೊಂಡು ತಮ್ಮ ಕಾರ್ಖಾನೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾರು ಚಕ್ಕಾರ ಎತ್ತದಂತೆ ನೋಡುತ್ತಿದ್ದಾರೆ. ಈಶಾನ್ಯ ರಾಷ್ಟ್ರವಾದ ಮೇಘಾಲಯದಲ್ಲಿ ಹಿಂದುಳಿದ ವರ್ಗದವರು ಬಾಲಕಾರ್ಮಿಕರಾಗಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದು ಜಾರ್ಖಾಂಡ್, ಮಧ್ಯಪ್ರದೇಶ್, ಒಡಿಸಾ, ಬಿಹಾರ್, ಉತ್ತರಪ್ರದೇಶ್, ದೇಶದ್ಯಾಂತ ಇನ್ನು ಹಲವು ರಾಜ್ಯಗಳಲ್ಲಿ ಸಾವಿರ ಸಂಖ್ಯೆಯಲ್ಲಿ ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಬಚಪನ್ ಬಚಾವೋ ವಂತಹ ಸ್ವಚ್ಚೋಂದು ಸಂಸ್ಥೆಗಳು ಆಂದೋಲನಗಳು ಮಾಡುತ್ತಿದ್ದರು ಈ ಗಣ  ಉದ್ದಿಮೆದಾರರು ಕಾರ್ಪರೇಟ್ ರಾಜಿಕೀಯವನ್ನು ನಡೆಸುತ್ತಿದ್ದಾರೆ.  
* ಡಾಬಾ ರೆಸಾರ್ಟ್‍ಗಳಲ್ಲಿ :- ನಮ್ಮ ದೇಶದಲ್ಲಿ ವ್ಯವಸಾಯ ಹಾಗೂ ಮನೆ  ಕೆಲಸಗಳಲ್ಲಿ ಹೆಚ್ಚಾಗಿ ಬಾಲ ಕಾರ್ಮಿಕರು ಕಾಣ ಸುವುದು ಉಂಟು ದೊಡ್ಡ ದೊಡ್ಡ ಸಿಟಿಗಳಲ್ಲಿ ಡಾಬಾ ರೆಸಾರ್ಟ್‍ಗಳು, ಹೋಟಲ್‍ಗಳಲ್ಲಿ ಹಾಗೂ ಚಿಕ್ಕ ಮಕ್ಕಳನ್ನು ಕೆಲವು ದಂದೆಕಾರರು  ರಸ್ತೆಯ ಸಿಗ್ನಲ್‍ಗಳಲ್ಲಿ ಇನ್ನು ಇತರೆ ಕಡೆಗಳಲ್ಲಿ ಬಿಕ್ಷಕರಾಗಿ ಮಾಡಿ ಅವರಿಂದ ಹಣ ಸುಳಿಗೆ ಮಾಡುತ್ತಿದ್ದಾರೆ. 
 ಬಾಲ ಕಾರ್ಮಿಕರ ಬಗ್ಗೆ ಕಾನೂನುಗಳು ಏನು ತಿಳಿಸುತ್ತಿವೆ. 


    ಬಾಲ ಕಾರ್ಮಿಕರ ಕಾನೂನು, ಕಾರ್ಖಾನೆಗಳ ಕಾನೂನು ಗಣ  ಕಾರ್ಖಾನೆಗಳ ಕಾನೂನು ನಿರ್ಮೂಲನಾ ಕಾನೂನುಗಳು ಬಾಲ ಕಾರ್ಮಿಕರ ಕೈಗಳಲ್ಲಿ ಕೆಲಸ ಮಾಡಿಸಿಕೊಳ್ಳುವುದನ್ನು ನೇರವಾಗಿ ಪರಿಗಣ ಸಿದ್ದು ನಮ್ಮ ರಾಜ್ಯಗಳಲ್ಲಿ ಕೂಡಾ ಬಾಲ ಕಾಮಿಕರ ಹಕ್ಕುಗಳಿಗೆ ಎಲ್ಲಾ ವಿಧವಾದ ರಕ್ಷಣೆ ಕಲ್ಪಿಸುತ್ತಿದೆ ಕಾನೂನುಗಳನ್ನು ಉಲ್ಲಂಘಿಸಿ ಬಾಲ ಕಾಮೀಕರನ್ನು ಕೆಲಸದಲ್ಲಿ ನೇಮಿಸಿಕೊಂಡಿರುವ ಮಾಲೀಕರಿಗೆ ರೂ 10 ಸಾವಿರದಿಂದ ರೂ 50 ಸಾವಿರವರೆಗೂ ಜುಲ್ಮಾನ ಮತ್ತು 3 ವರ್ಷ ಜೈಲು ಶಿಕ್ಷೆ ವಿಧಿಸುವುದು ಉಂಟು. 
ಬಾಲ್ಯವನ್ನು ಕಳವು ಮಾಡುವ ಕಲ್ಲರಾಗಬೇಡಿ :- 
    ಚಿಕ್ಕ ಮಕ್ಕಳ ಅಮೂಲ್ಯವಾದ ಬಾಲ್ಯವನ್ನು ಕಸಿದು ಕೊಳ್ಳುವವರು ಕ್ರೂರವಾದ ಕಳ್ಳರು ನಿಮ್ಮ ಮನೆಗಳಲ್ಲಿ ಶಾಪ್‍ಗಳಲ್ಲಿ .......... ಇನ್ನೂ ಎಲ್ಲಾದರೂ ಚಿಕ್ಕಮಕ್ಕಳನ್ನು ಕೆಲಸಕ್ಕೆ ಇಟ್ಟರೆ ನೀವು ಅವರ ಮುದ್ದಾದ ಬಾಲ್ಯವನ್ನು ಕಸಿದುಕೊಂಡು ಗಜಕಳ್ಳರಾದಂತೆ , ಅದಕ್ಕೆ ಆ ತಪ್ಪು ಮಾಡಬೇಡಿ  ಆದರೆ ಆ ಮಕ್ಕಳ ಓದಿಗೆ ಸಹಾಯ ಮಾಡಿ ಮನಸಿರುವ ಮನುಷ್ಯನೆಂದು ಅಣ ಸಿಕೊಳ್ಳಿ. 
ಬಾಲ ಕಾರ್ಮಿಕರು ಸರಿಯೇ? 
    ಚಲನಚಿತ್ರಗಳಲ್ಲಿ ಕುಡಿಯುವ ದೃಶ್ಯ ಬಂದರೆ ... ಮಧ್ಯಪಾನ ಆರೋಗ್ಯಕ್ಕೆ ಹಾನಿಕರ ಅಂತ ..... ಸಿಗರೇಟ್ ಕುಡಿದರೆ ಹೊಗೆ ಕುಡಿದರೆ ಆರೋಗ್ಯಕ್ಕೆ ಹಾನಿಕರ ಅನ್ನುವ ಎಚ್ಚರಿಕೆಗಳು ತೆರೆಯ ಮೇಲೆ ಕಾಣ ೀಸುತ್ತವೆ. ಹೋಟಲ್‍ನಲ್ಲಿ ಟಿ ಸಪ್ಲೆ ಮಾಡುತ್ತಿರುವ ... ಕಪ್ಪಿಗೆ ಮಸಿ ಬಳಿದ ಬಟ್ಟೆಗಳಿಂದ ಮೆಕಾನಿಕ್ ಶೆಡ್‍ಗಳಲ್ಲಿ ಕೆಲಸ ಮಾಡುತ್ತಿರುವ ಇಂತಹ ಕೆಲಸಗಳು ಮಾಡುತ್ತಿರುವ ಬಾಲ ಕಾರ್ಮಿಕರ ದೃಶ್ಯಗಳು ಯಾವಾಗ ಚಲನಚಿತ್ರ ಪರದೆಯ ಮೇಲೆ ಕಾಣ ಸುತ್ತವೋ ಮತ್ತೆ ಇಂತಹ ದೃಶ್ಯಗಳು ಚಲನಚಿತ್ರ ಪರದೆಯ ಮೇಲೆ ಕಾಣ ಸಿದಾಗ ......
    “ ಚಿಕ್ಕ ಮಕ್ಕಳ ಕೈಗಳಲ್ಲಿ ಕೆಲಸ ಮಾಡಿಸಿಕೊಳ್ಳುವುದು ಅಪರಾದ” ಅನ್ನುವ ಎಚ್ಚರಿಕೆ ಮಾತ್ರ ಹಾಕಿಕೂಡದ!
ದೂಮಪಾನದಿಂದ ಮಧ್ಯಪಾನದಿಂದ ವ್ಯಕ್ತಿಯ ಆರೋಗ್ಯವು ಕೆಟ್ಟುಹೋಗುವುದು ಆದರೆ ಬಾಲ ಕಾರ್ಮೀಕರ ವ್ಯವಸ್ಥೆಯಿಂದ ದೇಶದ ಆರೋಗ್ಯವೇ ಕೆಟ್ಟು ಹೋಗುತ್ತದೆ ಇದ್ನು ದೃಷ್ಟಿಯಲ್ಲಿಟ್ಟುಕೊಂಡು “ ಚಿಕ್ಕಮಕ್ಕಳ ಕೈಯಲ್ಲಿ ಕೆಲಸಗಳು ಮಾಡಿಸಿಕೊಳ್ಳುವುದು ಅಪರಾದ “ ಅನ್ನುವ ಎಚ್ಚರಿಕೆ ನಿಜವಾಗಿ ಅನಿಸುವುದಿಲ್ಲವೇ 
      ಬಾಲ ಕಾರ್ಮೀಕರನ್ನು ರಕ್ಷಿಸಬೇಕಾದರೆ ಪ್ರತಿಯೊಬ್ಬನು ಸಮಾಜದಲ್ಲಿ ಬಾಲಕಾರ್ಮಿಕರಗೋಸ್ಕರ ಹೀಗೂ ಮಾಡಬಹುದು! 
“ಕರುಣೆ ನೋಡಿಸುವ ದೃಷ್ಟಿಗಿಂತ ಸಹಾಯ ಮಾಡುವ ಕೈಗಳು ಉತ್ತಮ” 
ನಿಮ್ಮ ಮನೆಯಲ್ಲಿ ನಿಮ್ಮ ಪಕ್ಕದ ಮನೆಯಲ್ಲಿ ನಿಮ್ಮ ಬಡಾವಣೆಯಲ್ಲಿ ಯಾರಾದರೂ ಬಾಲ ಕಾಮೀಕರು ಕಾಣ ಸಿದರೆ ಮನಸ್ಸಿಗೆ ಬಾದೆತೆಯಾದರೆ ಏನಾದರೂ ಸಹಾಯ ಮಾಡಬೇಕು ಎನ್ನುವ ಆಸೆ ಇದ್ದರೆ ಹೀಗೂ ಮಾಡಿ ನೋಡೋಣ.....
ನಿಮ್ಮ ಬಡಾವಣೆಯಲ್ಲಿ ಗಿಡ ನೆಡುವುದರಿಂದ ಪರಿಸರವನ್ನು ಶುಭ್ರ ಮಡುವತನಕ ಎಲ್ಲರೂ ಸೇರಿ ಅನೇಕ ಅನೇಕ ಒಳ್ಳೆ ಕೆಲಸಗಳು ಮಾಡುತ್ತೀರಿ ನಿಮ್ಮ ಬಡಾವಣೆಯಲ್ಲಿ ಇರುವ ಒಬ್ಬ ಬಾಲಕಾರ್ಮಿಕನ್ನು ದತ್ತುಗೆ ತೆಗೆದುಕೊಂಡು ಆತನು ಮಾಡುತ್ತಿರುವ ಕೆಸಲವನ್ನು ನಿಲ್ಲಿಸಿ ಶಾಲೆಗೆ ಕಳುಹಿಸುವುದು ಸಹ ಒಳ್ಳೆಯ ಕೆಲಸ. ನಿಮ್ಮ ಪಾಕಿಟ್ ಮನಿ ಯಿಂದ ತಲಾ ಸ್ವಲ್ಪ ಬಾಲಕಾಮಿಕರಿಗೆ ನೀಡಿದರೆ ಆರ್ಥಿಕವಾಗಿ ಅವರಿಗೆ ಬೆನ್ನಲುಬಾಗಿ ಇರುತ್ತದೆ. ವಿದ್ಯೆಯು ಸರಿಯಾಗಿ ನಡೆದುಕೊಂಡು ಹೋಗುತ್ತದೆ ನವು ಸಹಾಯ ಮಾಡಿದ ಬಾಲಕಾರ್ಮಿಕ ಒಳ್ಳೇಯ ವಿದ್ಯಾಭ್ಯಾಸ ಮಾಡಿ ಪ್ರಯೋಜಿಕನಾದರೆ ನಮ್ಮ ಬಡಾವಣೆಗೆ ಎಂತಹ ಒಳ್ಳೆಯ ಹೆಸರು ಬರುತ್ತದೋ ಒಂದು ಸಾರಿ ಆಲೋಚಿಸಿ. 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...