ದುಬೈ :ಕೆಸಿಎಫ್ ದುಬೈ ಅಧ್ಯಕ್ಷರಿಂದ ಕೇಂದ್ರ ಸಚಿವರ ಭೇಟಿ, ಅನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಲು ಮನವಿ ಸಲ್ಲಿಕೆ

Source: kcf | By Arshad Koppa | Published on 15th January 2017, 9:28 PM | Gulf News |

ದುಬೈ, ಜ ೧೫ : ಭಾರತೀಯ ವಿದೇಶಾಂಗ ಸಚಿವಾಲಯದ ವತಿಯಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ  ನಡೆದ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ಸಮಿತಿಯ ಪ್ರತಿನಿಧಿಯಾಗಿ ಭಾಗವಹಿಸಿದ್ದ ದುಬೈ ಝೋನ್ ಅಧ್ಯಕ್ಷರಾದ ಮಹಬೂಬ್ ಸಖಾಫಿ ಕಿನ್ಯರವರು ಕೇಂದ್ರ ವಿದೇಶಾಂಗ ಸಚಿವಾಲಯದ ಸಹಾಯಕ ಸಚಿವರಾದ ಶ್ರೀ ವಿ ಕೆ ಸಿಂಗ್ ರವರನ್ನು ಭೇಟಿಮಾಡಿ ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಲು ಮನವಿಯನ್ನು ಸಲ್ಲಿಸಲಾಯಿತು. 

ಗಲ್ಫ್ ನಲ್ಲಿರುನ ಅನಿವಾಸಿಗಳು ಹಲವು ಸಂಕಷ್ಟಗಳನ್ನು ಅನುಭವಿಸುತ್ತಿದ್ದು, ಉದ್ಯೋಗ ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ, ಈ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಮತ್ತು ಕಾನೂನಿನ ಮೂಲಕ ಸಹಾಯ ಮಾಡುವ ಪ್ರಯುಕ್ತ  ಒಂದು ಸಹಾಯ ಕೇಂದ್ರ ಸ್ಥಾಪಿಸುವುದು, ಅನಿವಾಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಬೇಕಾಗಿ ಪ್ರತ್ಯೇಕ ಸ್ಥಾನಮಾನ ದೊರಕಿಸುವುದು, ಮತದಾನದ ಹಕ್ಕು, ಸೀಸನಲ್ ವಿಮಾನ ಯಾತ್ರಾ ದರದಲ್ಲಿ ಉಂಟಾಗುವ ಹೆಚ್ಚಳವನ್ನು ನಿಯಂತ್ರಿಸುವುದು, ಗಲ್ಫ್ ಕನ್ನಡಿಗರ ಸಹಾಯಕ್ಕಾಗಿ ಪ್ರತೀ ಗಲ್ಫ್ ರಾಷ್ಟ್ರಗಳಲ್ಲಿ ಸಹಾಯ ಕೇಂದ್ರ ಸ್ಥಾಪಿಸುವುದು ಸೇರಿದಂತೆ ಅನಿವಾಸಿ ಭಾರತೀಯರು ಅನುಭವಿಸುತ್ತಿರುವ ಹಲವು ಸಂಕಷ್ಟಗಳಿಗೆ ಶೀಘ್ರ ಪರಿಹಾರ ದೊರಕಿಸಲು ಮನವಿ ಮಾಡಿದರು

Read These Next