ದುಬೈ:ಅ 21ರಂದು  "ಏಕರೂಪ ನಾಗರಿಕ ಸಂಹಿತೆ" ಕಾನೂನನ್ನು ಜಾರಿಗೊಳಿಸುವ ವಿಫಲ ಪ್ರಯತ್ನದ ವಿರುದ್ದ ಪ್ರತಿಭಟನಾ ಸಭೆ

Source: kcf dubai | By Arshad Koppa | Published on 21st October 2016, 10:39 AM | Gulf News |

ದುಬೈ, ಅ ೨೧: ಜಾತ್ಯಾತೀತ ರಾಷ್ಟ್ರ ಭಾರತದಲ್ಲಿ ವಾಸಿಸುವ ಯಾವುದೇ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದು ಕೊಳ್ಳಲು ಯಾವ ವ್ಯಕ್ತಿಗೂ, ಸರ್ಕಾರಕ್ಕೂ ಹಕ್ಕಿಲ್ಲ. ವ್ಯಕ್ತಿ ಸ್ವಾತಂತ್ರ್ಯಕ್ಕೂ, ಧಾರ್ಮಿಕ ಸ್ವಾತಂತ್ರ್ಯಕ್ಕೂ ಭಾರತದ ಲಿಖಿತ ಸಂವಿಧಾನ ಪ್ರಾಧಾನ್ಯತೆಯನ್ನು ನೀಡಿದೆ. ಭಾರತದಲ್ಲಿರುವ ಪ್ರತಿಯೊಂದು ಧರ್ಮದವರು ಅವರವರ ಧಾರ್ಮಿಕ ಆಚಾರ ವಿಚಾರಗಳನ್ನು ದೇಶದ ಸಂವಿಧಾನಕ್ಕೆ ಬದ್ಧನಾಗಿ ಆಚರಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ ಇತ್ತೀಚೆಗೆ "ಏಕರೂಪ ನಾಗರಿಕ ಸಂಹಿತೆ" ಎಂಬ ಕಾನೂನನ್ನು ಭಾರತದಲ್ಲಿ ಜಾರಿಗೊಳಿಸುವ ವಿಫಲ ಪ್ರಯತ್ನ ನಡೆಸುತ್ತಿರುವ ಕೋಮು ಶಕ್ತಿಯ ವಿರುದ್ಧ ಹೋರಾಡುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ.


ಅದೇ ರೀತಿ "ತಲಾಕ್" ಎಂಬ ಇಸ್ಲಾಮಿನ ವಿವಾಹ ವಿಚ್ಚೇದನ ವಿಷಯಕ್ಕೆ ಮೂಗು ತೂರಿಸಿ ಅಲ್ಪಸಂಖ್ಯಾತರನ್ನು ಕೆರಳಿಸುವಂತೆ ಮಾಡುವ ಪ್ರಯತ್ನಕ್ಕೆ ಯಾರೂ ಸಹಮತ ಸೂಚಿಸಬಾರದು. ಪ್ರತಿಯೊಂದು ಧರ್ಮದ ಧಾರ್ಮಿಕ ಆಚಾರ ವಿಚಾರಗಳು ಆಯಾ ಧರ್ಮಾನುಯಾಯಿಗಳು ನೆರವೇರಿಸಲಿ. ಅದನ್ನು ಹೊರತು ಧಾರ್ಮಿಕ ಭಾವನೆಗೆ ಮಸಿ ಬಳಿಯುವ ಕೃತ್ಯ ಭಾರತ ದೇಶಕ್ಕೆ ನಾಚಿಕೆಗೇಡು. ಪ್ರತಿಯೊಂದು ಧರ್ಮದವರು ಅವರವರ ಧರ್ಮದ ಆಚಾರಗಳನ್ನು ಆಚರಿಸುವಾಗ ಭಾರತದ ಸಂವಿಧಾನಕ್ಕೆ ಬದ್ಧವಾಗಿಯೇ ಆಚರಿಸುತ್ತಾರೆ ಹೊರತು ಇತರ ಧರ್ಮಾನುಯಾಯಿಗಳನ್ನು ಕೆರಳಿಸುವ ಕಾರ್ಯ ಭಾರತದಲ್ಲಿ ನಡೆಯುತ್ತಿಲ್ಲ.


ಈ ನಿಟ್ಟಿನಲ್ಲಿ ಅನಿವಾಸಿ ಕನ್ನಡಿಗರ ಒಕ್ಕೂಟ ಕರ್ನಾಟಕ ಕಲ್ಚರಲ್ ಫೌಂಡೇಷನ್ (KCF) ತಲಾಕ್ ಹಾಗೂ ಏಕರೂಪ ನಾಗರಿಕ ಸಂಹಿತೆ ಎಂಬ ವಿಷಯದಲ್ಲಿ ಚರ್ಚಾಗೋಷ್ಠಿಯನ್ನು ಪ್ರತಿಯೊಂದು ರಾಷ್ಟ್ರಗಳಲ್ಲಿ ಹಮ್ಮಿಕೊಂಡಿದೆ.


ಆ ಪ್ರಯುಕ್ತ ದಿನಾಂಕ 21-10-2016  ರಂದು ಶುಕ್ರವಾರ ಸಂಜೆ ದುಬೈಯ PEARL GREEK HOTELನಲ್ಲಿ ಚರ್ಚಾ ಗೋಷ್ಠಿಯನ್ನು ಹಮ್ಮಿಕೊಂಡಿದ್ದು ಗೋಷ್ಟಿಯಲ್ಲಿ ಕರ್ನಾಟಕ SSF ರಾಜ್ಯಾಧ್ಯಕ್ಷರೂ, ವಕ್ಫ್ ಬೋರ್ಡ್ ಡೈರೆಕ್ಟರ್ ಆಫ್ ಕರ್ನಾಟಕ ಮೌಲಾನ NKM ಶಾಫಿ ಸಅದಿ ಯವರು ವಿಷಯ ಮಂಡಿಸಲಿದ್ದಾರೆ.


ಪ್ರಸ್ತುತ ವಿಚಾರ ಘೋಷ್ಠಿಯಲ್ಲಿ ವಿವಿಧ ಧರ್ಮಗಳ ಚಿಂತಕರು, ಲೇಖಕರು ಪಾಲ್ಗೊಳ್ಳಲಿದ್ದಾರೆ. ನಾಳೆ KCF ಯು ಎ ಇ ರಾಷ್ಟ್ರೀಯ ಸಮಿತಿ ವತಿಯಿಂದ ನಡೆಸಲ್ಪಡುವ ಸದ್ರಿ ವಿಚಾರ ಗೋಷ್ಠಿಯಲ್ಲಿ ಯು ಎ ಇ ಯ ವಿವಿಧ ಎಮಿರೇಟ್ಸ್ ಗಳ KCF ನೇತಾರರೂ ಧಾರ್ಮಿಕ ಮುಂದಾಳುಗಳೂ ಇತರ ಸಂಪನ್ಮೂಲ ವ್ಯಕ್ತಿಗಳೂ ಪಾಲ್ಗೊಳ್ಳಲಿದ್ದಾರೆ.
ಆಯ್ದ ಪ್ರತಿನಿಧಿಗಳಿಗೆ ಮಾತ್ರ ಆಹ್ವಾನವನ್ನು ನೀಡಲಾಗಿದೆ.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.