ಹಜ್ಜ್ ಯಾತ್ರೆಗೆ ಹೊರಗಿನವರಿಗೆ ಪರ್ವೇಶ್ ವಿಲ್ಲಾ; ಈ ವರ್ಷವು ಸೀಮಿತ್ ಮಂದಿಗೆ ಅವಕಾಶ'

Source: Agencies | By I.G. Bhatkali | Published on 12th June 2021, 8:57 PM | Global News |

ರಿಯಾದ್ : ಕೊರೊನಾ ಸೋಂಕಿನಿಂದಾಗಿ ಈ ಬಾರಿ ಹಜ್ ಯಾತ್ರೆಗೆ ಸೌದಿ ಅರೇಬಿಯಾದ  60 ಸಾವಿರ ಮಂದಿಗೆ ಮಾತ್ರ ಅವಕಾಶ ಕಲ್ಪಿಸಿ ಸೌದಿ ಅರೇಬಿಯಾ ಸರ್ಕಾರ ಆದೇಶ ಹೊರಡಿಸಿದೆ. 

ಸೌದಿ ಅರೇಬಿಯಾ ಕಿಂಗ್ಡಮ್ ಶನಿವಾರ ಈ ಪ್ರಕಟಣೆ ಹೊರಡಿಸಿರುವುದಾಗಿ ಅದರ ಸರ್ಕಾರಿ ಮಾಧ್ಯಮ ಏಜೆನ್ಸಿಯೊಂದು ತಿಳಿಸಿದೆ. ಹಜ್ ಸಚಿವಾಲಯ ಮತ್ತು ಉಮ್ರಾ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಉಲ್ಲೇಖಿಸಲಾಗಿದೆ. 

ಕಳೆದ ವರ್ಷವೂ ಕೊರೊನಾ ಕಾರಣದಿಂದ ಹಜ್ ಯಾತ್ರೆಯಲ್ಲಿ ಅತ್ಯಲ್ಪ ಮಂದಿಗೆ ಭಾಗಿಯಾಗಲು ಅವಕಾಶ ನೀಡಲಾಗಿತ್ತು. ಕಳೆದ ವರ್ಷ ಹಜ್ ಯಾತ್ರೆಗಾಗಿ ಆಯ್ಕೆಯಾಗಿರುವ 1 ಸಾವಿರ ಜನರು ಈಗಾಗಲೇ ಸೌದಿ ಅರೇಬಿಯಾ ಸುತ್ತಮುತ್ತ ಇದ್ದಾರೆ. 160 ವಿವಿಧ ರಾಷ್ಟ್ರಗಳ ಮೂರನೇ ಎರಡರಷ್ಟು ವಿದೇಶಿ ನಿವಾಸಿಗಳು ಸಾಮಾನ್ಯವಾಗಿ ಹಜ್ ಪ್ರತಿನಿಧಿಸುತ್ತಿದ್ದಾರೆ. 

ಈ ವರ್ಷದ ಜುಲೈ ಮಧ್ಯಭಾಗದಲ್ಲಿ ಆರಂಭವಾಗಲಿರುವ ಹಜ್ ಯಾತ್ರೆಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡಿರುವ 18ರಿಂದ 65 ವರ್ಷದೊಳಗಿನವರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಸೌದಿ ಅರೇಬಿಯಾದಲ್ಲಿ ಇರುವ ಸೀಮಿತ ಜನರು ಮಾತ್ರ ಹಜ್ ಕರ್ಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಈ ವರ್ಷ ಸೌದಿ ಅರೇಬಿಯಾದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದರೂ, ಹಜ್ ಯಾತ್ರೆಯ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿರಲಿಲ್ಲ. 
 

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...