ಸಿಂಗಾಪೂರ್ ಏರ್​ಲೈನ್ಸ್​:ಲ್ಯಾಂಡಿಂಗ್ ವೇಳೆ ಬೆಂಕಿಗಾಹುತಿಯಾದ ವಿಮಾನ

Source: ಏಜೇನ್ಸೀಸ್/ವಿಜಯವಾಣಿ | By I.G. Bhatkali | Published on 27th June 2016, 1:13 PM | Global News |

ಸಿಂಗಾಪೂರ್: ಸಿಂಗಾಪೂರ್ ಏರ್​ಲೈನ್ಸ್​ಗೆ ಸೇರಿದ ವಿಮಾನ ಎಸ್​ಐಎ ಎಸ್​ಕ್ಯೂ 368 ಎಂಬ ವಿಮಾನ ಸೋಮವಾರ ಬೆಳಗಿನ ಜಾವ ಲ್ಯಾಂಡಿಂಗ್ ವೇಳೆ ಬೆಂಕಿ ಕಾಣಿಸಿಕೊಂಡಿದೆ.

ಸಿಂಗಾಪೂರ್​ದ ಚಾಂಗಿ ವಿಮಾನ ನಿಲ್ದಾಣದಿಂದ ಮಿಲಾನ್​ಗೆ ಹೊರಟಿದ್ದ ವಿಮಾನ ಹಾರಾಟದ ಎರಡು ಗಂಟೆ ನಂತರ ಇಂಜಿನ್​ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ಮರಳಿ ಸಿಂಗಾಪೂರಕ್ಕೆ ತೆರಳುತ್ತಿದ್ದೇವೆ ಎಂದು ಪೈಲಟ್ ಘೊಷಿಸಿದಾಗ ಪ್ರಯಾಣಿಕರಲ್ಲಿ ದುಗುಡ ಮನೆ ಮಾಡಿತ್ತು.

ಸಿಂಗಾಪೂರ್ ತಲುಪಿದ ವಿಮಾನ ಇನ್ನೇನು ಭೂಸ್ಪರ್ಶ ಮಾಡಬೇಕು ಅಷ್ಟರಲ್ಲಿ ಇಂಜಿನನಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮುಂಜಾನೆ 7 ರ ಸುಮಾರಿಗೆ ಭೂಮಿಗಿಳಿದ ವಿಮಾನಕ್ಕೆ ಹತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ ನಿಲ್ದಾಣದ ಸಿಬ್ಬಂದಿ ನಂದಿಸುವಲ್ಲಿ ಯಶಸ್ವಿಯಾದರು.

 

Read These Next