ಹೊನ್ನಾವರ: ಅನಗತ್ಯ ತಿರುಗಾಟ: ನೂರಕ್ಕೂ ಹೆಚ್ಚು ವಾಹನ ವಶಕ್ಕೆ ಪಡೆದು ಬಿಡುಗಡೆ

Source: S.O. News service | By S O News | Published on 10th May 2021, 11:20 AM | Coastal News |

ಹೊನ್ನಾವರ: ಪಟ್ಟಣದಲ್ಲಿ ಅನಗತ್ಯವಾಗಿ ತಿರುಗಾಟ ನಡೆಸುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ನೂರಕ್ಕೂ ಅಧಿಕ ಸವಾರರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10 ಗ೦ಟೆ೦ರವರಗ ಅವಕಾಶ ನಿಡಿದೆ. ಇದರ ಹೊರತಾಗಿ 10 ಗಂಟೆಯ ನಂತರವೂ ಅನಗತ್ಯವಾಗಿ ತಿರುಗಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಪೊಲೀಸರು ಪಟ್ಟಣದಲ್ಲಿ ಅನಗತ್ಯವಾಗಿ ತಿರುಗಾಟ ನಡೆಸುವ ವಾಹನಗಳಿಗೆ ಶಾಕ್ ನೀಡಲು ಮುಂದಾದರು.

ಶನಿವಾರ ಸಿಪಿಐ ಶ್ರೀಧರ ಎಸ್.ಆರ್., ಪಿಎಸ್‌ಐಗಳಾದ ಶಶಿಕುಮಾರ, ಸವಿತ್ರಿ ನಾಯ್ಕ ಹಾಗೂ ಸಿಬ್ಬಂದಿ ವರ್ಗದವರು ಬೆಳಿಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ತಿರುಗಾಡುತ್ತಿದ್ದ 75ಕ್ಕೂ ಅಧಿಕ ದ್ವಿಚಕ್ರ

ವಾಹನಗಳನ್ನು ತಡೆದು ನಿಲ್ಲಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಠಾಣೆಯ ಬಳಿ ಮಾತನಾಡಿದ ಸಿಪಿಐ ಶ್ರೀಧರ ಎಸ್.ಆರ್., ಕೊರೋನಾ ನಿಯಂತ್ರಣಕ್ಕಾಗಿ ಸರಕಾರ ಮೇ 24ರವರೆಗೆ ಲಾಕ್ ಡೌನ್ ಮಾಡಲು ಆದೇಶಿಸಿದೆ. ಆದರೆ 10 ಗಂಟೆಯ ನಂತರವು ಸಹ ತುರ್ತು ಸೇವೆ ಹೊರತಾಗಿ ಹೊರ ಬರುವವರ ಸ೦ಖ್ಯೆ ಹೆಚ್ಚಾಗುತ್ತಿರುವುದು ಇಲಾಖೆಯ ಗಮನಕೆ ಬಂದಿದೆ. ಇಂದಿನಿಂದ ಇದು ಪುನರಾವರ್ತನೆ ಆದಲ್ಲಿ ಅ೦ತಹ ವಾಹನಗಳನ್ನು ತಡೆದು ಎಫ್‌ಐಆರ್‌ ದಾಖಲಿಸಿ ಸೀಸ್ ಮಾಡಲಾಗುವುದು ಎಂದು ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.

ಇದೇ ರೀತಿ ಮಂಕಿ ಠಾಣಾ ವ್ಯಾಪ್ತಿಯಲ್ಲಿ ಪರಮಾನಂದ ಕೊಣ್ಣುರು ನೇತ್ರತ್ವದಲ್ಲಿ ವಾಹನವನ್ನು ತಡೆದು ನಂತರ ವಾಹನಗಳ ದಾಖಲೆಗಳನ್ನು ಪರಿಶೀಲಿಸಿ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.

Read These Next