ಭಟ್ಕಳ: ನವಾಯತ್ ಕಾಲೋನಿ ಅಮೀನುದ್ದೀನ್ ರಸ್ತೆಯಲ್ಲಿ ಮನೆ ಕಳುವು

Source: sonews | By Staff Correspondent | Published on 17th August 2017, 6:41 PM | Coastal News | Don't Miss |

ಭಟ್ಕಳ: ಭಟ್ಕಳದಲ್ಲಿ ಮನೆಕಳುವು ಪ್ರಕರಣಗಳು ದಿನೆ ದಿನೇ ಹೆಚ್ಚಾಗುತ್ತಿದ್ದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಸದೂಪಯೋಗಪಡಿಸಿಕೊಳ್ಳುತ್ತಿರುವ ಕಳ್ಳರು ಮನೆಯಲ್ಲಿದ್ದ ವಸ್ತು,ಹಣ,ಒಡವೆಗಳನ್ನು ದೋಚುತ್ತಿದ್ದಾರೆ.

ಗುರುವಾರ ಇಂತಹದ್ದೆ ಮನೆಕಳುವು ಘಟನೆ ಮರುಕಳಿಸಿದ್ದು ಈ ಬಾರಿ ಕಳ್ಳರಿಗೆ ಮನೆಯಿಂದ ಚಿನ್ನಾಭರಣಗಳಾಗಲಿ, ಹಣವಾಗಲಿ ದೊರೆಯದೆ ಇರುವುದರಿಂದ ಕೇವಲ ಬಟ್ಟೆಬರೆಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದ್ದಾರೆ.

ನವಾಯತ್ ಕಾಲೋನಿ ವ್ಯಾಪ್ತಿಯ ಮೂಸಾನಗರ ಬಳಿಯ ಅಮೀನುದ್ದೀನ್ ರಸ್ತೆಯಲ್ಲಿರುವ ಮೊಹತೆಶಮ್ ಮುಖ್ತಾರ್ ರಿಗೆ ಸೇರಿದ ’ಫರ್ಹೀನ್ ಮಂಝೀಲ್’ ಮನೆಯಲ್ಲಿ ಕಳ್ಳರು ಕಳ್ಳತನ ಮಾಡಿದ್ದಾಗಿ ತಿಳಿದುಬಂದಿದೆ. ಈ ಮನೆಯ ಮಾಲಿಕರು ಗಲ್ಫ್ ನಲ್ಲಿ ವಾಸಿಸುತ್ತಿದ್ದು ಮನೆಯಲ್ಲಿ ಯಾರೂ ವಾಸಿಸುವುದಿಲ್ಲ. ಮನೆಯನ್ನು ನೋಡಿಕೊಳ್ಳವು ವ್ಯಕ್ತಿಯೊಬ್ಬರು ಎರಡು-ಮೂರು ದಿನಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು ಎನ್ನಲಾಗಿದ್ದು ಗುರುವಾರ ಬೆಳಿಗ್ಗೆ ಎಂದಿನಂತೆ ಮನೆಗೆ ಬಂದಾಗ ಮನೆಕಳುವು ಆಗಿರುವುದು ಗಮನಕ್ಕೆ ಬಂದಿದೆ. ಮನೆಯಲ್ಲಿ ಹಣ,ಚಿನ್ನಾಭರಣೆ ಯಾವುದೇ ಇಲ್ಲದೆ ಇರುವುದರಿಂದಾಗಿ ಕಳ್ಳರು ಕೇವಲ ಬಟ್ಟೆಬರೆಗಳನಷ್ಟೇ ಕಳುವುಗೈದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಚಿನ್ನಾಭರಣ ಮತ್ತು ನಗದು ಹಣವನ್ನು ಕಳುವುಗೈದಿದ್ದರು ಎಂದು ತಿಳಿದುಬಂದಿದೆ.

Read These Next