ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

Source: SOnews | By Staff Correspondent | Published on 17th April 2024, 8:12 PM | State News |

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ಮತ್ತು ಇನ್ನೊಂದು ಕಡೆ "ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಹಾಳು ಮಾಡಲು" ಬಿಜೆಪಿ ಹೋರಾಟ ನಡೆಸುತ್ತಿದೆ. ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ ನೀಡಿದರು.

ತಾಲೂಕಿನ ಚೊಕ್ಕಂಡಹಳ್ಳಿ ಗೇಟ್ ನಲ್ಲಿ  ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ 2 ಯಾತ್ರೆಯಲ್ಲಿ  ಮಾತನಾಡಿದ ರಾಹುಲ್ ಗಾಂಧಿ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ರಾಹುಲ್ ಗಾಂಧಿ, ಕರ್ನಾಟಕದ ಜನತೆಗೆ ನನ್ನ ನಮಸ್ಕಾರಗಳು ಎಂದರು. ನಾನು ಚಿಕ್ಕವನಿದ್ದಾಗ ನನ್ನ ಅಜ್ಜಿಯ ಜೊತೆಗೆ KGF ಚಿನ್ನದ ಗಣಿಗೆ ಬಂದಿದ್ದೆ. ನಾನು ಬಂದಾಗ ಗಣಿಯ ಸುರಂಗದೊಳಗೆ ಬಿಸಿಯಲ್ಲಿ ಕಾರ್ಮಿಕರು ಕೆಲಸ ಮಾಡುವುದನ್ನ ನೋಡಿದ್ದೆ. ನಾನು ನೋಡಿದ್ದಾಗ ಅಲ್ಲೊಂದು ಚಿನ್ನದ ಇಟ್ಟಿಗೆಯಿತ್ತು. ದೇಶಕ್ಕೆ ಚಿನ್ನ ಕೊಟ್ಟ ಕೋಲಾರ, ಈಗ ಕೃಷಿಯ ಮೂಲಕ ರಾಜ್ಯಕ್ಕೆ ಕೊಡುಗೆ ನೀಡ್ತಿದ್ದೀರಿ ಎಂದು ಬಾಲ್ಯದ ನೆನಪುಗಳನ್ನು ಹಂಚಿಕೊಂಡರು.

ನಾನು ನನ್ನ ಅಜ್ಜಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಮೂಲಕ ರಾಜಕೀಯ ಕಲಿತೆ, ನಾನು ಅವರನ್ನ ನೋಡಿ ಸಾಕಷ್ಟು ಕಲಿತಿದ್ದೇನೆ. ರಾಜಕಾರಣ ಮಾಡಲು ಸಾಕಷ್ಟು ಲೆಕ್ಕಾಚಾರ ಮಾಡಬೇಕು ಎಂದು ಸಾಕಷ್ಟು ಮಂದಿ ತಿಳಿದಿದ್ದಾರೆ. ಆದರೆ ನಮ್ಮ ಅಜ್ಜಿ ಹೇಳಿದ ಪಾಠದಲ್ಲಿ ಅದೇ‌ನು ಇರಲಿಲ್ಲ. ಒಬ್ಬ ನಾಯಕಿಗೆ ಒಂದು ಜವಾಬ್ದಾರಿ ಇರಬೇಕು, ನಾಯಕ ಸಮಾಜದಲ್ಲಿನ ತಾರತಮ್ಯ ಬೆಳಕಿಗೆ ತರಬೇಕು.

ನಾಯಕನಾದವರು ತಾರತಮ್ಯ ನಿರ್ಮೂಲನೆ ಮಾಡಬೇಕು. ನನ್ನ ಅಜ್ಜಿ ಹೇಳಿದ ಪಾಠಗಳಲ್ಲಿ ಇದೇ ಮುಖ್ಯವಾದದ್ದು ಎಂದರು. ಸಮಾಜದಲ್ಲಿನ ಹುಳುಕು ಹೇಳಿದರೆ, ಈಗ ಹಲ್ಲೆಗಳಾಗುತ್ತಿದೆ. ಆದರೆ ನೀವ್ಯಾರು ಭಯ ಭೀಳುವ ಅಗತ್ಯವಿಲ್ಲ ಎಂದು ಹೇಳಿದರು.

ಕೇಂದ್ರದ ವಿರುದ್ಧ ವಾಗ್ದಾಳಿ ಇದೇ ರಾಜಕೀಯದಲ್ಲಿ, ಸಾಮಾನ್ಯ ಜೀವನದಲ್ಲಿ ಎಲ್ಲರು ರೂಡಿಸಬೇಕು. ದೆಹಲಿಯಲ್ಲಿರೊ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ದೇಶದಲ್ಲಿನ 25 ಬಂಡವಾಳ ಶಾಹಿಗಳಿಗೆ 16 ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದಾರೆ. ಸಾಮಾನ್ಯರಿಗೆ ಇದೊಂದು ದೊಡ್ಡ ಸಂಖ್ಯೆ ಎನಿಸಬಹುದು. ದೇಶದಲ್ಲಿ ಕೋಟ್ಯಾಂತರ ರೈತರಿದ್ದಾರೆ, ರೈತರ ಕಷ್ಟ ಯಾರೂ ಆಲಿಸುತ್ತಿಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಅದಾ‌ನಿ ಎಲ್ಲೇ ಭೂಮಿ ಬಯಸಿದರು, ಆ ಭೂಮಿಯನ್ನ ನರೇಂದ್ರ ಮೋದಿಯವರು ಕೊಡಿಸ್ತಾರೆ. ಮುಂಬೈ ಏರ್ಪೋರ್ಟ್ ಬೇಕಂದು ಅದಾ‌ನಿ ಹೇಳಿದ್ರೆ, ಮೋದಿಯವರು ಕೊಡಿಸ್ತಾರೆ. ದೇಶದಲ್ಲಿನ 15% ಜನರು ದಲಿತರಾಗಿದ್ದಾರೆ, , 15% ಅಲ್ಪಸಂಖ್ಯಾತರಿದ್ದಾರೆ. ಯಾವ ಮಾದ್ಯಮಗಳು ಬೆಲೆ ಏರಿಕೆ, ನಿರುದ್ಯೋಗ ಕುರಿತು ಮಾತನಾಡುತ್ತಿಲ್ಲ. ಇದು ನನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಅಧಿಕಾರದ ಹಂಚಿಕೆಯಲ್ಲೂ ಅನ್ಯಾಯ
ಉದ್ಯಮಗಳ ಪಟ್ಟಿಯಲ್ಲು ತಾರತಮ್ಯ ಇದೆ, ದಲಿತರಿಲ್ಲ, ಹಿಂದುಳಿದ ವರ್ಗದ ಜನರಿಲ್ಲ. ಅಧಿಕಾರದ ಹಂಚಿಕೆಯಲ್ಲೂ ದಲಿತ, ಹಿಂದುಳಿದ ವರ್ಗದವರಿಗೆ ಅನ್ಯಾಯ ಆಗುತ್ತಿದೆ. ಶೇ.90ರಷ್ಟು ದೇಶದ ಜನತೆಗೆ ಬಜೆಟ್ ನಲ್ಲಿ ಭಾಗಿಯಾಗುವ ಅವಕಾಶ ಇಲ್ಲ. ಶೇ.95 ಭಾಗದ ಭಾರತದ ಜನರಿಗೆ ಯಾವುದರಲ್ಲು ಪಾಲಿಲ್ಲ ಎಂದರು.

ಕರ್ನಾಟಕ ರಾಜ್ಯದ ಸರ್ಕಾರ ಜ‌ನಪರ ಆಡಳಿತ ನೀಡುತ್ತಿದೆ. ರಾಜ್ಯದ 5 ಗ್ಯಾರೆಂಟಿ ಗಳು ಜನರಿಗೆ ಬಹಳಷ್ಟು ಸಹಕಾರಿಯಾಗಿದೆ. ಮಹಿಳೆಯರಿಗೆ ನೀಡಿರುವ ಶಕ್ತಿ ಯೋಜನೆ ಬಹಳ ಸಹಕಾರಿಯಾಗಿದೆ. ಆದ್ದರಿಂದಲೇ ದೆಹಲಿ ಸರ್ಕಾರದಲ್ಲು ಗ್ಯಾರೆಂಟಿ ಯೋಜನೆ ಮಾಡುತ್ತೇವೆ. ನಾವು ದೇಶದ ಎಲ್ಲಾ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡುತ್ತೇವೆ. ನಾವು ಎಲ್ಲಾ ರೈತರ ಸಾಲಮನ್ನಾ ಮಾಡ್ತೇವೆ ಎಂದು ಭರವಸೆ ನೀಡಿದರು.


ಈ ಬಾರಿ ಬಿಜೆಪಿಯನ್ನು ಸೋಲಿಸಿದಾಗ ಮಾತ್ರ 2024 ರ ಲೋಕಸಭಾ ಚುನಾವಣೆಗೆ ಮಹತ್ವ ಬರುತ್ತದೆ. ಮೋದಿ ಅವರು ಎಲ್ಲಿ ಹೋದರು ಕಾಂಗ್ರೆಸ್ ಅನ್ನು ಬೈಯ್ಯುವ ಭಾಷಣ ಮಾಡುತ್ತಿದ್ದಾರೆ. ಕಳೆದ ಭಾನುವಾ ಮೈಸೂರಿನಲ್ಲಿ ಮೋದಿ ಅವರು 30 ನಿಮಿಷ ಭಾಷಣ ಮಾಡಿದರು. ಆದರಲ್ಲಿ 5 ನಿಮಿಷ ಮಾತ್ರ ಅವರು ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. 

ಮಿಕ್ಕ 20 ನಿಮಿಷವನ್ನು ಕಾಂಗ್ರೆಸ್ ಬೈಯ್ಯುವುದಕ್ಕೆ ಮೀಸಲಿಟ್ಟರು. ಇದೇ ಮೋದಿ ಅವರ ಕೊಡುಗೆ ಎಂಬುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
 
ಎ ಐ ಸಿ ಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡಿ ಅವರು, ಮೋದಿ ಅವರು ಈ ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಮೊದಲು ಹೇಳಬೇಕು. ಬಿಜೆಪಿಯವರು ಮನೆ ಬಾಗಿಲಿಗೆ ಬಂದಾಗ ಜನ ಪ್ರಶ್ನೆ ಮಾಡಬೇಕು. ಬರ ಬಂದಾಗ, ನೆರೆ ಬಂದಾಗ, ತೆರಿಗೆ ಹಣ ಎಷ್ಟು ಕೊಟ್ಟಿದ್ದೀರಿ ಎಂದು ಕೇಳಬೇಕು ಎಂದರು.

ಅನೇಕ ಅಂಕಿ- ಅಂಶಗಳನ್ನು ಸಿದ್ದರಾಮಯ್ಯ ಅವರು, ಸಚಿವ ಕೃಷ್ಣಬೈರೇಗೌಡರು, ಶಿವಕುಮಾರ್ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಎದುರು ಇಟ್ಟಿದ್ದರು. ಅವರು ಒಂದೇ ಒಂದು ಪ್ರಶ್ನೆಗೆ ಉತ್ತರ ನೀಡಿಲ್ಲ. ಇಂತಹ ಕೆಟ್ಟ ಸರ್ಕಾರವನ್ನು ಕಿತ್ತು ಬಿಸಾಕಬೇಕು. ನಿಮ್ಮ ದನಿಗೆ ಅವರು ಹೆದರಿ ಓಡಿ ಹೋಗಬೇಕು.

ಕಾಂಗ್ರೆಸ್ ಈ ದೇಶಕ್ಕೆ ಸಾಕಷ್ಟು ಹೆಸರು ಮಾಡಿದೆ. ಕೋಲಾರ ಎಂದರೆ ಮಿಲ್ಕ್ ಮತ್ತು ಸಿಲ್ಕ್ಗೆ ಪ್ರಸಿದ್ದಿಯಾಗಿದೆ. ಕಾಂಗ್ರೆಸ್ ಸರ್ಕಾರದ ಫಲದಿಂದ ಕೋಲಾರದ ಕೆರೆಗಳು ತುಂಬಿ ತುಳುಕುತ್ತಿವೆ

ಸುಳ್ಳು ಹೇಳುವುದೇ ಮೋದಿ ಅವರ ಕೆಲಸ. ಈಗ ನಮ್ಮಿಂದ ಗ್ಯಾರಂಟಿಗಳನ್ನು ಕದ್ದಿದ್ದಾರೆ. ಎಲ್ಲಿ ಹೋದರೂ ಮೋದಿ ಗ್ಯಾರಂಟಿ ಎಂದು ಜಪ ಮಾಡುತ್ತಿದ್ದಾರೆ. ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡಬೇಕಾಗಿತ್ತು. 10 ವರ್ಷದಲ್ಲಿ 20 ಕೋಟಿ ಕೊಡಬೇಕಾಗಿತ್ತು. 15 ಲಕ್ಷ ಕೊಡುತ್ತೇವೆ ಎಂದು ಹೇಳಿದರು. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು. ಅವರು ಸುಳ್ಳು ಹೇಳುತ್ತಿದ್ದಾರೋ ಅಥವಾ ಜನ ಅವರಿಂದ ತೆಗೆದುಕೊಂಡು ಸುಳ್ಳು ಹೇಳುತ್ತಿದ್ದಾರೋ ನೀವೇ ಹೇಳಬೇಕು.

ಮೋದಿ ಸುಳ್ಳಿನ ಸರದಾರ. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ನಮ್ಮ ಗ್ಯಾರಂಟಿಗಳು ಯಶಸ್ವಿಯಾಗಿದ್ದನ್ನು ನೋಡಿ ದೇಶದ ಗಲ್ಲಿ, ಗಲ್ಲಿಗಳಲ್ಲಿ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಅನೇಕರು ಹೇಳುತ್ತಾರೆ ಮೋದಿ ಹೆಸರು ತೆಗೆದುಕೊಳ್ಳಬೇಡಿ ಎಂದು. ಆದರೆ ಆ ವ್ಯಕ್ತಿ ಎಲ್ಲಾ ಕೆಲಸಗಳನ್ನು ನಾನೇ ಮಾಡಿದ್ದೇನೆ ಎಂದು ಓಡಾಡುತ್ತಾನೆ. ಆದ ಕಾರಣ ಅವರ ಹೆಸರು ತೆಗೆದುಕೊಳ್ಳಲೇಬೇಕು.

ಬೆಲೆಏರಿಕೆ ಆಗುತ್ತಿದೆ ಆ ಸಮಸ್ಯೆ ಬಗ್ಗೆ ಮೋದಿ ನೋಡುತ್ತಿಲ್ಲ. ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಬೇಕು. ಯುವಕರಿಗೆ ಉದ್ಯೋಗ ಕೊಡಬೇಕು, ಮಹಿಳೆಯರಿಗೆ ಶಕ್ತಿ ಕೊಡಬೇಕು. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 5 ನ್ಯಾಯಗಳು, 25 ಗ್ಯಾರಂಟಿಗಳನ್ನು ಕೊಟ್ಟೇಕೊಡುತ್ತೇವೆ. ಗ್ಯಾರಂಟಿ ಅನುಷ್ಠಾನಕ್ಕಾಗಿ ಜನರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡುತ್ತೇನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಬಿಜೆಪಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. 28 ಕ್ಕೆ 28 ಗೆಲ್ತಿವಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಇವತ್ತಿನವರೆಗೆ ಹೊಂದಾಣಿಕೆ ಇರಲಿಲ್ಲ, ಈ‌ಬಾರಿ ಬಿಜೆಪಿ ಅವರಿಗೆ ಸೋಲುವ ಭಯದಿಂದ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. 

ಜೆಡಿಎಸ್ ಮೂರು ಸೀಟು ತೆಗೆದುಕೊಂಡಿದ್ದಾರೆ. ಉಳಿದ ಕಡೆ ಬಿಜೆಪಿಯವರು ಸ್ಪರ್ದೆ ಮಾಡಿದಾರೆ. ಇಷ್ಟು ಜನ ಕೋಲಾರದಲ್ಲಿ ಸೇರಿರುವುದು ನೋಡಿದ್ರೆ.  ಕೋಲಾರದ ಜನ ಕಾಂಗ್ರೇಸಿಗೆ ಆಶೀರ್ವಾದ ಮಾಡುವುದಕ್ಕೆ ಸೇರಿದ್ದೀರಿ ಹೀಗಾಗಿ ನೂರಕ್ಕೆ ನೂರು ಕಾಂಗ್ರೇಸ್ ಅಭ್ಯರ್ಥಿ ಗೆಲ್ಲುತ್ತಾರೆ.

ರಾಜ್ಯದಲ್ಲಿ ಕಾಂಗ್ರೇಸ್ 20 ಸ್ಥಾನಗಳನ್ನ ಚುನಾವಣೆಯಲ್ಲಿ ಗೆಲ್ಲುತ್ತದೆ.ಬಿಜೆಪಿ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ದೇವೇಗೌಡ ಕುಮಾರಸ್ವಾಮಿ‌ ಮೊನ್ನೆಯವರೆಗೂ ಬಿಜೆಪಿಯನ್ನ ಟೀಕಿಸುತ್ತಿದ್ರು. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವೆ ಎಂದು ಹೇಳ್ತಿದ್ರು. ಮೋದಿ ಪ್ರಧಾನಿ ಅದರೆ ದೇಶನೇ ಬಿಡುವೆ ಎಂದು ಹೇಳಿದ್ರು ಈಗ ಅವರೊಂದಿಗೆ ಸೇರಿ ಬಾಯಿ ಬಾಯಿ ಎಂದು ಹೇಳ್ತಿದಾರೆ ಜೊತೆಗೆ ಮೋದಿ ಅವರನ್ನ ಬಹಳಷ್ಟು ಹೊಗಳೊಕೆ ಶುರುಮಾಡಿದಾರೆ. 

ಚುನಾವಣೆ ಆದ ಮೇಲೆ ಕಾಂಗ್ರೇಸ್ ಸರ್ಕಾರ ಪತನ ಆಗುತ್ತೆ ಎಂದಿದ್ದಾರೆ ಅವರು ಭ್ರಮೆಯಲ್ಲಿ ಇದಾರೆಕಾಂಗ್ರೇಸ್ ಐದು ವರ್ಷ ಪೂರೈಸುತ್ತದೆ‌ಪತನ ಆಗುವುದು ಭ್ರಮೆ ದೇವೇಗೌಡರು ಇನ್ನೊಂದು ಮಾತೆಳ್ತಾರೆ ಜನತಾ ದಳ ಸೆಕ್ಯೂಲರ್ ಇಟ್ಟುಕೊಂಡಿದ್ದೀರಿ ಅದನ್ನ ತೆಗೆದು ಹಾಕಿ ಎಂದು ನಾನು ಹೇಳ್ದೆ ಅದಕ್ಕೆ ಸಿದ್ದರಾಮಯ್ಯ ಅವರಿಗೆ ಗರ್ವ ಬಂದಿದೆ ಗರ್ವ ಭಂಗ ಮಾಡಿ ಎಂದು ದೇವೇಗೌಡರು ಹೇಳ್ತಾರೆ 165 ಭರವಸೆಗಳನ್ನ 158 ಭರವಸೆಗಳನ್ನ ನಾನು ಇಡೇರಿಸಿದ್ದೇನೆ ಬಿಜೆಪಿ ಅವರು 600 ಭರವಸೆಗಳಲ್ಲಿ 60 ಭರವಸೆಗಳನ್ನ ಈಡೇರಿಸಲಿಲ್ಲ ಎಂದರು.

ಉಪ ಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್ ಮಾತನಾಡಿ ಕೋಲಾರದ ಕಾಂಗ್ರೆಸ್ ಅಭ್ಯರ್ಥಿಯನ್ನ ಕೊಟ್ಟಿದ್ದೇವೆ. ಆ ಅಭ್ಯರ್ಥಿಗೆ ನೀವು ಆಶೀರ್ವಾದ ಮಾಡಬೇಕು
ಕೋಲಾರ ಕಾಂಗ್ರೇಸ್ ನ ಭದ್ರಕೋಟೆ‌ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿರುವುದಕ್ಕೆ ನೀವೆಲ್ಲಾ ಸೇರಿ ಉತ್ತರ ನೀಡಬೇಕು ಎಂದರು.

 ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವರಾದ ಕೆ.ಹೆಚ್ ಮುನಿಯಪ್ಪ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಸುಧಾಕರ್, ಶಾಸಕರಾದ ಕೆ.ವೈ.ನಂಜೇಗೌಡ ಎಸ್.ಎನ್.ನಾರಾಯಣಸ್ವಾಮಿ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಕೆಜಿಎಫ್ ಶಾಸಕಿ ರೂಪ ಶಶಿಧರ್, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿ ಪ್ರಸಾದ್, ಮಾಜಿ ಸಚಿವ ರಮೇಶ್ ಕುಮಾರ್, ನಾಸಿರ್ ಹುಸೇನ್, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್, ನಜೀರ್ ಅಹ್ಮದ್, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಖ್ಯಾತ ಸಂಗೀತ ನಿರ್ದೇಶಕ ಸಾಧು ಕೋಕಿಲಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಿ ನಾರಾಯಣ್, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ರತ್ನಮ್ಮ ನಂಜೇಗೌಡ, ಕೆಪಿಸಿಸಿ ಸದಸ್ಯರಾದ ಪ್ರದೀಪ್ ರೆಡ್ಡಿ, ಅಂಜನಿ ಸೋಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಧುಸೂದನ್, ಮಾಸ್ತಿ ಬ್ಲಾಕ್ ಅಧ್ಯಕ್ಷರಾದ ವಿಜಯನರಸಿಂಹ, ಎಸ್ಸಿ ಬ್ಲಾಕ್ ಅಧ್ಯಕ್ಷರಾದ ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...

ಹನೂರು: ಇಂಡಿಗನ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ ತಹಶೀಲ್ದಾರ್, ಇನ್‌ಸ್ಪೆಕ್ಟರ್, ಚುನಾವಣಾಧಿಕಾರಿ ಸಹಿತ ಹಲವರಿಗೆ ಗಾಯ

ಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಮೆಂದಾರೆ ಮತಗಟ್ಟೆ ಬಳಿ ಮತದಾನ ನಡೆಯುವ ಬದಲು ರಣರಂಗವಾಗಿ ಮಾರ್ಪಟ್ಟು ಮತಗಟ್ಟೆ ಸಂಪೂರ್ಣ ...