ಶ್ರೀನಿವಾಸಪುರದಲ್ಲಿ ಬೀದಿ ನಾಯಿಗಳ ಹಾವಳಿ; ಅಧಿಕಾರಿಗಳ ನಿರ್ಲಕ್ಷ್ಯ

Source: sonews | By Staff Correspondent | Published on 8th January 2018, 11:17 PM | State News | Public Voice |

ಶ್ರೀನಿವಾಸಪುರ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಪುರಸಭೆ ಆಡಳಿತ  ವರ್ಗ ಕೈ ಕಟ್ಟಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. 
ಪಟ್ಟಣದ ಬಹುತೇಕ ವಾರ್ಡಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಮಕ್ಕಳು ಹಾಗೂ ಸಾರ್ವಜನಿಕರಿಗೆ  ತೊಂದರೆಯಾಗಿದೆ ಪಟ್ಟಣದ ಅಜಾದ್ ರಸ್ತೆ ಹೆಚ್ಚಿನ ಜನ ಪ್ರದೇಶವಾಗಿದ್ದು ಮಾಂಸ ಮಾರುಕಟ್ಟೆ ಹಾಗೂ ಪಟ್ಟಣದ 2 ಮಸೀದಿಗಳು ಅಜಾದ್ ರಸ್ತೆಯಲ್ಲಿ ಇರುವುದರಿಂದ ಪ್ರತಿ ನಿತ್ಯ ಹೆಚ್ಚಿನ ಜನಸಂಖ್ಯೆ ಓಡಾಡುವ ಪ್ರದೇಶವಾಗಿದ್ದು 20 ರಿಂದ 25 ಹೆಚ್ಚು  ಬೀದಿ ನಾಯಿಗಳು ಪ್ರತಿನಿತ್ಯ ಗುಂಪು ಗುಂಪುಗಳಾಗಿ ರಸ್ತೆಯಲ್ಲಿ ಓಡಾಡುತ್ತಾ ಇದ್ದು  ಮಕ್ಕಳು ಟ್ಯೂಷನ್ಸ್ ಶಾಲೆಗಳಿಗೆ ಹೋಗಿ ಬರಲು ಕಷ್ಟಕರವಾಗಿದೆ ಸಾರ್ವಜನಿಕರು ದ್ವಿಚಕ್ರ ವಾಹನಗಳು ಮತ್ತು ಮಸೀದಿಗೆ ಪ್ರಾರ್ಥನೆ ತರಳುವ ವ್ಯಕ್ತಿಗಳಿಗೆ ಬೀದಿ ನಾಯಿಗಳಿಂದ ಭಯ ಬೀತರಾಗಿದ್ದಾರೆ.
ಪಟ್ಟಣದ ಪ್ರದೇಶಗಳಲ್ಲಿ  ಬೀದಿ ನಾಯಿಗಳು  ಹಾವಳಿ ಹೆಚ್ಚಾಗಿದ್ದು ಶಾಲಾ ಮಕ್ಕಳು ಶಾಲೆಗೆ ಹೋಗಿ ಬರಲು ಭಯದಿಂದ ರಸ್ತೆಯಲ್ಲಿ   ಹೋಡಾಡಲು ಕಷ್ಟವಾಗಿದೆ ವೃದ್ದರು ಹಾಗೂ ಸಾರ್ವಜನಿಕರಿಗೆ ದಿನನಿತ್ಯ ಸಂಚರಿಸಲು ಕಷ್ಟಕರವಾಗಿದ್ದು ಇತ್ತೀಚಿನ ದಿನಗಳಲ್ಲಿ ಪಟ್ಟಣದ ಗಫಾರ್ ಖಾನ್ ಮೊಹಲ್ಲಾ ಹಾಗೂ ಜಾಕೀರ್ ಹುಸೇನ್ ಮೊಹಲ್ಲಾ ಬೀದಿ ನಾಯಿಗಳ ಹಾವಳಿಯಿಂದ ಮೇಕೆಗಳಿಗೆ ಕಚ್ಚಿರುವ ಘಟನೆ ನಡೆದಿದೆ ಮೊಹಲ್ಲಾ ಗೃಹವಾಸಿಗಳು ತಮ್ಮ ಮಕ್ಕಳಿಗೆ ಬೀದಿನಾಯಿಗಳ ಹಾವಳಿಯಿಂದ ಆಟವಾಡಲು ಬಿಡುತ್ತಿಲ್ಲ ಪುರಸಭೆ ಅಧಿಕಾರಿಗಳು ಪಟ್ಟಣದ ಸಾರ್ವಜನಿಕರಿಗೆ  ತೊಂದರೆಯಾಗದೆ ರೀತಿಯಲ್ಲಿ  ಪುರಸಭೆ ಅಧಿಕಾರಿಗಳು ಪಟ್ಟಣದ ವಾರ್ಡ್ ಗಳಲ್ಲಿ ಬೇಟಿ ನೀಡಿ ಸಾರ್ವಜನಿಕರ ಕಷ್ಟಗಳು ಹಾಗೂ ಕುಂದು ಕೊರತೆಗಳನ್ನು ಬಗೆಹರಿಸುವ ಜವಾಬ್ದಾರಿ ಪುರಸಭೆ ಅಧಿಕಾರಿಗಳಾಗಿದ್ದು ಇದರ ಬಗ್ಗೆ ವಾರ್ಡಗಳಿಗೆ ಬೇಟಿ ನೀಡದೆ ಅಧಿಕಾರಿಗಳು ಕಛೇರಿಯಲ್ಲಿ ಕುಳಿತು ತಮ್ಮ ಕೆಲಸದಲ್ಲಿ ತೊಡಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡಗಳಲ್ಲಿ ಸಮಸ್ಯೆಗಳ  ಬಗೆಹರಿಸಲು ಅಧಿಕಾರಿಗಳು ಪಟ್ಟಣದ ಪ್ರವಾಸ ಕೈಗೊಳ್ಳಬೇಕು.   ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯಲ್ಲಿ ವಾಸವಿರುವ ನಾಗರೀಕರ ಕಷ್ಟಗಳನ್ನು ಹಗೂ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಪಟ್ಟಣದ ನಿವಾಸಿಗಳ ಕಷ್ಟ ಹಾಗೂ ಸಮಸ್ಯೆ ಬಗೆಹರಿಸಬೇಕು ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು  ಎಚ್ಚಿತಕೊಂಡು ಪಟ್ಟಣದ ನಿವಾಸಿಗಳ ಸಮಸ್ಯೆಗಳು ಬಗೆಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ಶಬ್ಬೀರ್ ಅಹಮದ್ ಶ್ರೀನಿವಾಸಪುರ
 

Read These Next

ಜಲಶಕ್ತಿ ಅಭಿಯಾನವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಲಿ -ಜೆ.ಮಂಜುನಾಥ್

ಇಂದು ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ...

ಜಿಲ್ಲಾಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್  ಖಜಾಂಚಿಯಾಗಿ ವಿಜಯ್, ರಾಜ್ಯಪರಿಷತ್‍ಗೆ ಡಿ.ಸುರೇಶ್‍ಬಾಬು ಆಯ್ಕೆ

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ ಹಾಗೂ ಖಜಾಂಚಿಯಾಗಿ ಕೆ.ವಿಜಯ್, ರಾಜ್ಯಪರಿಷತ್ ಸದಸ್ಯರಾಗಿ ...

 ಟಿಪ್ಪೂ,ಇಕ್ಬಾಲ್,ಆಝಾದ್; ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇರುವ ತ್ರೀರತ್ನಗಳು

ನ,೯,೧೦,೧೧ ಈ ಮೂರು ದಿನಗಳು ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇವರು ತ್ರೀರತ್ನಗಳಾದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್,”ಸಾರೆ ಜಹಾಂ ಸೆ ...