ಜ್ಞಾನವಾಪಿ ಮಸೀದಿ ಪ್ರಕರಣ ಮಸೀದಿಯ ಕೊಳಕೆ ಪ್ರವೇಶ ನಿರ್ಬಂಧ: ನಿಯಾಲಯ ಆದೇಶ

Source: Vb | By I.G. Bhatkali | Published on 17th May 2022, 5:12 PM | National News |

ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಅರ್ಜಿದಾರರು ಪ್ರತಿಪಾದಿಸಿರುವ ಹಿನ್ನೆಲೆಯಲ್ಲಿ ಆ ಸ್ಥಳಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸುವಂತೆ ವಾರಣಾಸಿ ಸಿವಿಲ್ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಮಸೀದಿಯ ಹಿಂದಿರುವ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ

'ದಾರಿ ತಪ್ಪಿಸುವ ಹೇಳಿಕೆ

'ಶಿವಲಿಂಗ'ದ ಬಗ್ಗೆ ಅರ್ಜಿದಾರರು ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ ಎಂದು ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೆಝಾಮಿಯಾ ಮಸೀದಿ ಸಮಿತಿಯ ನ್ಯಾಯವಾದಿ ಪ್ರತಿಪಾದಿಸಿದ್ದಾರೆ. ಜ್ಞಾನವಾಪಿ ಮಸೀದಿಯ ವುಝ 66 ಖಾನದಲ್ಲಿ ಕಾರಂಜಿ ಮಾತ್ರ ಇದೆ. ಶಿವಲಿಂಗ ಇದೆ ಎಂದು ಪ್ರತಿಪಾದಿಸುತ್ತಿರುವುದು ದಾರಿ ತಪ್ಪಿಸುವ ಹೇಳಿಕೆ. ದೂರುದಾರರು ಶಿವಲಿಂಗ ಎಂದು ಪ್ರತಿಪಾದಿಸುತ್ತಿರುವುದು ಕಾರಂಜಿಯನ್ನು' ಎಂದು ಅವರು ಹೇಳಿದ್ದಾರೆ.

ಆದೇಶದಂತೆ ನಡೆಸಲಾದ ಸರ್ವೇ ಸಂದರ್ಭದಲ್ಲಿ ಮಸೀದಿ ಸಂಕೀರ್ಣದ ಚಿತ್ರೀಕರಣದ ಕೊನೆಯ ದಿನ 'ಶಿವಲಿಂಗ' ಅಥವಾ ಶಿವನ ವಿಗ್ರಹದ ಅವಶೇಷ ಪತ್ತೆಯಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಇಂದು ಬೆಳಗ್ಗೆ ಕೊಳದಿಂದ ನೀರು ಬರಿದು ಮಾಡಲಾಯಿತು. ಈ ಸಂದರ್ಭ 'ಶಿವಲಿಂಗ' ಪತ್ತೆಯಾಯಿತು ಎಂದು ದೇಗುಲದಲ್ಲಿ ವರ್ಷ ಪೂರ್ತಿ ಪೂಜೆಗೆ ಅವಕಾಶ ನೀಡುವಂತೆ ಕೋರಿದ ಹಿಂದೂ ಮಹಿಳೆಯರ ಗುಂಪನ್ನು ಪ್ರತಿನಿಧಿಸಿದ ನ್ಯಾಯವಾದಿ ಸುಭಾಷ್ ನಂದನ್ ಚತುರ್ವೇದಿ ಪ್ರತಿಪಾದಿಸಿದ್ದಾರೆ.

ಶಿವಲಿಂಗ ಪತ್ತೆಯಾಗಿದೆ ಎನ್ನಲಾದ ಮಸೀದಿಯ 'ವುಝ' ಅಥವಾ ಅಂಗ ಸ್ನಾನಕ್ಕೆ ಬಳಸುವ ಕೊಳಕ್ಕೆ ನಿರ್ಬಂಧ ವಿಧಿಸುವಂತೆ ದೂರುದಾರರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಮನವಿಯನ್ನು ನ್ಯಾಯಾಲಯ ಸ್ವೀಕರಿಸಿತು ಹಾಗೂ ಸದ್ಯ ಕೊಳವನ್ನು ಬಳಸುತ್ತಿಲ್ಲ ಎಂದು ಖಾತರಿಪಡಿಸುವಂತೆ ವಾರಣಾಸಿ ಜಿಲ್ಲಾ ದಂಡಾಧಿಕಾರಿಗೆ ಆದೇಶಿಸಿತು.

ನಿರ್ಬಂಧಿತ ಪ್ರದೇಶಕ್ಕೆ ಯಾರೊಬ್ಬರು ಪ್ರವೇಶಿಸುತ್ತಿಲ್ಲವೆಂದು ಜಿಲ್ಲಾ ದಂಡಾಧಿಕಾರಿ, ಪೊಲೀಸ್ ವರಿಷ್ಠ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಅಧಿಕಾರಿ ಖಾತರಿ ನೀಡಲಿದ್ದಾರೆ ಎಂದು ನ್ಯಾಯಾಲಯ ತಿಳಿಸಿತು.

ಮಾಧ್ಯಮದೊಂದಿಗೆ ಮಾತನಾಡುವ ಸಂದರ್ಭ ವಾರಣಾಸಿಯ ಜಿಲ್ಲಾ ದಂಡಾಧಿಕಾರಿ ಕೌಶಲ್ ರಾಜ್ ಶರ್ಮಾ ಅವರು ಮಸೀದಿ ಸಂಕೀರ್ಣದ ಆವರಣದಲ್ಲಿ 'ಶಿವಲಿಂಗ' ಪತ್ತೆಯಾಗಿರುವ ವರದಿಯನ್ನು ದೃಢಪಡಿಸಿಲ್ಲ.

“ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವಿವರವನ್ನು ಆಯೋಗದ ಯಾವೊಬ್ಬ ಸದಸ್ಯ ಕೂಡ ಬಹಿರಂಗಪಡಿಸಿಲ್ಲ. ನ್ಯಾಯಾಲಯ ಈ ಸಮೀಕ್ಷೆಯ ಕುರಿತ ಮಾಹಿತಿಯ ಸಂರಕ್ಷಕ' ಎಂದು ಶರ್ಮಾ ಅವರು ಹೇಳಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...