ಉ.ಪ.: ಯೋಗಿ ಸಂಪುಟದ ಮೂರನೇ ವಿಕೆಟ್ ಪತನ

Source: vb | By I.G. Bhatkali | Published on 14th January 2022, 8:05 AM | National News |

ಲಕ್ನೋ: ಚುನಾವಣೆಯ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಆಘಾತಗಳ ಸರಣಿ ಮುಂದುವರಿದಿದೆ. ಯೋಗಿ ಆದಿತ್ಯನಾಥ ಸರಕಾರವು ಮಂಗಳವಾರ ಮೂರನೇ ಸಚಿವ ಹಾಗೂ ಒಬಿಸಿ ನಾಯಕ ಧರಮ್ ಸಿಂಗ್‌ ಸೈನಿ ಅವರನ್ನು ಕಳೆದುಕೊಂಡಿದೆ. ಶಿಕೋಹಾಬಾದ್‌ ಬಿಜೆಪಿ ಶಾಸಕ ಮುಕೇಶ್ ವರ್ಮಾ ಕೂಡ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ ಬಿಜೆಪಿಯನ್ನು ತೊರೆದಿರುವ ಸಚಿವರು ಮತ್ತು ಶಾಸಕರ ಸಂಖ್ಯೆ 10ಕ್ಕೇರಿದೆ. ಈ ಎಲ್ಲ ನಾಯಕರು ಅಖಿಲೇಶ್ ಯಾದವ ಸಮಾಜವಾದಿ ಪಕ್ಷ (ಎಸ್ಪಿ)ವನ್ನು ಸೇರಲಿದ್ದಾರೆ ಎನ್ನಲಾಗಿದೆ.

ಸಹರಾನಪುರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸೈನಿ ಬಿಜೆಪಿಯನ್ನು ತೊರೆಯಲಿರುವುದನ್ನು ಬುಧವಾರವಷ್ಟೇ ನಿರಾಕರಿಸಿದ್ದರು.

ಬಿಜೆಪಿಯಿಂದ ಸರಣಿ ನಿರ್ಗಮನಕ್ಕೆ ನಾಂದಿ ಹಾಡಿದ್ದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರನ್ನೂ ತರಾಟೆ ಗೆತ್ತಿಕೊಂಡಿದ್ದ ಸೈನಿ, ಮೌರ್ಯ ಅವರ ಬಿಜೆಪಿಯನ್ನು ತೊರೆಯಲಿರುವವರ ಪಟ್ಟಿಯಲ್ಲಿ ತನ್ನ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆ. ತಾನು ಬಿಜೆಪಿಯಲ್ಲಿದ್ದೇನೆ ಮತ್ತು ಬಿಜೆಪಿಯಲ್ಲಿಯೇ ಇರುತ್ತೇನೆ. ತಾನು ಪಕ್ಷವನ್ನು ತೊರೆಯುವುದಿಲ್ಲ ಎಂದು ವೀಡಿಯೊ ಸಂದೇಶದಲ್ಲಿ ಹೇಳಿಕೊಂಡಿದ್ದರು. ಆದರೆ ಬಳಿಕ ತನ್ನ ಸರಕಾರಿ ನಿವಾಸ ಮತ್ತು ಭದ್ರತೆಯನ್ನು ಮರಳಿಸುವ ಮೂಲಕ ತನ್ನ

ನಿರ್ಗಮನದ ಸುಳಿವನ್ನು ನೀಡಿದ್ದರು. ಪಕ್ಷವನ್ನು ತೊರೆಯದಂತೆ ಮನವೊಲಿಸಲು ಯೋಗಿ ಆದಿತ್ಯನಾಥ ಅವರೂ ಸೈನಿಯವರಿಗೆ ಕರೆ ಮಾಡಿದ್ದರು ಎಂದು ಬಲ್ಲ ಮೂಲಗಳು ತಿಳಿಸಿವೆ.

ಸೈನಿ ಅವರ ರಾಜೀನಾಮೆಯು ಈಗಾಗಲೇ ಬಿಜೆಪಿಯಿಂದ ಹೊರಬಿದ್ದಿರುವ ನಾಯಕರ ಮಾದರಿಯನ್ನೇ ಅನುಸರಿಸಿದ್ದು, ಅಖಿಲೇಶ್ ಅವರು ಸೈನಿ ಜೊತೆಯಲ್ಲಿರುವ ಚಿತ್ರವನ್ನು ಶೇರ್ ಮಾಡಿಕೊಂಡು ಅವರನ್ನು ತನ್ನ ಸ್ವಾಗತಿಸುವ ಮೂಲಕ ಪಕ್ಷಾಂತರದಲ್ಲಿ ಪಾತ್ರವನ್ನು ನಿರ್ವಹಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಇನ್ನೋರ್ವ ಹಿಂದುಳಿದ ಜಾತಿಗಳ ನಾಯಕ ಮುಕೇಶ್ ವರ್ಮಾ ಅವರು ಬಿಜೆಪಿಯನ್ನು ತೊರೆದಿದ್ದು, ತನ್ನ ರಾಜೀನಾಮೆ ಪತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ವಾರ ಬಿಜೆಪಿ ತೊರೆದಿರುವ ಹೆಚ್ಚಿನ ನಾಯಕರೊಂದಿಗಿನ ತನ್ನ ಚಿತ್ರಗಳನ್ನು ಅಖಿಲೇಶ್ ಯಾದವ್ ಹಂಚಿ ಕೊಂಡಿದ್ದಾರೆ. ರಾಜೀನಾಮೆ ಪತ್ರಗಳಲ್ಲಿ ಒಂದೇ ಬಗೆಯ ಪದಗುಚ್ಛಗಳು ಬಳಕೆಯಾಗಿರುವುದು ಇದೊಂದು ಯೋಜಿತ ಕಾರ್ಯತಂತ್ರವಾಗಿದೆ ಎಂದು ಬೆಟ್ಟು ಮಾಡಿದೆ.

ಹಿಂದುಳಿದ ವರ್ಗಗಳ ಈ ನಾಯಕರ ನಿರ್ಗಮನಗಳು ಫೆಬ್ರವರಿ-ಮಾರ್ಚ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯ ಎದುರಾಳಿಯಾಗಿರುವ ಅಖಿಲೇಶ್ ಯಾದವ್ ಅವರ ಉತ್ಸಾಹವನ್ನು ಹೆಚ್ಚಿಸಿವೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...