ರಿಯಾದ್: ಸೆ. 12 ರಂದು ಈದ್ ಉಲ್ ಅಧಾ ಮೊದಲ ದಿನ - ಸೌದಿ ಅರೇಬಿಯಾದಲ್ಲಿ ಘೋಷಣೆ

Source: so english | By Arshad Koppa | Published on 3rd September 2016, 9:47 AM | Gulf News |

ರಿಯಾದ್, ಸೆ ೨: ಈ ವರ್ಷದ ಈದ್ ಅಲ್ ಅಧಾ ಹಬ್ಬದ ಮೊದಲ ದಿನ ಸೆ. 12ರಂದು ಬರಲಿದೆ ಎಂದು ಸೌದಿ ಅರೇಬಿಯಾದ ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ. ಆ ಪ್ರಕಾರ ಹಬ್ಬದ ಮುನ್ನಾದಿನ ಅಂದರೆ ಅರಫಾತ್ ನ ದಿನ ಸೆ. 11 ರಂದು ಬರಲಿದೆ. 

ಮುಸ್ಲಿಮರು ಜೀವಮಾನದಲ್ಲಿ ಕನಿಷ್ಟ ಒಂದು ಬಾರಿಯಾದರೂ ಆಚರಿಸಬೇಕಾದ ಹಜ್ ಕರ್ಮವನ್ನು ನಿರ್ವಹಿಸಲು ಮಕ್ಕಾ ನಗರದಲ್ಲಿ ಲಕ್ಷಾಂತರ ಜನರು ಆಗಮಿಸಿ ಅರಫಾತ್ ದಿನದಂದು ನಗರದ ಪಶ್ಚಿಮ ಭಾಗದಲ್ಲಿರುವ ಅರಫಾತ್ ನ ಮೈದಾನ ಮತ್ತು ಅರಫಾತ್ ಬೆಟ್ಟಕ್ಕೆ ಧಾವಿಸುತ್ತಾರೆ. 

ಅರಫಾತ್ ದಿನದಿಂದ ಪ್ರಾರಂಭಿಸಿ ಹಜ್ ಕರ್ಮಗಳು ಒಟ್ಟು ಐದು ದಿನಗಳ ಕಾಲ ನಡೆಯುತ್ತವೆ. 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.