ಹರ್ ಘರ್ ತಿರಂಗಾ ಬಹಿಷ್ಕರಿಸಲು ಯತಿ ನರಸಿಂಗಾನಂದ ಕರೆ

Source: Vb | By I.G. Bhatkali | Published on 13th August 2022, 3:43 PM | National News |

ಹೊಸ ದಿಲ್ಲಿ : 75ನೇ ಸ್ವಾತಂತ್ರೋತ್ಸವದ ಅಂಗವಾಗಿ ಕೇಂದ್ರ ಸರಕಾರವು ಆರಂಭಿಸಿರುವ “ಹರ್ ಘರ್ ತಿರಂಗಾ' ಅಭಿಯಾನವನ್ನು ಬಹಿಷ್ಕರಿಸುವಂತೆ ಹಿಂದುತ್ತವಾದಿ ನಾಯಕ, ಯತಿ ನರಸಿಂಗಾನಂದ ಕರೆ ನೀಡಿದ್ದಾರೆ.

ಮುಸ್ಲಿಮರೊಬ್ಬರ ಒಡೆತನದ ಕಂಪೆನಿಗೆ ಪ್ರಯೋಜನ ಮಾಡಿಕೊಡುವ ಉದ್ದೇಶವನ್ನು ಹರ್ ಘರ್ ತಿರಂಗಾ ಅಭಿಯಾನವು ಹೊಂದಿದೆಯೆಂದು ಯತಿ ನರಸಿಂಗಾನಂದ ವೀಡಿಯೊದಲ್ಲಿ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಅಭಿಯಾನದ ಅತಿ ದೊಡ್ಡ ಆರ್ಡರ್ (ರಾಷ್ಟ್ರಧ್ವಜ ಖರೀದಿ) ಅನ್ನು ಪಶ್ಚಿಮ ಬಂಗಾಳದಲ್ಲಿರುವ ಸಲಾವುದ್ದೀನ್ ಎಂಬಾತನ ಒಡೆತನದ ಕಂಪೆ ನಿಗೆ ವಹಿಸಲಾಗಿದೆಯೆಂದು ನರಸಿಂಗಾನಂದ ಆರೋಪಿಸಿದ್ದಾರೆ.

“ಇದೊಂದು ಹಿಂದೂಗಳ ವಿರುದ್ಧ ನಡೆಸಲಾದ ಅತಿ ದೊಡ್ಡ ಸಂಚಾಗಿ ದೆ ನೀವು (ಹಿಂದೂಗಳಿಗೆ) ಜೀವಂತವಾಗಿ ಉಳಿಯಬೇಕೆಂದಿದ್ದರೆ ಈ ಅಭಿಯಾನದ ಹೆಸರಿನಲ್ಲಿ ನಿಮ್ಮ ಹಣವನ್ನು ಮುಸ್ಲಿಮರಿಗೆ ನೀಡುವುದನ್ನು ನಿಲ್ಲಿಸಿ” ಎಂದಾತ ಕಿಡಿಕಾರಿದ್ದಾರೆ.

ಹಿಂದೂ ರಾಜಕಾರಣಿಗಳು ಮುಸ್ಲಿಮರನ್ನು ಆರ್ಥಿಕವಾಗಿ ಬಹಿಷ್ಕರಿಸಬೇಕೆಂದು ಕರೆ ನೀಡುತ್ತಾರೆ. ಆದರೆ ಅವರು ಅಧಿಕಾರಕ್ಕೇರಿದ ಬಳಿಕ ಸರಕಾರಿ ಗುತ್ತಿಗೆಗಳನ್ನು ಅವರಿಗೆ ನೀಡುತ್ತಾರೆಂದು ಹೇಳಿದ್ದಾರೆ.

“ಇಂತಹ ರಾಜಕಾರಣಿಳಿಗೆ ಪಾಠವನ್ನು ಕಲಿಸಬೇಕಾಗಿದೆ ಎಂದು ವೀಡಿಯೊದಲ್ಲಿ ಹೇಳಿರುವ ನರಸಿಂಗಾನಂದ “ಮುಸ್ಲಿಮರನ್ನು ಶ್ರೀಮಂತರನ್ನಾಗಿ ಮಾಡಲು ಹಾಗೂ ತರುವಾಯ ನಿಮ್ಮ ಮಕ್ಕಳನ್ನು ಹತ್ಯೆಗೈಯುವುದಕ್ಕೆ ಏರ್ಪಾಡುಗಳನ್ನು ಮಾಡುವುದಕ್ಕಾಗಿ ಹಿಂದೂಗಳ ಹಣವನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಬಾರದು. ಈ ವ್ಯಕ್ತಿಗಳ ಬಲೆಗೆ ನೀವು ಬೀಳದಿರಿ” ಎಂದು ನರಸಿಂಗಾನಂದ ಹೇಳಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ.

ಇದೇ ವೇಳೆ ರಾಷ್ಟ್ರಧ್ವಜವು ಹಿಂದೂಗಳಿಗೆ ಹಾನಿಯುಂಟು ಮಾಡಿದೆಯೆಂದು ಹೇಳಿರುವ ನರಸಿಂಗಾನಂದ ಅದನ್ನು ಬಹಿಷ್ಣರಿಸುವಂತೆಯೂ ಆಗ್ರಹಿಸಿದ್ದಾರೆ ಮತ್ತು ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿಯೂ ಕೇಸರಿ ಬಣ್ಣದ ಧ್ವಜವಿರಬೇಕೆಂದು ಆತ ಹೇಳಿದ್ದಾರೆ.

ಹರಿದ್ವಾರದಲ್ಲಿ ನಡೆದ ಧಾರ್ಮಿಕ ಸಮಾವೇಶವೊಂದರಲ್ಲಿ ಮಾಡಿದ ಭಾಷಣದಲ್ಲಿ ಮುಸ್ಲಿಮರ ಜನಾಂಗೀಯ ಹತ್ಯೆಗೆ ಕರೆ ನೀಡಿದ್ದಕ್ಕಾಗಿ ನರಸಿಂಗಾನಂದರನ್ನು ಜನವರಿ 15ರಂದು ಬಂಧಿಸಲಾಗಿತ್ತು. ಫೆಬ್ರವರಿ 7ರಂದು ಆತ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವ ಉದ್ದೇಶಹೊಂದಿರುವ ಯಾವುದೇ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲವೆಂಬ ಶರತ್ತಿನೊಂದಿಗೆ ಆತನಿಗೆ ನ್ಯಾಯಾಲಯ ಜಾಮೀನು ಬಿಡುಗಡೆ ನೀಡಿತ್ತು.

ಎಪ್ರಿಲ್ 17ರಂದು ಆತ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯೊಂದರಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದರೆನ್ನಲಾಗಿದೆ. ಭಾರತವು ಇಸ್ಲಾಮಿಕ್ ದೇಶವಾಗದಂತೆ ನೋಡಿಕೊಳ್ಳಲು ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೊಂದಬೇಕೆಂದು ಆತ ಕರೆ ನೀಡಿದ್ದರು.

ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಅಭಿಪ್ರಾಯಗಳನ್ನು ನೀಡುವ ವೀಡಿಯೊ ಸಂದೇಶಗಳನ್ನು ನೀಡುವುದನ್ನು ನರಸಿಂಗಾನಂದ ಮುಂದುವರಿಸಿದ್ದಾರೆನ್ನಲಾಗಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...