ಬಹರೇನ್: ಬಹರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಮ್ ನಿಂದ ‘ದ್ವೇಶ ರಾಜಕೀಯ ನಿಲ್ಲಿಸಿ’ ಅಭಿಯಾನ

Source: biff | By Arshad Koppa | Published on 4th October 2016, 8:34 AM | Gulf News |

ಬಹರೇನ್, ಅ ೩: ಬಹರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಘಟಕ ಹಮ್ಮಿಕೊಂಡ ‘ದ್ವೇಶ ರಾಜಕೀಯ ನಿಲ್ಲಿಸಿ’ ಅಭಿಯಾನದ ಅಂಗವಾಗಿ ಬೃಹತ್ ಸಾರ್ವಜನಿಕ ಸಭೆಯು ಸೌತ್ ಪಾರ್ಕ್ ಹಾಲ್, ಮನಮದಲ್ಲಿ ದಿನಾಂಕ 30-09-2016 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹಮ್ಮೆದ್ ಇರ್ಷಾದ್ ತುಂಬೆ , ಅಧ್ಯಕ್ಷರು ಬಹರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಘಟಕ ವಹಿಸಿದ್ದರು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಹರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಮ್ ಪ್ರಧಾನ ಕಾರ್ಯದರ್ಶಿ ಮುಹಮ್ಮೆದ್ ಯಹ್ಯಾ ದೇಶದಲ್ಲಿ ಬದಲಾಗುತ್ತಿರುವ ಸನ್ನಿವೇಶವು ನಮ್ಮ ’ ರಾಷ್ಟ್ರೀಯ ಏಕತೆ’ಗೆ ಗಂಭೀರ ಬೆದರಿಕೆಯಾಗುತ್ತಿದೆ ಮತ್ತು ಇದು ನಮ್ಮ ದೇಶದ ಜಾತ್ಯಾತೀತ ಚೌಕಟ್ಟಿಗೂ ಸವಾಲನ್ನೊಡ್ಡುತ್ತಿದೆ. ಹಿಂದುತ್ವ ಶಕ್ತಿಗಳು ಕೋಮು ಧ್ರುವೀಕರಣ ಮತ್ತು ಮುಸ್ಲಿಂ ವಿರೋಧಿ ಮನೋಸ್ಥಿತಿಯ ವಾತಾವರಣವನ್ನು ಸೃಷ್ಟಿಸುವ ಯೋಜಿತ ಅಜೆಂಡಾದೊಂದಿಗೆ ಕಾರ್ಯಾಚರಿಸುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ದೇಶದೊಂದಿಗಿರುವ ತನ್ನ ಕರ್ತವ್ಯವನ್ನು ಸಂಪೂರ್ಣವಾಗಿ ಮರೆತು ಅರ್.ಎಸ್.ಎಸ್ ಮತ್ತು ಕಾರ್ಪೋರೇಟ್ ಸಂಸ್ತೆಗಳ ಆದೇಶಗಳನ್ನು ಪೂರ್ಣಗೊಳಿಸುವಲ್ಲಿ ಕಾರ್ಯನಿರತವಾಗಿದೆ. ಈ ಬಗ್ಗೆ ಜಾಗೃತಿ  ನೀಡುವ ಸಲುವಾಗಿ ಬಹರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಮ್ ಸೆಪ್ಟೆಂಬರ್ ತಿಂಗಳಲ್ಲಿ ‘ದ್ವೇಶ ರಾಜಕೀಯ ನಿಲ್ಲಿಸಿ’ಎಂಬ ಘೋಷಣೆಯಡಿ ಈ ಅಭಿಯಾನವನ್ನು ಆಯೋಜಿಸಿದೆ.
ಅತಿಥಿಗಳಾಗಿ ಆಗಮಿಸಿದ ಅಬ್ದುಲ್ ಬಶೀರ್ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕಾರ್ಯದರ್ಶಿ ಹಾಗೂ ಜಮಾಲ್ ಮೊಇದೀನ್, ಸಂಯೋಜಕರು ರಿಹಾಬ್ ಇಂಡಿಯಾ ಫೌಂಡೇಶನ್ ಬಹರೈನ್ ಇವರು ಮಾತನಾಡಿದರು. 

ಮುಖ್ಯ ಪ್ರಭಾಷಣ ಮಾಡಿದ ಪ್ರಧಾನ ಕಾರ್ಯದರ್ಶಿ ಬಹರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಘಟಕ ಅಥಾವುಲ್ಲಾ ಸುಳ್ಯ ಮಾತನಾಡಿ, ದೇಶದಲ್ಲಿ ಹೊರಬರುತ್ತಿರುವ ಸ್ಥಿತಿಗಳು ಬಹಳ ಗಂಭೀರವಾಗಿದೆ, ದೇಶದ ಏಕತೆ ಮತ್ತು ಜಾತ್ಯಾತೀತತೆಗೆ ಬೆದರಿಕೆಗಳಾಗಿವೆ. ಕೋಮುವಾದವು ಎಲ್ಲಾ ಮಿತಿಗಳನ್ನು ಮೀರಿ ಹಿಂದುತ್ವ ಫ್ಯಾಶಿಸಂ ದೇಶದ ರಾಷ್ಟ್ರೀಯ ನೀತಿಯಾಗಿ ಪರಿವರ್ತಿಸಲಾಗುತ್ತಿದೆ. ಮೋದಿ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ, ದಲಿತರು, ಕ್ರಿಶ್ತಿಯನ್ನರು ಹಾಗೂ ರೈತರ ಮೇಲೆ ಇರುವ ದೌರ್ಜನ್ಯ ಹಾಗೂ ಅನ್ಯಾಯ ಹೆಚ್ಚುತ್ತಾ ಬಂತು. ಗಲಭೆಗಳು ಜಾಸ್ತಿಯಾಗತೊಡಗಿತು. ಗೋ ಮಾಂಸವನ್ನೇ ರಾಜಕೀಯ ವಿಚಾರವಾಗಿ ಮಾಡಿ ದೇಶದಲ್ಲಿ ಗಲಭೆಗಳನ್ನು ನಡೆಸಿದರು. ಇದರ ಭಾಗವಾಗಿ ಉತ್ತರ ಪ್ರದೇಶದ ಅಖ್ಲಾಕ್ ರವರ ಬರ್ಬರ ಹತ್ಯೆ ಹಾಗೂ ಕುಟುಂಬದ ಸದಸ್ಯರ ಮೇಲೆ ಹಲ್ಲೆ, ಜಾರ್ಖಂಡ್ ನಲ್ಲಿ ಇಬ್ಬರು ದನ ವ್ಯಾಪಾರಿಗಳ ಹತ್ಯೆ ಹಾಗೂ ನಂತರ ಅವರನ್ನು ಮರಕ್ಕೆ ನೇತು ಹಾಕಿದರು, ಗುಜರಾತ್ ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ದನದ ಚರ್ಮ ವ್ಯಾಪಾರಿಗಳ ಮೇಲೆ ಹಲ್ಲೆ ಮತ್ತು ಹೆಂಗಸರ ಮೇಲೆಯು ಇವರು ಗಲ್ಲೆಗಳನ್ನು ನಡೆಸಿ ನೀಚ ಸಂಸ್ಕೃತಿಯನ್ನು ತೋರಿಸಿದರು.


ನಂತರ ಮಾತನಾಡಿದ ಅವರು ಬಿ.ಜೆ.ಪಿ ಅಧಿಕಾರಕ್ಕೆ ಬಂದ ನಂತರ ದ್ವೇಷ ಭಾಷಣ, ಲವ್ ಜಿಹಾದ್, ಘರ್ ವಾಪಸಿ, ಗಲಭೆ ಮುಂತಾದವುಗಳ ಮೂಲಕ ಕೋಮು ಧ್ರುವೀಕರಣ, ಮುಸ್ಲಿಂ ವಿರೋಧಿ ವಾತಾವರಣವನ್ನು ನಿರ್ಮಿಸಿದರು. ಇದೆಲ್ಲದರ ಹಿಂದೆ ಆರ್.ಎಸ್.ಎಸ್ ಹಾಗೂ ಸಂಘಪರಿವಾರದ ಕೈವಾಡವಿದೆ ಎಂದು ನುಡಿದರು. ಸರಕಾರವು ಆರ್.ಎಸ್.ಎಸ್ ನ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಸರಕಾರ ತನ್ನ ನೀತಿಗಳನ್ನು ಬದಲಾಯಿಸಬೇಕಾಗಿದೆ, ಪೋಲೀಸರು ಹಾಗೂ ಆಡಳಿತ ಪಕ್ಷಪಾತ ನೀತಿಯನ್ನು ಕೈಬಿಡಬೇಕು. ದೌರ್ಜನ್ಯ ಅನ್ಯಾಯದ ವಿರುದ್ಧ ಹಕ್ಕು ಮತ್ತು ನ್ಯಾಯದ ಪರ ನಿಲ್ಲುವುದು ನಮ್ಮ ಜವಾಬ್ದಾರಿಯಾಗಿದೆ. 

ವೇದಿಕೆಯಲ್ಲಿ ಇಂಡಿಯನ್ ಸೊಶಿಯಲ್ ಫೋರಮ್ ಕರ್ನಾಟಕ ಅಧ್ಯಕ್ಷರಾದ ಮುಹಮ್ಮೆದ್ ಫರಾಝ್ ಕಾವಲಕಟ್ಟೆ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಮೊದಲು ಕಾರ್ಯಕರ್ತರಿಂದ ಪ್ರಸಕ್ತ ಸನ್ನಿವೇಶದ ಬಗ್ಗೆ ನಾಟಕದ ಮೂಲಕ ಪ್ರದರ್ಶಿಸಲಾಯಿತು. ಸಿದ್ದೀಕ್ ಮಂಜೇಶ್ವರ ಅತಿಥಿಗಳನ್ನು ಸ್ವಾಗತಿಸಿ, ನಝೀರ್ ಹುಸೈನ್ ಕೆ.ಸಿ.ರೋಡ್ ವಂದಿಸಿದರು. ಹಫೀಝ್ ಉಳ್ಳಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.
 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.