ದುಬೈ:ಅಂತರರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್. ಶುಕ್ರವಾರ ಶಾಫೀ ಸಅದಿಯವರ ಭಾಷಣ

Source: KCF Dubai | By Arshad Koppa | Published on 23rd June 2016, 6:18 AM | Gulf News |

ದುಬೈ, ಜೂನ್ 22: 20 ನೇ ಅಂತರರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್ ಕಾರ್ಯಕ್ರಮದ ಅಂಗವಾಗಿ ನಡೆಸಲ್ಪಡುತ್ತಿರುವ ಅಂತರರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್ 2016 ಬೃಹತ್ ಕಾರ್ಯಕ್ರಮದಲ್ಲಿ ಕನ್ನಡದ ಕಣ್ಮಣಿ, ಭಾಷಣ ಲೋಕದ ಮಿನುಗುತಾರೆ, ಪ್ರಮುಖ ಮೇಧಾವಿ ಎನ್.ಕೆ.ಎಂ ಶಾಫೀ ಸಅದಿ ಬೆಂಗಳೂರು ಅಂತರರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್ ಆಯ್ಕೆಯಾಗಿದ್ದು ಇವರು 24/06/2016 ನೇ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಮುಹೈಸಿನ ಇಂಡಿಯನ್ ಸ್ಕೂಲ್ "ಶಾಂತಿಯುತ ಜಗತ್ತಿಗೆ ಇಸ್ಲಾಮಿನ ಸಂದೇಶ" ಎಂಬ ವಿಷಯವನ್ನು ಆಧರಿಸಿ ಪ್ರೌಢೊಜ್ವಲ ಭಾಷನ ಮಾಡಲಿದ್ದಾರೆ.ಮಲಯಾಲಂ, ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಪ್ರಭಾಷಣ ಸಡೆಯಲಿದೆ. ಈ   ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ದುಬೈ ಜಾಮಿಯಾ ಸಅದಿಯಾ ಇಸ್ಲಾಮಿಕ್ ಸೆಂಟರ್ ವಹಿಸಿಕೊಂಡಿದೆ. ಪ್ರೇಕ್ಷಕರಿಗೆ ಕಾರ್ಯಕ್ರಮದ ವೀಕ್ಷಣೆಗಾಗಿ ಪ್ರತ್ಯೇಕ ಸೌಕರ್ಯ ಏರ್ಪಡಿಸಿದ್ದು ಆಡಿಟೋರಿಯಂನ ಹೊರಾಂಗಣ ಮತ್ತು ಒಳಾಂಗಣಗಳಲ್ಲಿ ಬೃಹತ್ ಪ್ರಮಾಣದ ಆಸನದ ವ್ಯವಸ್ಥೆ ಹಾಗೂ ಬೃಹತ್ ಸ್ಕ್ರೀನ್ ವ್ಯವಸ್ಥೆಯನ್ನು ಮಾಡಲಾಗಿದೆ. ವಿವಿಧ ಎಮಿರೆಟ್ಸ್ ಗಳಿಂದ ವಿಶೇಷ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ.ಸುಮಾರು 5000 ಮಂದಿ ಸೇರುವ ನಿರೀಕ್ಷೆ ಇದೆ. ವಾಹನ ಸೌಲಭ್ಯಗಳ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ 050-5015024 ರನ್ನು ಸಂಪರ್ಕಿಸಲು ಕೋರಲಾಗಿದೆ. ಕೆ.ಸಿ.ಎಫ್, ಐ.ಸಿ.ಎಫ್, ಆರ್.ಎಸ್. ಸಿ ಘಟಕಗಳು ಪ್ರಚಾರದ ಉಸ್ತುವಾರಿಯನ್ನು ವಹಿಸಿ ಕಾರ್ಯನಿರ್ವಹಿಸುತ್ತಿದೆ.

ದುಬೈ ಅಂತರರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್ 2016 ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ದುಬೈ ಸರಕಾರದ ಪ್ರತ್ಯೇಕ ಅಹ್ವಾನಿತನಾಗಿ ಆಗಮಿಸುತ್ತಿರುವ ಎನ್.ಕೆ.ಎಂ ಶಾಫೀ ಸಅದಿ ಬೆಂಗಳೂರು ಪ್ರಮುಖ ಮೇಧಾವಿಯೂ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಕರಗತ ಮಾಡಿದ ಉನ್ನತ ಬಿರುದುದಾರಿಯೂ, ಕರ್ನಾಟಕ ಧಾರ್ಮಿಕ ಸೇವಾ ರಂಗದಲ್ಲಿ ಹೊಸ ಛಾಪನ್ನು ಮೂಡಿಸಿದ ವ್ಯಕ್ತಿಯೂ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಇದರ ನಿರ್ದೇಶಕರೂ ಆಗಿರುತ್ತಾರೆ.  ಕರ್ನಾಟಕ  ಎಸ್.ಎಸ್.ಎಫ್ ರಾಜ್ಯಾಧ್ಯಕ್ಷರಾಗಿ  ಕಾರ್ಯನಿರ್ವಹಿಸುತ್ತಿರುವ ಇವರು ಬೆಂಗಳೂರು ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿರುವ ಸಅದಿಯಾ ಸೆಂಟರ್ ಇದರ ಸ್ಥಾಪಕ ರೂವಾರಿಯೂ ಆಗಿದ್ದಾರೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ದುಬೈ ಅಂತರರಾಷ್ಟ್ರೀಯ ಹೋಲಿ ಕುರ್ಆನ್ ಅವಾರ್ಡ್ ಪ್ರತಿನಿಧಿಗಳು, ಯು.ಎ.ಇ ರಾಷ್ಟ್ರೀಯ ನಾಯಕರು, ಸಮಸ್ತ ಜಂಇಯ್ಯತುಲ್ ಉಲಮಾ ಪಂಡಿತ ಶಿರೋಮಣಿಗಳು, ದುಬೈ ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ ವಿಭಾಗದ ಪ್ರಮುಖ ಮಂತ್ರಿ ಮಾಗಧರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಾಮಿಯಾ ಸಅದಿಯಾ ಇದರ ಕೇಂದ್ರ ಕಮಿಟಿ ಕಾರ್ಯದರ್ಶಿಯೂ ಧಾರ್ಮಿಕ ಸೇವಾ ರಂಗದಲ್ಲಿ ಆತ್ಮೀಯ ನೇತೃತ್ವ ನೀಡಿ ಅನುಗ್ರಹಿಸುತ್ತಿರುವ ಸಯ್ಯದ್ ಫಝಲ್ ಕೋಯಮ್ಮ ತಂಙಲ್  ಕೂರ ದುವಾಶಿರ್ವಚನ ನೀಡಲಿದ್ದಾರೆ.

ಕುರ್ಆನ್ ಅವತೀರ್ಣಗೊಳಿಸಲ್ಪಟ್ಟ ಪವಿತ್ರ ರಂಝಾನ್ ತಿಂಗಳಿನಲ್ಲಿ ಕುರ್ಆನಿನ ಸಂದೇಶಗಳು ವಿಶ್ವದ ಮೂಲೆ ಮೂಲೆಗೂ ತಲುಪಿಸುವ ಸಲುವಾಗಿ  ಮತ್ತು ಕುರ್ಆನ್ ಕಲಿಕಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ದುಬೈ ಸರಕಾರ  ಸುಮಾರು19 ವರ್ಷಗಳಿಂದ ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ವಿಶ್ವಕ್ಕೆ ಸಮರ್ಪಿಸುತ್ತಿದೆ.

ಸಮಸ್ತ ಜಂಇಯ್ಯತುಲ್ ಇದರ ಗೌರವಾಧ್ಯಕ್ಷರೂ ಕೇರಳ ಮುಸ್ಲಿಂ ನವೋತ್ಥಾನ ನಾಯಕನಾಗಿ ಮೆರೆದ ಶೈಖುನಾ ಮರ್ಹೂಂ ನೂರುಲ್ ಉಲಮಾ ಅಬ್ದುಲ್ ಖಾದರ್ ಮುಸ್ಲಿಯಾರ್ ಅನುಗ್ರಹೀತ ಕರಗಳಿಂದ ತಲೆ ಎತ್ತಿ ನಿಂತಿರುವ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಸಮನ್ವಯ ವಿಧ್ಯ್ಕೇಂದ್ರವು ಕಾಸರಗೋಡಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ದುಬೈ ಔಕಾಫಿನ ಅಂಗೀಕಾರದೊಂದಿಗೆ ಕಳೆದ ಮೂರು ಶತಮಾನಗಳಿಂದ ಜಾಮಿಯಾ ಸಅದಿಯಾ ಇಂಡಿಯನ್ ಸೆಂಟರ್ ಮಾಯಾನಗರಿ ದುಬೈ ನಲ್ಲಿ ಕಾರ್ಯಾಚರಿಸುತ್ತಿದೆ. ಪ್ರಮುಖವಾಗಿ ಈ ಸಂಸ್ಥೆಯಲ್ಲಿ ಪ್ರೈಮರಿ ಹಾಗೂ ಸೆಕೆಂಡರಿ ಮಟ್ಟದ ಮದರಸಗಳು, ಧಾರ್ಮಿಕ ಭೊದನಾ ತರಗತಿಗಳು, ಹಾಗೂ ಕೌಟುಂಬಿಕ ತರಗತಿಗಳು, ಕುರ್ಆನ್ ಪರಿಶೀಲನೆ ತರಗತಿಗಳು, ಇಸ್ಲಾಮಿಕ್ ಗ್ರಂಥಾಲಯ, ಮಲಯಾಳಿಗಳಿಗೆ ಪ್ರತ್ಯೇಕ ಉಮ್ರಾ ಸರ್ವಿಸ್ ಮುಂತಾದ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳನ್ನು ಸಮುದಾಯಕ್ಕೆ ನೀಡುತ್ತಾ ಬಂದಿದೆ.
ಪವಿತ್ರ ರಂಝಾನ್ ತಿಂಗಳ ಎಲ್ಲಾ 30 ದಿನಗಳಲ್ಲಿ ಪ್ರತ್ಯೇಕ ಇಫ್ತಾರ್ ಸಂಗಮ ಹಾಗೂ ದುಬೈಯ ವಿವಿಧ ಮಸೀದಿಗಳನ್ನು ಕೇಂದ್ರೀಕರಿಸಿ ಪ್ರತ್ಯೇಕ ಅನುಮತಿ ಪಡೆದುಕೊಂಡು  ಖುತುಭಾ ಪ್ರಭಾಷಣಗಳಿಗೆ ಮತ್ತು ಧಾರ್ಮಿಕ ಸೇವೆಗಳಿಗೆ ನೇತೃತ್ವವನ್ನು ನೀಡುತ್ತಿದೆ. ಐಸಿಎಫ್ ಮಿಡ್ಲ್ ಈಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸಖಾಫಿ ಮಂಬಾಡ್ ಹಾಗೂ  ಕಾರ್ಯಕ್ರಮದ ಸ್ವಾಗತ ಸಮಿತಿ ನಿರ್ದೇಶಕರಾದ ಅಬ್ದುಲ್ ಕರೀಂ ತಲಂಗರ,ಸಅದಿಯಾ ಸಂಸ್ಥೆಯ ಮೇನೇಜರ್ ಅಹಮದ್ ಮುಸ್ಲಿಯಾರ್,ಕಾರ್ಯದರ್ಶಿ  ಅಮೀರ್ ಹಸ್ಸನ್,ಕೆಸಿಎಫ್ ದುಬೈ ಪ್ರಧಾನ ಕಾರ್ಯದರ್ಶಿ ಖಲಂದರ್ ಕಬಕ,ಆಡಳಿತ ವಿಭಾಗದ  ಅಧ್ಯಕ್ಷ ರಫೀಕ್ ಕಲ್ಲಡ್ಕ,ಅಜ್ಮಾನ್ ಝೋನ್ ಆಡಳಿತ ವಿಭಾಗದ ಕಾರ್ಯದರ್ಶಿ ನಿಝಾಮ್ ಮದನಿ  ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: 050-5015024

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.