ಶಿಕ್ಷಣಕ್ಕೆ ನೆರವು ನೀಡಿದಾಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಾಧ್ಯ

Source: sonews | By Staff Correspondent | Published on 3rd December 2018, 12:41 AM | State News |

ಕೋಲಾರ: ದೇಶದ ಸರ್ವಾಂಗೀಣ ಪ್ರಗತಿಯು ಪ್ರಾಥಮಿಕ ಶಿಕ್ಷಣದ ಮೇಲೆ ಅವಲಂಭಿತವಾಗಿದೆ. ಇಂತಹ ಶಿಕ್ಷಣಕ್ಕೆ ಹೆಚ್ಚು ನೆರವು, ಪ್ರೋತ್ಸಾಹ ನೀಡಿದಾಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಾಧ್ಯ ಎಂದು ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಗೌಡ ಅಭಿಪ್ರಾಯಪಟ್ಟರು.
    
ನಗರದ ಪಿಸಿ ಬಡಾವಣೆ ಶಾಲೆಗೆ ಇಂದು ಸ್ಯಾಮ್‍ಸಂಗ್ ಕಂಪನಿಯವರು ನಲಿಕಲಿ ಕೊಠಡಿಗೆ ನೀಡಿದ ಚೇರ್ ಟೇಬಲ್, ಪಾಠೋಪಕರಣಗಳನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
    
ವಿದ್ಯಾರ್ಥಿಗಳು ಆನಂದದಿಂದ ಕಲಿಕೆ ಪ್ರಕ್ರಿಯೆಯಲ್ಲಿ ತೊಡಗಬೇಕಗಿರುವುದರಿಂದ ಅವರಿಗೆ ಅಗತ್ಯ ಪರಿಕರಗಳನ್ನು ಒದಗಿಸುವಲ್ಲಿ ದಾನಿಗಳ ನೆರವು ಸುತ್ಯಾರ್ಹವಾಗಿದ್ದು, ಈಗಾಗಲೇ ತಾಲ್ಲೂಕಿನಲ್ಲಿರುವ ಶಾಲೆಗಳನ್ನು ಸ್ಯಾಮ್‍ಸಂಗ್ ಕಂಪನಿಯವರು ನೀಡಿರುವ ಸೇವೆ ಪ್ರಶಂಶನೀಯವಾಗಿದೆ ಎಂದರು.
    
ವಿದ್ಯಾರ್ಥಿ, ಶಿಕ್ಷಕರ ನಡುವಿನ ಬೊಧನೆ ಫಲಪ್ರದವಾಗಬೇಕಾದರೆ ಶಾಲೆ ಸ್ವಚ್ಚ ಸುಂದರ ಆಗಬೇಕು. ಇದರೊಂದಿಗೆ ಕಲಿಕಾ ವಾತಾವರಣ ನಿರ್ಮಿಸಲು ಬೋದನೋಪಕರಣಗಳ ಜೊತೆ ಅಗತ್ಯ ಪರಿಕರಗಳನ್ನು ನೀಡಿದರೆ ವಿದ್ಯಾರ್ಥಿ ಕಲಿಕೆಯ ಕಡೆ ಹೆಚ್ಚು ಆಸಕ್ತಿ ವಹಿಸುತ್ತಾನೆ ಎಂದರು.
    
ಶಾಲೆಗೆ ಅಗತ್ಯವಿರುವ ನೆಲಹಾಸು, ಸುಣ್ಣ ಬಣ್ಣ, ಪೀಠೋಪಕರಣಗಳನ್ನು ನೀಡಿದ ಸ್ಯಾಮಸಂಗ್ ಕಂಪನಿಯ ಸಹ ವ್ಯವಸ್ಥಾಪಕ ರವಿಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಕಲಿಯನ್ನು ತಮ್ಮ ಗುರಿಯನ್ನಾಗಿಸಿಕೊಂಡು ಬೆಳೆಯಬೇಕು. ತಂದೆ, ತಾಯಿ, ಶಿಕ್ಷಕರ ಪ್ರೀತಿಪಾತ್ರರಾದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ನೂರು ಶಾಲೆಗಳ ನಲಿಕಲಿ ತರಗತಿಗಳಿಗೆ ಅಗತ್ಯ ನೆರವು ನೀಡುವುದುಆಗಿ ಪ್ರಕಟಿಸಿದರು.
    
ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಮಾತನಾಡಿ ವಿದ್ಯಾರ್ಥಿಗಳು ಖಾಸಗೀ ಶಾಲೆಗಳ ವ್ಯಾಮೋಹದಿಂದ ದೂರವಾಗಬೇಕಾದರೆ ಸರ್ಕಾರಿ ಶಾಲೆಗಳಲ್ಲಿ ಈಗಿರುವ ಶಿಕ್ಷಣದ ಜೊತೆಗೆ ಕಲಿಕಾ ವಾತಾವರಣ ನಿರ್ಮಿಸುವ ದಾನಿಗಳ ನೆರವು ಅಗತ್ಯವಿದೆ ಎಂದರು.
    
ಜಿಲ್ಲಾ ಪ್ರಾಥಮಿಕ ಮುಖ್ಯೋಪಾದ್ಯಾಯರ ಸಂಘದ ಅದ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ಸರ್ಕಾರಿ ಶಾಲೆಗಳು ಯಾವುದೇ ಖಾಸಗೀ ಶಾಲೆಗಳಿಗಿಂತ ಕಡಿಮೆ ಇಲ್ಲ. ಗುಣಮಟ್ಟದ ಶಿಕ್ಷಣ ಇಲ್ಲಿ ಸಿಗುತ್ತದೆ, ಮಹಾನ್ ವ್ಯಕ್ತಿಗಳೆಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದಿದವರು ಎಂದರು.
    
ಸ್ಯಾಮ್‍ಸಂಗ್ ಕಂಪನಿಯ  ಇರ್ಷದ್ ಅಹ್ಮದ್, ಸುಖ್‍ಮೀತ್‍ಸಿಂಗ್, ಸುಹಾಸ್, ಶಿಕ್ಷಣ ಸಂಯೋಜಕ ವೆಂಕಟಾಚಲಪತಿ, ಸಿ.ಆರ್.ಪಿ. ಮಂಜುನಾಥ್, ಶಿಕ್ಷಕ ಗೆಳೆಯರ ಬಳಗದ ಕಾರ್ಯದರ್ಶಿ ವೀರಣ್ಣಗೌಡ, ಅಧ್ಯಕ್ಷ ನಾರಾಯಣಸ್ವಾಮಿ, ಖಜಾಂಚಿ ಚಂದ್ರಪ್ಪ, ಮುಖ್ಯೋಪಾದ್ಯಾಯರಾದ ಪ್ರಭಾವತಿ, ವೆಂಕಟಲಕ್ಷ್ಮಮ್ಮ ಮತ್ತಿತರರು ಉಪಸ್ಥಿತರದಿರು. ದಾನಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
                                    

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...