ಭಟ್ಕಳ ಪುರಸಭಾ ಅಧ್ಯಕ್ಷರ ಕಾರಿನ ಮೇಲಿನ ಕರ್ನಾಟಕ ಸರಕಾರ ಫಲಕ ಕಿತ್ತ ಆರ್‍ಟಿಓ

Source: S O News | By I.G. Bhatkali | Published on 20th January 2022, 6:33 PM | Coastal News |

ಭಟ್ಕಳ: ನಿಯಮಬಾಹೀರವಾಗಿ ಪುರಸಭಾ ಅಧ್ಯಕ್ಷರ ಕಾರಿನ ಮೇಲೆ ಅಳವಡಿಸಲಾಗಿದ್ದ `ಕರ್ನಾಟಕ ಸರಕಾರ' ಹೆಸರಿನ ನಾಮಫಲಕವನ್ನು ಆರ್‍ಟಿಓ ಅಧಿಕಾರಿಗಳು ಕಿತ್ತುಕೊಂಡಿದ್ದು, ಈ ಸಂಬಂಧ ಪುರಸಭಾ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ವ್ಯಕ್ತಿಯೋರ್ವರ ದೂರನ್ನು ಆಧರಿಸಿ ಬುಧವಾರ ಬೆಳಿಗ್ಗೆ ಪುರಸಭಾ ಕಚೇರಿಗೆ ಆಗಮಿಸಿದ ಎಆರ್‍ಟಿಓ ಎಲ್.ಪಿ.ನಾಯ್ಕ ಹಾಗೂ ಸಿಬ್ಬಂದಿಗಳು, ನಿಯಮಬಾಹೀರ ಕೃತ್ಯಕ್ಕೆ ನೋಟೀಸ್ ಜೊತೆಗೆ ರು.500 ದಂಡವನ್ನೂ ವಿಧಿಸಿದ್ದಾರೆ. ಭಟ್ಕಳ ಪುರಸಭೆಯ ವತಿಯಿಂದ 2021ರಲ್ಲಿ ಖರೀದಿಸಲಾಗಿದ್ದ ಈ ಇನ್ನೋವಾ ಕಾರನ್ನು ಅಧ್ಯಕ್ಷರು, ಕಚೇರಿಯ ಕೆಲಸ ಕಾರ್ಯಗಳಿಗೆ ಬಳಸುತ್ತ ಬಂದಿದ್ದು, ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಅಧ್ಯಕ್ಷರು, ಪುರಸಭೆ ಭಟ್ಕಳ, ಕರ್ನಾಟಕ ಸರಕಾರ ಎಂದು ನಾಮಫಲಕವನ್ನು ಅಳವಡಿಸಲಾಗಿತ್ತು.  ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಆರ್‍ಟಿಓ ಎಲ್.ಪಿ.ನಾಯ್ಕ, ಕಾರಿನ ಮೇಲೆ ಕರ್ನಾಟಕ ಸರಕಾರ ಮತ್ತು ಅಧ್ಯಕ್ಷರು ಎಂದು ಬರೆದಿರುವುದು ಕಾನೂನು ಬಾಹೀರವಾಗಿದ್ದು, ಸಾರ್ವಜನಿಕರ ದೂರಿನ ಮೇರೆಗೆ ಈ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. 
 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...