ಕಾರವಾರ: ಕೋವಿಡ್ ಎರಡನೇ ಅಲೆ ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ- ಡಿಸಿ

Source: S.O. News service | By S O News | Published on 28th April 2021, 2:04 PM | Coastal News |

ಕಾರವಾರ: ಬೆಡ್, ಆಕ್ಸಿಜನ್ ಹಾಗೂ ವ್ಯಾಕ್ಸಿನ್ ಸೇರಿದಂತೆ ವಿವಿಧ ಅಗತ್ಯಗಳಿಗೆ ಕ್ರಮಗಳನ್ನು ಕೈಗೊಂಡು ಹೆಚ್ಚುತ್ತಿರುವ ಕೋವಿಡ್-19 ಎರಡನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾಡಳಿದಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕೋವಿಡ್ ರೋಗಿಗಳಿಗಾಗಿ ಜಿಲ್ಲೆಯ ಎಲ್ಲ ತಾಲೂಕ ಆಸ್ಪತ್ರೆಗಳು, ಕಿಮ್ಸ್ ಹಾಗೂ ಒಂದು ಸಿಹೆಚ್‍ಸಿಎಲ್ ಸೇರಿದಂತೆ 1830 ಬೆಡ್‍ಗಳನ್ನು ಈಗಾಗಲೇ ಗುರುತಿಸಿ ಕಾಯ್ದಿರಿಸಲಾಗಿದೆ. ಈ ಪೈಕಿ 1085 ಬೇಡ್‍ಗಳು ಸಾಮಾನ್ಯ, 48 ಹೈಪೋ ಆಕ್ಸಿಜನ್ ಬೆಡ್‍ಗಳು, 368 ಹೆಚ್‍ಎಫ್‍ಎನ್‍ಸಿ ಮತ್ತು ಸಿಂಪಲ್ ಆಕ್ಸಿಜನ್ ಬೆಡ್‍ಗಳು, 136 ಐಸಿಯು ಬೆಡ್‍ಗಳಿವೆ. ಸಾಮಾನ್ಯ ಬೆಡ್‍ಗಳಲ್ಲಿ 562 ಲಭ್ಯವಿದ್ದು, 123 ಬೆಡ್‍ಗಳು ಬಳಕೆಯಾಗುತ್ತಿವೆ. ಹೆಚ್‍ಎಫ್‍ಎನ್‍ಸಿ ಬೆಡ್‍ಗಳಲ್ಲಿ 59 ಲಭ್ಯವಿದ್ದು, ಐದು ಬೆಡ್‍ಗಳು ಬಳಕೆಯಾಗುತ್ತಿವೆ. 368 ಸಿಂಪಲ್ ಆಕ್ಸಿಜನ್ ಬೆಡ್‍ಗಳಲ್ಲಿ 90 ಮಾತ್ರ ಲಭ್ಯವಿದ್ದು, 76 ಐಸಿಯು ಬೆಡ್‍ಗಳಲ್ಲಿ 71 ಲಭ್ಯವಿವೆ. ಅದಲ್ಲದೇ 65 ಹೆಚ್ಚುವರಿ ಬೆಡ್‍ಗಳನ್ನು ಅಳವಡಿಸುವ ಸಿದ್ಧತೆಯನ್ನು ಮಾಡಿಕೊಂಡಿದ್ದು, ಅಗತ್ಯಕ್ಕೆ ಅನುಗುಣವಾಗಿ ಬಳಸಲಾಗುವುದು. ಹೀಗಾಗಿ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಸಧ್ಯಕ್ಕೆ ಬೆಡ್‍ಗಳ ಕೊರತೆಯ ಯಾವುದೇ ರೀತಿಯ ಸಮಸ್ಯೆಯಿಲ್ಲ. ಆದರೂ ಶಿರಸಿ ಮತ್ತು ಕುಮಟಾ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಿದ್ಧತೆಗಾಗಿ ಹೆಚ್ಚುವರಿಯಾಗಿ ಬೆಡ್‍ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಕಾರವಾರದಲ್ಲಿರುವ ಬೆಡ್‍ಗಳು ಭರ್ತಿಯಾದ ಸನ್ನಿವೇಶ ಉಂಟಾದUttara Kannada DC Mullai Muhilanರೆ ಈ ಬೆಡ್‍ಗಳ ಬಳಕೆಗೆ ಅನುಮತಿ ನಿಡಲಾಗುವುದು. ಜೋತೆಗೆ ಈ ಶಿರಸಿ ಮತ್ತು ಕುಮಟಾದಲ್ಲಿ ಆಕ್ಸಿಜನ್ ಸಪ್ಲಾಯ್ ಬೆಡ್‍ಗಳಿದ್ದು, ಆರೋಗ್ಯ ಸಿಬ್ಬಂದಿಗಳು ಲಭ್ಯವಿದ್ದಾರೆ. ಆದರೂ ಬೆರೆ ಕಡೆಗಳಿಂದ ಆರೋಗ್ಯ ಸಿಬ್ಬಂದಿಗಳನ್ನು ಕರೆಯಿಸಿಕೊಂಡು ಜನರಿಗೆ ಸೇವೆ ನೀಡಲಾಗುವುದು. ಇದರ ಜೊತೆಗೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ 367 ಬೆಡ್‍ಗಳ ಸಿದ್ಧತೆ ಮಾಡಲಾಗಿದೆ ಎಂದರು.

ಕಾರವಾರ ವೈದ್ಯಕೀಯ ಮಹಾವಿದ್ಯಾಲಯ ಉತ್ತಮ ಪ್ರಯೋಗಾಲಯ ವ್ಯವಸ್ಥೆ ಹೊಂದಿದ್ದು, ಕೋವಿಡ್ ನಿರ್ವಹಣೆಗೆ ಇದನ್ನೇ ನಂಬಿಕೊಳ್ಳಲಾಗಿದೆ. ಇದರಲ್ಲಿ ಈಗ 70 ಸಾಮಾನ್ಯ ಕೋವಿಡ್ ಬೆಡ್‍ಳಿದ್ದು, 19 ಬೆಡ್‍ಗಳಲ್ಲಿ ಜನರಿದ್ದಾರೆ. 50 ಐಸಿಯು ಬೆಡ್‍ಗಳಿದ್ದು, ಈ ಪೈಕಿ ಸೇಮಿ ಹಾಗೂ ಇಂಟನ್ಸ್‍ವ್ ಆಕ್ಸಿಜನ್ ಸೇರಿ 32 ಜನ ಕೋವಿಡ್ ಸೊಂಕಿತರಿದ್ದಾರೆ. ಹೈಪೋ ಆಕ್ಸಿಜನ್‍ನಿಂದ ಚೇತರಿಸಿಕೊಂಡವರು ಸಾಮಾನ್ಯ ಬೆಡ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಸಧ್ಯಕ್ಕೆ 557 ಜಂಬೋ, 152 ಸ್ಮಾಲ್ ಆಕ್ಸಿಜನ್ ಸಿಲಿಂಡರ್‍ಗಳಿವೆ. ಇದರ ಜೊತೆಗೆ ಕಾರವಾರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಒಂದು ಆಕ್ಸಿಜನ್ ಟ್ಯಾಂಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಯಾವುದೇ ವೈದ್ಯರೂ ಸಹ ಗರ್ಬಿಣಿ ಮಹಿಳೆಯರಿಗೆ ಕೋವಿಡ್ ನೆಗಟಿವ್ ರಿಪೋರ್ಟ್ ತರಲು ಸೂಚಿಸಬಾರದು. ಹಾಗೇನಾದರೂ ನೆಗಟಿವ್ ರಿಪೋರ್ಟ್ ಕೇಳಿದ್ದು ಕಂಡುಬಂದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೇಂಗಳೂರು ಸೇರಿದಂತೆ ಬೇರೆ ಪ್ರದೇಶಗಳಿಂದ ಆಗಮಿಸಿದಂತವರು ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್‍ಗೆ ಒಳಗಾಗಬೇಕು. ವಿವಿಧ ಕಾಯಿಲೆಗಳಿಗೆ ಒಳಗಾದವರು ಮುನ್ನೆಚ್ಚರಿಕೆ ಕ್ರಮವಾಗಿ ಹೋಮ್ ಐಸೋಲೇಶನ್‍ಗೆ ಒಳಗಾಗಬೇಕು. ಕೋವಿಡ್ ಲಕ್ಷಣಗಳು ಕಂಡುಬಂದವರು ಮಾತ್ರ ಪರೀಕ್ಷೆಗೆ ಒಳಗಾಗಬೇಕು. ಜೊತೆಗೆ ಕೋವಿಡ್ ಸಮಬಂಧಿತ ಸಮಸ್ಯೆಗಳೆನಾದರೂ ಇದ್ದರೆ ತಕ್ಷಣ ಜಿಲ್ಲಾಡಳಿತದಿಂದ ಗುರುತಿಸಲಾದ ತಾಲೂಕ ಹಾಗೂ ಸೆಕ್ಟರ್ ಆಫಿಸರ್

ಅಥವಾ ಕೋವಿಡ್ ನೋಂದಣಿ ಕೇಂದ್ರದ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬೇಕು. ಇದರ ಜೊತೆಗೆ ಸಂಬಂಧಪಟ್ಟ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರನ್ನ ಸಂಪರ್ಕಿಸಬೇಕು. ಅದಲ್ಲದೇ ಹೊರಗಡೆಯಿಂದ ಬಂದಂತವರನ್ನು ಗುರುತಿಸಿ ಅವರ ಮೇಲೆ ನಿಗಾವಹಿಸಲು ವಿಲೇಜ್ ಟಾಸ್ಕ್ ಪೋರ್ಸ ಸಮಿತಿ ಕಾರ್ಯ ನಿರ್ವಹಿಸಲಿದೆ. ಹೀಗಾಗಿ ಮುಂದಿನ 15 ದಿನಗಳ ಕಾಲ ಜಿಲ್ಲೆಯ ಜನರು ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾತನಾಡಿ, ಅಂತರ್ ರಾಜ್ಯ ಸಂಚಾರಕ್ಕೆ ಅವಕಾಶವಿದ್ದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ಇದಲ್ಲದೇ ಅಗತ್ಯ ಸಂದರ್ಭದಲ್ಲಿ ಆಯಾ ತಹಶೀಲ್ದಾರರ್ ಅನುಮತಿ ಪತ್ರದೊಂದಿಗೆ ಅಂತರ್ ತಾಲೂಕಾ ಹಾಗೂ ಗ್ರಾಮಗಳ ಸಂಚಾರಕ್ಕೂ ಅವಕಾಶ ನೀಡಲಾಗುವುದು. ಸರಕಾರದ ಮಾರ್ಗಸೂಚಿಯಂತೆ

ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರಿದಿಗೆ ಅನುಮತಿಯಿದೆ. ಇದನ್ನು ಹೊರತುಪಡಿಸಿ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಅಥವಾ ಸರಕಾರ ಸೂಚಿಸಿರುವ ಕ್ಷೇತ್ರಗಳ ಹೊರತಾಗಿ ಯಾರಾದರೂ ಹೊರಗಡೆ ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಪ್ರಿಯಾಂಗಾ ಎಂ., ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ., ಕಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ್ ನಾಯಕ, ಡಿಸ್ಟಿಕ್ ಸರ್ಜನ್ ಡಾ. ಶಿವಾನಂದ್ ಕುಡ್ತಲ್‍ಕರ್, ಡಾ. ಶ್ರೀನಿವಾಸ್, ಡಾ. ಅಮಿತ್ ಕಾಮತ್, ಡಾ. ಪ್ರಶಾಂತ್ ಇದ್ದರು.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...