ಭಟ್ಕಳದ ಪ್ರತಿಷ್ಟಿತ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಉದ್ಯಮಿ ಮುಹಮ್ಮದ್ ಯೂನೂಸ್ ಕಾಝಿಯಾ ಆಯ್ಕೆ

Source: SOnews | By Staff Correspondent | Published on 10th March 2024, 3:45 PM | Coastal News |

ಭಟ್ಕಳ:  ಉ.ಕ.ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾಗಿರುವ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗೆ ರವಿವಾರ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ೩೫ ವರ್ಷಕ್ಕೂ ಅಧಿಕ ಕಾಲ ಅಂಜುಮನ್ ಸದಸ್ಯರಾಗಿರುವ ಉದ್ಯಮಿ ಮುಹಮ್ಮದ್ ಯುನೂಸ್ ಕಾಝಿಯಾ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಇಸ್ಹಾಖ್ ಶಾಬಂದ್ರಿ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಆಫ್ತಾಬ್ ಖಮರಿ ಆಯ್ಕೆಯಾಗಿದ್ದಾರೆ.

ದಮ್ಮಾಮ್ (ಸೌದಿ ಅರೇಬಿಯಾ) ಖ್ಯಾತ ಉದ್ಯಮಿ ಮತ್ತು ಭಟ್ಕಳ ಮುಸ್ಲಿಂ ಗಲ್ಫ್ ಕೌನ್ಸಿಲ್ ಸಕ್ರಿಯ ಸದಸ್ಯ, ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಸಮುದಾಯದ  ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ  ಯೂನಸ್ ಕಾಜಿಯಾ ಅವರು ಪ್ರಥಮ ಬಾರಿಗೆ  ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಗೊಂಡರು. ಇವರು ಕೆನರಾ ಮುಸ್ಲಿಂ ಗಲ್ಫ್ ಕೌನ್ಸಿಲ್ ಅಧ್ಯಕ್ಷ ಹುದ್ದೆ ಹೊಂದಿದ್ದಾರೆ. ಸೌದಿ ಅರೇಬಿಯಾದಲ್ಲಿ ಭಟ್ಕಳ ಮುಸ್ಲಿಂ ಜಮಾತ್ ಅಲ್-ಶರ್ಕಿಯಾದ ಮೊದಲ ಅಧ್ಯಕ್ಷರೂ ಎಂಬ ಕೀರ್ತಿ ಇವರದ್ದಾಗಿದೆ. ಭಟ್ಕಳದ ತಂಝೀಮ್ ಸಂಸ್ಥೆಯಲ್ಲೂ ಇವರು ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಅಬ್ದುಲ್ ವಾಜಿದ್ ಕೋಲ ಅವರ ಮೇಲ್ವಿಚಾರಣೆಯಲ್ಲಿ  ನಡೆದ ಅಂಜುಮನ್ ಪದಾಧಿಕಾರಿಗಳ ಚುನಾವಣೆಯಲ್ಲಿ 80 ಸದಸ್ಯರು ಭಾಗವಹಿಸಿದ್ದರು.

ಇನ್ನಿತರ ಪದಾಧಿಕಾರಿಗಳ ವಿವರ:

ಉಪಾಧ್ಯಕ್ಷರು (1ನೇ)  ಮುಹಮ್ಮದ್ ಸಾದಿಕ್  ಪಿಲ್ಲೂರ್ ಉಪಾಧ್ಯಕ್ಷ (II) ಡಾ. ಜುಬೇರ್ ಕೋಲಾ, ಕಾಮಗಾರಿ ಸಮಿತಿ ಕಾರ್ಯದರ್ಶಿ: ಎಸ್.ಜೆ.ಸೈಯದ್ ಹಾಶಿಮ್, ಹಣಕಾಸು ಕಾರ್ಯದರ್ಶಿ:  ಎಸ್ ಎಂ ಸೈಯದ್ ಪರ್ವೇಜ್, AITM ಮಂಡಳಿಯ ಕಾರ್ಯದರ್ಶಿ ಮೊಹಿಯುದ್ದೀನ್ ರುಕ್ನುದ್ದೀನ್, BBA BCA ಪ್ರೊಫೆಷನಲ್ ಕಾಲೇಜ್ ಬೋರ್ಡ್ ಕಾರ್ಯದರ್ಶಿ :  ಅಹಿದ್ ಮೊಹತೆಶಮ್, ಪಿಯು & ಪದವಿ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ: ಡಾ. ಎಸ್.ಎಂ.ಸೈಯದ್ ಸಲೀಂ , ಪ್ರೌಢಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ  ಸಾದುಲ್ಲಾ ರುಕ್ನುದ್ದೀನ್ ಪ್ರಾಥಮಿಕ ಮಂಡಳಿ ಕಾರ್ಯದರ್ಶಿ  ತನ್ವೀರ್ ಕಾಸರಕೋಡ್

ದೀನಿಯಾತ್ ಬೋಡ್(ಧಾರ್ಮಿಕ ಶಿಕ್ಷಣ) ಬೋರ್ಡ್ ಕಾರ್ಯದರ್ಶಿ: ಮೌಲಾನಾ ಡಾ. ಅಬ್ದುಲ್ ಹಮೀದ್  ಅಥರ್ ರುಕನ್ನುದ್ದಿನ್ ನದ್ವಿ ಆಯ್ಕೆಗೊಂಡಿದ್ದಾರೆ.

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...