ಸಂವಿಧಾನ ಭಾರತೀಯರಿಗೆ ಪವಿತ್ರ ಗ್ರಂಥ; ಸಂವಿಧಾನದ ಆಶಯ ಈಡೆರಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಪ್ರಧಾನ ಜಿಲ್ಲಾ ನ್ಯಾಯಾಧೀಶ ಉಮೇಶ ಅಡಿಗ

Source: SO News | By Laxmi Tanaya | Published on 26th November 2020, 11:33 PM | State News | Don't Miss |

ಧಾರವಾಡ :  ಸಂವಿಧಾನವು ಭಾರತೀಯರಿಗೆ ಪರಮ ಪವಿತ್ರ ಗ್ರಂಥವಾಗಿದ್ದು, ಪ್ರಸ್ತಾವನೆಯಲ್ಲಿರುವ ಆಶಯಗಳನ್ನು ಈಡೆರಿಸುವುದು ಪ್ರತಿಯೊಬ್ಬ ಭಾರತೀಯ ನಾಗರಿಕರ ಕರ್ತವ್ಯವಾಗಿದೆ ಎಂದು ಧಾರವಾಡ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಎಂ.ಅಡಿಗ ಅವರು ಹೇಳಿದರು.

 ಅವರು ಗುರುವಾರ ಬೆಳಿಗ್ಗೆ ಸಿವ್ಹಿಲ್ ನ್ಯಾಯಾಲಯಗಳ ಆವರಣದಲ್ಲಿರುವ ಎಡಿಆರ್ ಕಟ್ಟಡದ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ, ಧಾರವಾಡ ವಕೀಲರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಸಂವಿಧಾನ ದಿನಾಚಣೆ ಕಾರ್ಯಕ್ರಮ ಹಾಗೂ ಅರೇಕಾಲಿಕ ಕಾನೂನು ಸ್ವಯಂ ಸೇವಕರ ಪ್ರವೇಶ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮತ್ತು ಪ್ರತಿಜ್ಞಾವಿಧಿ ಬೋಧಿಸಿ, ಮಾತನಾಡಿದರು.

 ಭಾರತ ದೇಶದ ಪ್ರಜಾಪ್ರಭುತ್ವದ ಸುಧೀರ್ಘ ಪಯಣದ ಹೆಜ್ಜೆ ಗುರುತುಗಳಾಗಿ ಪ್ರಜೆಗಳ ಹಿತರಕ್ಷಣೆ, ಜವಾಬ್ದಾರಿ, ಸಮಗ್ರ ಅಭಿವೃದ್ಧಿ, ರಾಷ್ಟ್ರೀಯ ಹಿತರಕ್ಷಣೆ ಸೇರಿದಂತೆ ಹವಾರು ಮೌಲ್ಯಗಳು ಸಂವಿಧಾನದಲ್ಲಿ ದಾಖಲಾಗಿವೆ ಎಂದರು.

ಪ್ರಸ್ತಾವನೆಯು ಸಂವಿಧಾನದ ಸಾರವನ್ನು ಹೊಂದಿದೆ. ಸಂವಿಧಾನ ದಿನಾಚರಣೆ ಮೂಲಕ ಇದನ್ನು ದೇಶದ ಪ್ರತಿಯೋಬ್ಬ ಪ್ರಜೆಗೆ ತಲುಪುವಂತೆ ಕಾರ್ಯ ಮಾಡಬೇಕೆಂದು ಹೇಳಿದರು.

  ಭಾರತದಲ್ಲಿ ಹಲವಾರು ಧರ್ಮ, ಧರ್ಮಗ್ರಂಥಗಳಿದ್ದರೂ ಎಲ್ಲರಿಗೂ ಅನ್ವಯಿಸುವ, ಎಲ್ಲರೂ ಆರಾಧಿಸುವ ಪವಿತ್ರ ಗ್ರಂಥ ಸಂವಿಧಾನವಾಗಿದ್ದು, ಎಲ್ಲರೂ ಅದರಂತೆ ನಡೆದುಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರು ತಿಳಿಸಿದರು.

 ಬಡವರಿಗೆ, ಅಸಹಾಯಕರಿಗೆ, ದುರ್ಬಲರಿಗೆ ನೆರವಾಗಲು, ಸಹಾಯ ಮಾಡಲು ನ್ಯಾಯಾಲಯಗಳು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಅರೇ ಕಾನೂನು ಸ್ವಯಂ ಸೇವಕರನ್ನು ಆಯ್ಕೆ ಮಾಡುವ ಮೂಲಕ ಆಸಕ್ತರಿಗೆ ಅವಕಾಶ ನೀಡಿದೆ. 

 ಅರೇ ಕಾನೂನು ಸ್ವಯಂ ಸೇವಕರು ಆತ್ಮಸಾಕ್ಷಿಯಿಂದ ಶ್ರಮಿಸಬೇಕು. ಅಗತ್ಯವಿರುವವರಿಗೆ ಉಚಿತವಾಗಿ ಕಾನೂನಿನ ಅರಿವು ಮತ್ತು ನೆರವು ನೀಡಲು ತೊಡಗಿಸಿಕೊಳ್ಳಬೇಕು. ಸಮಾಜದ ಋಣ ತೀರಿಸಲು ಇದೊಂದು ಸದಾವಕಾಶವಾಗಿದ್ದು, ಪ್ರತಿ ಕಾನೂನು ಸೇವಕರು ಪ್ರಮಾಣಿಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಬೆಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ ಅಡಿಗ ತಿಳಿಸಿದರು.

 ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಿನ್ನಣ್ಣವರ ಆರ್.ಎಸ್. ಅವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಭಾರತದ ಸಂವಿಧಾನ ವಿಶ್ವದಲ್ಲಿಯೆ ಶ್ರೇಷ್ಠವಾದ, ಸುಧೀರ್ಘವಾದ ಸಂವಿಧಾನವಾಗಿದೆ. ಸಂವಿಧಾನದ ನಿಯಮಗಳನ್ನು ಪಾಲಿಸುವುದರಿಂದ ಸಮಾಜದಲ್ಲಿ ಎಲ್ಲರೂ ನೆಮ್ಮದಿಯಿಂದ ಗೌರವಯುತವಾಗಿ ಬದುಕುತ್ತಾರೆ ಎಂದು ಹೇಳಿದರು.
 ಜಿಲ್ಲಾ ಕಾನೂನು ಸೇವೆಗಳನ್ನು ಜನಸಾಮಾನ್ಯರಿಗೆ, ಅಸಹಾಯಕರಿಗೆ ಉಚಿತವಾಗಿ ತಲುಪಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅರೇ ಕಾನೂನು ಸ್ವಯಂ ಸೇವಕರನ್ನು ಆಯ್ಕೆ ಮಾಡಿದೆ. ಕಾರ್ಯಾಗಾರದ ಮೂಲಕ ಅಗತ್ಯ ಮಾಹಿತಿ, ತರಬೇತಿ ನೀಡಲಾಗುತ್ತಿದೆ. ಸ್ವಯಂ ಸೇವಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಣ್ಣು, ಕಿವಿ, ಬಾಯಿ, ಕೈಗಳಾಗಿ ನಿಸ್ವಾರ್ಥದಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಅವರು ಹೇಳಿದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಘೋಡಸೆ ಮಾತನಾಡಿದರು.

 ಅತಿಥಿಗಳಾಗಿ ಧಾರವಾಡ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ, ಕೆ.ಎ.ಎಸ್. ಪ್ರೋಬೇಷನರಿ ಅಧಿಕಾರಿ ರಾಘವೆಂದ್ರ ಜಗಳಸರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಎನ್.ಎ.ಪುಟ್ಟಪ್ಪನವರ, ಧಾರವಾಡ ತಾಲೂಕಾ ಆರೋಗ್ಯಧಿಕಾರಿ ಡಾ. ತನುಜಾ ಕೆ.ಎನ್. ಸೇರಿದಂತೆ ಇತರರು ಭಾಗವಹಿಸಿದ್ದರು.
 ಹಿರಿಯ ಮಹಿಳಾ ನ್ಯಾಯವಾದಿ ಜೆ.ಎಲ್.ಗ್ರಾಮಪುರೋಹಿತ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಸೋಮಶೇಖರ ಜಾಡರ ವಂದಿಸಿದರು.
 ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲರು, ಅರೇ ಕಾನೂನು ಸೇವಕರು, ನ್ಯಾಯವಾದಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...