ಶ್ರೀನಿವಾಸಪುರ:ಅವಶ್ಯವಿದ್ದವರನ್ನು ಗುರುತಿಸಿ ನೆರವು ನೀಡುವುದೇ ನಿಜವಾದ ಸೇವೆ-ಬದ್ರಿಪ್ರಸಾದ್ 

Source: shabbir | By Arshad Koppa | Published on 24th July 2017, 8:11 AM | State News | Guest Editorial |

ಶ್ರೀನಿವಾಸಪುರ:  ಸೇವೆ ಅವಶ್ಯಕತೆ ಇರುವಂತಹವರನ್ನು ಗುರುತಿಸಿ ಅವರಿಗೆ ಅವಶ್ಯಕವಾದ ಸಹಾಯ ಮಾಡುವುದೇ ಮಾನವನ ನಿಜವಾದ ಸಾರ್ಥಕ ಬದುಕು ಎನಿಸಿಕೊಳ್ಳುತ್ತದೆ. ಈ ಕೆಲಸವನ್ನು ರೋಟರಿ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸಿಕೊಂಡು ಬರುತ್ತಿದ್ದು ಇಂತಹ ಸಂಸ್ಥೆಯಲ್ಲಿ ಸದಸ್ಯರಾಗುವುದು ಪೂರ್ವ ಜನ್ಮದ ಸುಕೃತವೆಂದು ಕೋಲಾರ ಜಿಲ್ಲಾ ರೋಟರಿ ಸೆಂಟ್ರಲ್‍ನ ನಿಕಟಪೂರ್ವ ಗವರ್ನರ್ ರೊಟೇರಿಯನ್ ಬದ್ರಿಪ್ರಸಾದ್ ತಿಳಿಸಿದರು.

    ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ನ 2017-18ನೇ ಸಾಲಿಗೆ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಇವರು ಭಾರತ ದೇಶದಲ್ಲಿ ಪೋಲಿಯೋ ಮುಕ್ತ ದೇಶವನ್ನು ಮಾಡಲು ದೇಶಾದ್ಯಂಥ 2013ರಿಂದ ಉಚಿತ ಪೋಲಿಯೋ ಲಸಿಕೆಯನ್ನು ನೀಡುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಿದೆ. ದೇಶದಲ್ಲಿ ವರ್ಷ 35ಲಕ್ಷ ಪೋಲಿಯೋ ಪೀಡಿತರಾಗುತ್ತಿದ್ದರು. ಇಂದಿನ ಅಂಕಿ ಅಂಶಗಳ ಪ್ರಕಾರ ಕೇವಲ 35 ಮಕ್ಕಳು ಮಾತ್ರ ಈ ಸೋಂಕಿನಿಂದ ಬಳಲುತ್ತಿರುವುದು ಕಂಡು ಬಂದಿದೆ. ಪ್ರತಿಯೊಂದು ಮಗುವಿಗೂ ಲಸಿಕೆ ನೀಡುತ್ತಿದ್ದರು ಈ ಕಾಯಿಲೆಯು ನೆರೆಯ ರಾಷ್ಟ್ರಗಳಿಂದ ಬಂದಿರಬಹುದೆಂದು ಅಂದಾಜಿಸಲಾಗಿದೆ. ಆದರೂ ನಮ್ಮ ದೇಶ ಪೋಲಿಯೋ ಮುಕ್ತ ದೇಶವಾಗಿಸಲು ರೋಟರಿ ಸಂಸ್ಥೆ ನಿರಂತರವಾಗಿ ಕಾರ್ಯ ನಿರತವಾಗಿದೆ ಎಂದರು.

    ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ನ ನಿಕಟಪೂರ್ವ ಅಧ್ಯಕ್ಷ ದಳಸನೂರು ಎಲ್.ಗೋಪಾಲಕೃಷ್ಣ ಮಾತನಾಡಿ ಕಳೆದ ಸಾಲಿನಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿ ರೋಟರಿ ಸಂಸ್ಥೆಯನ್ನು ಪ್ರಾರಂಬಿಸಿ ಜಿಲ್ಲೆಯ ಪ್ರಾರಂಭದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಈ ಸಂಸ್ಥೆಗೆ ಸೇರ್ಪಡೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದು ವರ್ಷದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಭಿರ ನಡೆಸಿ ಸುಮಾರು 136 ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆಯನ್ನು ಉನ್ನತ ಗುಣಮಟ್ಟದ ಆಸ್ಪತ್ರೆಯಲ್ಲಿ ಮಾಡಿಸಿ ಅವರನ್ನು ಸಂತೈಸಿದ ಹೆಗ್ಗಳಿಕೆ ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ಗೆ ಸಲ್ಲುತ್ತದೆ. ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತೀ ವರ್ಷ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಅವರ ಉನ್ನತ ಶಿಕ್ಷಣಕ್ಕೆ ಪ್ರೇರಣೆ ನೀಡಲಾಗುತ್ತಿದೆ. ಕಾಮದೇನು ಯೋಜನೆಯಲ್ಲಿ ಕೋಲಾರ ಜಿಲ್ಲೆಯ ಒಟ್ಟು 50 ಹಸುಗಳ ಉಚಿತ ವಿತರಣೆಯಲ್ಲಿ ಶ್ರೀನಿವಾಸಪುರ ಸಂಸ್ಥೆಗೆ 25 ಹಸುಗಳನ್ನು ನೀಡಿ ರೈತರ ಜೀವನೋಪಾಯಕ್ಕೆ ಸಹಕಾರಿ ನೀಡಿದ ಕೀರ್ತಿಗೆ ಪಾತ್ರವಾಗಿದೆ ಎಂದರು.

      ಜಿಲ್ಲಾ ಸಹಾಯಕ ಗವರ್ನರ್ ಗೋಪಾಲಕೃಷ್ಣಗೌಡ ಮಾತನಾಡಿ ಸೇವೆಯ ಅಮೂರ್ತ ರೂಪವೇ ರೋಟರಿ ಸಂಸ್ಥೆ. ದೇಶ ವಿದೇಶಗಳ ಜನರನ್ನು ಒಗ್ಗೂಡಿಸಿ ಅವರಿಗೆ ತಮ್ಮ ಜೀವಿತಾವಧಿಯಲ್ಲಿ ಸಂಪಾಧಿಸಿದ ಅಲ್ಪ ಸ್ವಲ್ಪ ಹಣವನ್ನು ಸಮಾಜದ ನಿರ್ಗತಿಕ ಕಟ್ಟ ಕಡೆಯ ವ್ಯಕ್ತಿಗೆ ಸಹಾಯ ನೀಡುವ ಮೂಲಕ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಕೇವಲ ಅಧಿಕಾರಿಗಳು, ಹಣವಂತರು, ಹೆಚ್ಚು ವಿಧ್ಯಾರ್ಜನೆ ಮಾಡುವವರು ಮಾತ್ರ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬ ಅನೇಕರಿಗೆ ತಪ್ಪು ಕಲ್ಪನೆಯಿದ್ದು ಈ ಸಂಸ್ಥೆಯಲ್ಲಿ ರೈತರು, ಕೂಲಿ ಕಾರ್ಮಿಕರು ಸಹ ಸದಸ್ಯರಾಗಬಹುದಾಗಿದೆ. ಬೆಂಗಳೂರಿನ ಕರುಣಾಮಯಿ ಎಂಬ ಸಂಸ್ಥೆಯನ್ನು ಪ್ರಾರಂಬಿಸಿ ಮಾರಕ ರೋಗಗಳಿಂದ ಬಳಲುತ್ತಿರುವ ನೂರಾರು ಜನರಿಗೆ ಆಶ್ರಯ ನೀಡಿ ಅವರ ಬದುಕಿನ ಕೊನೆ ದಿನಗಳನ್ನು ಸಂತೋಷದಾಯಕವಾಗಿ ಆಟ ಪಾಠಗಳಿಂದ ಅವರನ್ನು ಸಂತೈಸಲಾಗುತ್ತಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದೆ ಎಂದು ನುಡಿದರು.

  ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ರಾಜೇಂದ್ರಪ್ರಸಾದ್ ಮಾತನಾಡಿ ನನಗೆ ನೀಡಿರುವ ಈ ಒಂದು ವರ್ಷಗಳ ಕಾ¯ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲರ ಸಹಕಾರವನ್ನು ಪಡೆದುಕೊಂಡು ನಾನು ಅನೇಕ ಕಾರ್ಯಕ್ರಮಗಳನ್ನು ನಡೆಸಲಿದ್ದು ಅದನ್ನು ನಾನು ಬಹಿರಂಗ ಪಡಿಸದೆ ಮಾಡಿ ತೋರಿಸುತ್ತೇನೆ ಎಂದು ಉತ್ಸುಕರಾಗಿ ನುಡಿದರು.

   ನಿಕಟಪೂರ್ವ ಅಧ್ಯಕ್ಷರಾದ ಎಲ್.ಗೋಪಾಲಕೃಷ್ಣ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಎನ್.ರಾಜೇಂದ್ರಪ್ರಸಾದ್ ಮತ್ತು ಕಾರ್ಯದರ್ಶಿ ಎಸ್.ಶಿವಮೂರ್ತಿ ರವರಿಗೆ ಕಾಲರ್ ತೊಡಿಸುವ ಮೂಲಕ ಜವಾಬ್ದಾರಿಯನ್ನು ವಹಿಸಿಕೊಟ್ಟರು. ತಾಲೂಕಿನ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಜವಾಬ್ದಾರಿಯನ್ನು ಹಸ್ತಾಂತರಿಸಿದರು.
    

  ಕಾರ್ಯಕ್ರಮದಲ್ಲಿ ಜಿ.ಎಸ್.ಆರ್. ರೊಟೇರಿಯನ್ ಎಸ್.ವಿ.ಸುಧಾಕರ್, ಎಲ್‍ಐಸಿ ಡಿಓಗಳಾದ ಬಾಲಚಂದರ್ ಮತ್ತು ರವೀಂದ್ರಯ್ಯ ಕುಲಕಣ ್, ಡಾ.ವೆಂಕಟಾಚಲಪತಿ, ಡಾ.ವೇಣುಗೋಪಾಲರೆಡ್ಡಿ, ರೋಣೂರು ಚಂದ್ರಶೇಖರ್, ಮಂಜುನಾಥ್, ಸೀತಾರಾಮರೆಡ್ಡಿ, ಡಾ.ರವಿಕುಮಾರ್, ಪೂಲ ಶಿವಾರೆಡ್ಡಿ, ಗೋಪಾಲಗೌಡ ಇತರರು ಹಾಜರಿದ್ದರು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...