ದುಬೈ:DKSC 20 ನೇ  ವಾರ್ಷಿಕ ಸಮ್ಮೇಳನ-ಸಾರಥಿಯಾಗಿ ಜನಾಬ್ ಎಂ.ಇ.ಮೂಳೂರು ಆಯ್ಕೆ

Source: dksc dubai | By Arshad Koppa | Published on 4th November 2016, 11:15 AM | Gulf News |

ದುಬೈ, ನ ೩: ನ. 11 ದುಬೈ ಯಲ್ಲಿ  ಡಿ.ಕೆ.ಎಸ್.ಸಿ ಇದರ  20 ನೇ  ವಾರ್ಷಿಕ ಸಮ್ಮೇಳನ ಇದರ ಬ್ರಹತ್ ಪ್ರಚಾರ ಸಭೆ ಹಾಗೂ ಹಿತೈಷಿಗಳ ಸಂಗಮ. 
ಇದರ ಸಾರಥಿಯಾಗಿ ಜನಾಬ್ ಎಂ.ಇ.ಮೂಳೂರು ಆಯ್ಕೆ.

ದುಬೈ .ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ಡಿ.ಕೆ.ಎಸ್.ಸಿ) ಇದರ 20 ನೇ  ವಾರ್ಷಿಕ ಸಮ್ಮೇಳನ ವು  ಮೂಳೂರಿನ ಮರ್ಕಝ್ ಕ್ಯಾಂಪಸ್ ನಲ್ಲಿ  ಡಿ.2, 3 ಮತ್ತು 4ರಂದು ಸಾದಾತುಗಳು, ಉಲಮಾಗಳು , ರಾಜಕೀಯ ನೇತಾರರು, ಉಮರಾಗಳು ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ 20 ಜೋಡಿ  ಬಡ ಕುಟುಂಬಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ವಿವಿಧ ಜನೋಪಯೋಗಿ  ಅಭಿವೃದ್ಧಿ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ. ಇದರ ಪ್ರಚಾರಾಂದೋಲನವು ಗಲ್ಫ್ ರಾಷ್ಟ್ರಗಳ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ನಡೆಯುತ್ತಿದ್ದು ಇದರ ಅಂಗವಾಗಿ ಡಿ.ಕೆ.ಎಸ್.ಸಿ   ಯು.ಎ.ಇ ರಾಷ್ಟೀಯ ಸಮಿತಿ ಅದೀನದಲ್ಲಿ ಇರುವ ದುಬೈ ಯ ದೇರಾ ಯುನಿಟ್ , ಬಾರ್ ದುಬೈ ಯುನಿಟ್ , ಅಲ್ ಕ್ವಿಸಸ್ ಯುನಿಟ್ ಹಾಗೂ ಯೂತ್ ವಿಂಗ್ ಯುನಿಟ್ ಜಂಟಿಯಾಗಿ ನವಂಬರ್ 11 ರಂದು "ಬ್ರಹತ್  ಪ್ರಚಾರ ಸಭೆ ಹಾಗೂ ಹಿತೈಷಿಗಳ ಸಂಗಮ" ವು ದೇರಾ ಬನಿಯಾಸ್ ನಲ್ಲಿ ಇರುವ PEARL CREEK HOTEL  ನಲ್ಲಿ ಸಾಯಂಕಾಲ 6 ಘಂಟೆ ಯಿಂದ  ನಡೆಯಲಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಜಈ ಎಂ.ಇ.ಮೂಳೂರು ರವರ ಸಾರಥ್ಯದಲ್ಲಿ ಜಂಟಿ ಯುನಿಟ್ ಗಳು ಪ್ರವರ್ತಿಸಲು ತೀರ್ಮಾನಿಸಲಾಯಿತು.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.