ಭಟ್ಕಳದಲ್ಲಿ ಮತ್ತೊಂದು ಮನೆಗೆ ಕನ್ನ: 10 ಸಾವಿರ ಕದ್ದು ಪರಾರಿ

Source: sonews | By Staff Correspondent | Published on 28th January 2018, 11:54 PM | Coastal News | Don't Miss |


ಭಟ್ಕಳ: ಇಲ್ಲಿನ ಮದೀನಾ ಕಾಲೋನಿಯ ಮನೆಯೊಂದರ ಎದುರಿಗಿನ ಬಾಗಿಲು ಮುರಿದು ಮನೆಯಲ್ಲಿನ ಬೆಡ್‍ರೂಮ್‍ನ ಕಪಾಟು ಒಡೆದು ಅಲ್ಲಿದ್ದ ನಗದು ಕದ್ದು ಪರಾರಿಯಾಗಿದ್ದಾರೆ. 
ಶುಕ್ರವಾರದಂದು ಮದೀನಾ ಕಾಲೋನಿಯ ಮಹ್ಮದ್ ಸಾದುಲ್ಲಾ ಎನ್ನುವವರು ತಮ್ಮ ಹೆಂಡತಿಗೆ ಶಸ್ತ್ರಚಿಕಿತ್ಸೆ ನಿಮಿತ್ತ ಶುಕ್ರವಾರದಂದು ಬೆಳಿಗ್ಗೆ ಮಂಗಳುರಿಗೆ ತೆರಳಿದ್ದು, ಮನೆಯಲ್ಲಿ ಯಾರು ಇಲ್ಲದ ಸಂಧರ್ಭದಲ್ಲಿ ಮನೆಯ ಎದುರಿಗಿನ ಬಾಗಿಲು ಒಡೆದು ಭಾರತದ 6000 ರೂ. ಹಾಗೂ ಸೌದಿ ಮೂಲದ 4000 ರೂ. ನೋಟಗಳು ಸೇರಿ ಒಟ್ಟು 10 ಸಾವಿರ ಕದ್ದು ಪರಾರಿಯಾಗಿದ್ದಾರೆ. ಮನೆಯ ಬಾಗಿಲು ತೆರೆದಿರುವುದನ್ನು ಮನೆಯ ಅಕ್ಕಪಕ್ಕದವರು ನೋಡಿ ಸಂಶಯಗೊಂಡು ಮನೆಯ ಸಂಬಂಧಿಕರಿಗೆ ಹಾಗೂ ಮನೆಯ ಮಾಲೀಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ನಗರ ಪೋಲೀಸ್ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ನಗರ ಠಾಣೆಯ ಪಿಎಸೈ ಪರಮೇಶ್ವರಪ್ಪ ದೂರು ಸ್ವೀಕರಿಸಿದ್ದು, ತನಿಖೆ ಮುಂದುವರೆದಿದೆ.                                                            
 

Read These Next