ಕಾರವಾರ: ಜಿಲ್ಲೆಯಲ್ಲಿ 233ಕೋಟಿ ರೂ. ವೆಚ್ಚದಲ್ಲಿ 32ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ: ಸಚಿವ ದೇಶಪಾಂಡೆ

Source: varthabhavan | By Arshad Koppa | Published on 15th January 2017, 10:03 AM | Coastal News | Special Report |

ಕಾರವಾರ ಜನವರಿ 13 : ಜಿಲ್ಲೆಯ ಬಹುದಶಕಗಳ ಬೇಡಿಕೆಗಳಾದ ಪ್ರಮುಖ ನದಿಗಳಿಗೆ ಸೇತುವೆ ನಿರ್ಮಾಣಕ್ಕೆ ಕಾಲ ಕೂಡಿಬಂದಿದ್ದು, 233ಕೋಟಿ ರೂ. ವೆಚ್ಚದಲ್ಲಿ 32ಸೇತುವೆಗಳ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಹೇಳಿದರು.

ಅವರು ಶುಕ್ರವಾರ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಷ್ಟೊಂದು ಸೇತುವೆಗಳ ನಿರ್ಮಾಣಕ್ಕೆ ಸರ್ಕಾರ ಒಂದೇ ಬಾರಿಗೆ ಅನುಮೋದನೆ ನೀಡಿರುವುದು ಇದೇ ಮೊದಲ ಬಾರಿ. ಈ ಮೂಲಕ ಈ ಭಾಗದ ಜನರ ಹಲವು ದಶಕಗಳ ಬೇಡಿಕೆ ಈಡೇರುವಂತಾಗಿದೆ. ಕರಾವಳಿಯಲ್ಲಿ ಅಗತ್ಯವಿದ್ದ ಬಹುತೇಕ ಎಲ್ಲಾ ಕಡೆ ಸೇತುವೆಗಳ ನಿರ್ಮಾಣಕ್ಕೆ ಈ ಮೂಲಕ ಚಾಲನೆ ದೊರೆಯಲಿದ್ದು, ಜನಜೀವನದಲ್ಲಿ ಮಹತ್ತರ ಬದಲಾವಣೆಯನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಲಾಗಿದೆ ಎಂದರು.

ಸೇತುವೆಗಳ ವಿವರ ಇಂತಿವೆ: ಗಂಗಾವಳಿ ನದಿಗೆ ಅಂಕೋಲಾ ತಾಲೂಕಿನ ಮಂಜುಗುಣ  ಹಾಗೂ ಗಂಗಾವಳಿ ಗ್ರಾಮಗಳ ನಡುವೆ ಸೇತುವೆಗೆ 30ಕೋಟಿ ರೂ, ಹೊನ್ನಾವರ ಮಾವಿನಕುರ್ವೆ ರಸ್ತೆಯಲ್ಲಿ ಶರಾವತಿ ನದಿಗೆ ಸೇತುವೆ ನಿರ್ಮಾಣಕ್ಕೆ 40ಕೋಟಿ ರೂ, ಶರಾವತಿ ನದಿಗೆ ಗೇರುಸೊಪ್ಪ-ನಗರಬಸ್ತಿಕೇರಿ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ 20ಕೋಟಿ ರೂ., ಹೊನ್ನಾವರ ತಾಲೂಕಿನ ಜವಳಕರ್ಕಿ-ಇಡಗುಂಜಿ ಬಳಿ ಸೇತುವೆಗೆ 40ಕೋಟಿ ರೂ, ಕಾಳಿ ನದಿಗೆ ಉಳಗಾ-ಕೆರವಡಿ ಬಳಿ ಸೇತುವೆ ನಿರ್ಮಾಣಕ್ಕೆ 25ಕೋಟಿ ರೂ, ಕುಮಟಾ ತಾಲೂಕಿನ ಹೊನ್ನಾವರ-ಕತಗಾಲ್ ಬಳಿ ಸೇತುವೆಗೆ 35ಕೋಟಿ ರೂ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ.

ಇದೇ ರೀತಿ ಮುಂಡಗೋಡು ತಾಲೂಕಿನ ಹುಳಿಹೊಂಡ-ಬೊಮ್ಮಿನಗಟ್ಟಿ ರಸ್ತೆಯಲ್ಲಿ ಸೇತುವೆಗೆ 1ಕೋಟಿ ರೂ, ಮುಂಡಗೋಡು ತಾಲೂಕಿನ ತಡಸ-ಕುಮಟಾ ರಸ್ತೆಯಲ್ಲಿ ಸೇತುವೆಗೆ 1ಕೋಟಿ ರೂ, ಕಾಳಿ ನದಿಗೆ ಉಳಿವಿ-ಡಿಗ್ಗಿ ನಡುವೆ ಸೇತುವೆಗೆ 1.50ಕೋಟಿ ರೂ, ಜೊಯಿಡಾ ತಾಲೂಕಿನ ಸಾವಂತ ಮಸ್ಕರ್ನಿ ಬಳಿ ಸೇತುವೆಗೆ 1ಕೋಟಿ ರೂ, ಬಾಮನೆ ಮತ್ತು ಕತೇಲಿ ಗ್ರಾಮದ ನಡುವೆ ಸೇತುವೆಗೆ 4.95ಕೋಟಿ ರೂ, ಉಳವಿ-ಡಿಗ್ಗಿ ನಡುವೆ ಸೇತುವೆಗೆ 6ಕೋಟಿ ರೂ, ಚಾಂದೇವಾಡಿ-ಕ್ಯಾಸಲ್‍ರಾಕ್ ನಡುವೆ ಸೇತುವೆಗೆ 4.75ಕೋಟಿ ರೂ, ಹಳಿಯಾಳ ತಾಲೂಕಿನ ಅಗಸಲಕಟ್ಟಾ ಕ್ರಾಸ್-ವಾಡಾ ನಡುವೆ ಸೇತುವೆಗೆ 2ಕೋಟಿ ರೂ, ಮುಂಡಗೋಡು-ಅಣಶಿ ರಸ್ತೆಯಲ್ಲಿ ಸೇತುವೆಗೆ 75ಲಕ್ಷ ರೂ, ಸಿದ್ದನಹಳ್ಳ ಬಳಿ ಸೇತುವೆಗೆ 75ಲಕ್ಷ ರೂ, ಕಳಬಾವಿ-ಕೋಡು ರಸ್ತೆಯಲ್ಲಿ ಸೇತುವೆಗೆ 80ಲಕ್ಷ ರೂ, ಮುಂಡಗೋಡು-ಅಣಶಿ ರಸ್ತೆಯಲ್ಲಿ ಸೇತುವೆಗೆ 2ಕೋಟಿ ರೂ., ಜೊಯಿಡಾ ತಾಲೂಕಿನ ಅಕೇತಿ ಗ್ರಾಮ ವ್ಯಾಪ್ತಿಯಲ್ಲಿ ಸೇತುವೆಗೆ 26ಲಕ್ಷ ರೂ, ಕತೆಗಾಲಿ ಗ್ರಾಮ ವ್ಯಾಪ್ತಿಯಲ್ಲಿ 50ಲಕ್ಷ ರೂ, ಮುಂಡಗೋಡು ತಾಲೂಕಿನ ಹುಳಿಹೊಂಡ-ಬಮ್ಮಿಗಟ್ಟ ಗ್ರಾಮದಲ್ಲಿ 2ಕೋಟಿ ರೂ, ಯಲ್ಲಾಪುರ ತಾಲೂಕಿನ ಚಂದಗುಳಿಯಲ್ಲಿ 1ಕೋಟಿ ರೂ, ಬೆಳಕಿ-ಶಿಡ್ಲಗುಂಡಿ ನಡುವೆ 2ಕೋಟಿ ರೂ, ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುವುದು.

ಕಳಚೆಯಿಂದ ಬಾಗಿನಕಟ್ಟ ರಸ್ತೆಯಲ್ಲಿ 1ಕೋಟಿ ರೂ, ಹಿತಲಹಳ್ಳಿಯಿಂದ ಶಿರಸಿ ರಸ್ತೆಯಲ್ಲಿ 4ಕೋಟಿ ರೂ, ಮುಂಡಗೋಡು ತಾಲೂಕಿನ ಮಳಗಿಯಿಂದ ಮಂಟಗಿ ನಡುವೆ 1ಕೋಟಿ ರೂ, ಯಲ್ಲಾಪುರ ತಾಲೂಕಿನ ನಂದೊಳ್ಳಿ ಬಾಳೆಗನಿಯಿಂದ ಇಂಡಗುಂದಿ ನಡುವೆ 75ಲಕ್ಷ ರೂ, ಹೆಮ್ಮಡಿಗುಂಬ್ರೆಯಿಂದ ಕ್ಯಾದಗಿಸರ ರಸ್ತೆಯಲ್ಲಿ 1ಕೋಟಿ ರೂ, ಕಾತೂರು- ಉಮ್ಮಚಂಗಿ ರಸ್ತೆಯಲ್ಲಿ 1ಕೋಟಿ ರೂ, ಕುಡಿಗೆ-ಡೊಣಗರ ರಸ್ತೆಯಲ್ಲಿ 1ಕೋಟಿ ರೂ ಮತ್ತು ಶಿರಸಿ ತಾಲೂಕಿನ ಹೊರಸರದಿಂದ ಅಡ್ನೊಳ್ಳಿ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ 75ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...