ಭಟ್ಕಳ: ಕೆಡಿಪಿ ಸಭೆಯಲ್ಲಿ ಆರೋಗ್ಯ, ಕುಡಿಯುವ ನೀರು ಹಾಗೂ ವಿದ್ಯುತ್ ಸರಬರಾಜುಗೆ ಒತ್ತು

Source: S O News service | By Staff Correspondent | Published on 27th June 2016, 10:07 PM | Coastal News |


ಭಟ್ಕಳ ; ತಾಲೂಕಾ ಪಂಚಾಯತ್ ತ್ರೈಮಾಸಿಕ ಕೆ.ಡಿ.ಪಿ. ಸಭೆಯು ಸೋಮವಾರದಂದು ಭಟ್ಕಳ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಶಾಸಕ ಮಂಕಾಳ ಎಸ್ ವೈದ್ಯರ ಉಪಸ್ಥಿತಿಯಲ್ಲಿ ನಡೆದಿದ್ದು, ವಿಶೇಷವಾಗಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರಿನ ಸರಬರಾಜು, ಹಾಗೂ ಹೆಸ್ಕಾಂ ಇಲಾಖೆಗಳಿಗೆ ಹೆಚ್ಚಿನ ಒತ್ತು ಹಾಗು ಈ ಬಗ್ಗೆ ಹೆಚ್ಚು ಚರ್ಚೆಗಳು ನಡೆದವು. 
ಈ ಹಿಂದೆ ಮಾರ್ಚ ತಿಂಗಳಲ್ಲಿ ನಡೆದ ತಾಲೂಕಾ ಪಂಚಾಯತ್ ತ್ರೈಮಾಸಿಕ ಕೆ.ಡಿ.ಪಿ. ಸಭೆ ನಡೆಯಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆಯ ಜೊತೆಗೆ ಪರಿಹಾರವನ್ನು ನೀಡಲಾಗಿದ್ದು, ಸೋಮವಾರದಂದು ಜೂನ್ ತಿಂಗಳ  ತಾಲೂಕಾ ಪಂಚಾಯತ್ ತ್ರೈಮಾಸಿಕ ಕೆ.ಡಿ.ಪಿ. ಸಭೆಯು ಶಾಸಕ ಮಂಕಾಳ ಎಸ್. ವೈದ್ಯರ ಉಪಸ್ಥಿತಿಯಲ್ಲಿ ತಾಲೂಕಾ ಪಂಚಾಯತ್ ಆವರಣದಲ್ಲಿ ತಾಲೂಕಿನ ವಲಯದಲ್ಲಿರುವ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಅವರ ಕಾಮಗಾರಿಯ ಸಂಪೂರ್ಣ ವರದಿಯ ಬಗ್ಗೆ, ಇಲಾಖೆಗಳಲ್ಲಿ ಕುಂದು ಕೊರತೆಗಳ ಬಗ್ಗೆ, ಇನ್ಯಾವುದಾದರೂ ಬಾಕಿ ಇರುವ ಕಾಮಗಾರಿಯ ಕುರಿತಾಗಿ ಚರ್ಚೆ ನಡೆದವು. ಇವುಗಳಲ್ಲಿ ಮುಖ್ಯವಾಗಿ ಶಾಸಕರು ಸಂಬಂಧಪಟ್ಟ ವಿವಿಧ ಇಲಾಖೆಗಳಿಗೆ ಕೆಲವು ಕಿವಿಮಾತನ್ನು ಹೇಳಿದ್ದು ಅದರಂತೆಯೇ ಕೆಲಸ ನಿರ್ವಹಿಸುವ ಬಗ್ಗೆ ತಿಳಿಸಿದ್ದಾರೆ. ಅವುಗಳಲ್ಲಿ ತಾಲೂಕಿನ ಎಲ್ಲಾ ಮಕ್ಕಳಿಗೂ ಸರಿಯಾದ, ಸಮರ್ಪಕವಾದ ಶಿಕ್ಷಣ ಸಿಗಬೇಕು. ಹಾಗು ಈಗಿನ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಸಿಕ್ಕರೆ ಅವರು ಮುಂದೆ ಸ್ವತಂತ್ರವಾಗಿ ಬದುಕಲು ಸಾಧ್ಯ. ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಸರಿಯಾದ ಸಮಯಕ್ಕೆ ಪಡೆಯುವಂತಾಗಬೇಕು. ಹಾಗು ಅತಿಥಿ ಉಪನ್ಯಾಸಕರ ಸಮಸ್ಯೆಗೆ ಸರ್ಕಾರ ಸ್ವಂದಿಸುತ್ತದೆ ಗೊತ್ತಿಲ್ಲ ಆದರೆ ನಮ್ಮ ತಾಲೂಕಿನಲ್ಲಿ ಈ ಸಮಸ್ಯೆ ಬರಬಾರದು ಈ ನಿಟ್ಟಿನಲ್ಲಿ ಇದೇ ಜುಲೈ ೧ ರಿಂದ ತಾಲೂಕಿನ ಎಲ್ಲಾ ಅತಿಥಿ ಉಪನ್ಯಾಸಕರ ಖಾಲಿ ಇರುವ ಹುದ್ದೆಗೆ ಕರೆ ನೀಡುವಂತೆ ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಆದೇಶವನ್ನು ನೀಡಿದರು. ಇದೇ ಸಂಧರ್ಭದಲ್ಲಿ ಕೆ.ಡಿ.ಪಿ. ಸಭೆಯನ್ನುದ್ದೇಶಿಸಿ ಮಾತನಾಡಿ " ನಮ್ಮ ಇನ್ನುಳಿದ ೨ ವರ್ಷದ ಶಾಸಕತ್ವದ ಅವಧಿಯಲ್ಲಿ ಅತೀ ಮೂರು ಯೋಜನೆಗಳನ್ನು ಜನರಿಗೆ ಸರಿಯಾಗಿ ವ್ಯವಸ್ಥೆ ಮಾಡಿಕೊಡಬೇಕಾಗಿದ್ದು, ಅದರಲ್ಲಿ ಎಲ್ಲಾ ಮಕ್ಕಳಿಗೂ ಶಿಕ್ಷಣ, ಎಲ್ಲಾ ಜನರಿಗೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿಕೊಡುವುದು ಹಾಗು ತಾಲೂಕಿನ ಎಲ್ಲಾ ಮನೆಯಗಳಿಗೂ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು ನಮ್ಮ ಗುರಿಯಾಗಿದೆ." ಎಂದರು.
ಹಾಗು ತಾಲೂಕಿನಲ್ಲಿನ ಬಡವರಿಗೆ ಅತೀ ಅವಶ್ಯಕವಾಗಿ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಸಿಗಬೇಕು. ಜೊತೆಗೆ ಅರಣ್ಯ ಪ್ರದೇಶದಲ್ಲಿ ಎಲ್ಲಿಯಾದರೂ ಮನೆಯಿದ್ದರೆ ಅಲ್ಲಿ ವಿದ್ಯುತ ಸಂಪರ್ಕದ ಅವಶ್ಯಕತೆ ಇದ್ದರೆ ಅವರಿಗೂ ವಿದ್ಯುತ್ ಸಂಪರ್ಕ ನೀಡಿ ಅದರ ಬದಲು ಅವರನ್ನು ಅಲ್ಲಿಂದ ಬೇರೆಡೆ ಪಲಾಯನಮಾಡುವ ಹಾಗೇ ಮಾಡಬೇಡಿ ಎಂಬ ಆದೇಶವನ್ನು ಅರಣ್ಯ ಇಲಾಕಾಧಿಕಾರಿಗಳಿಗೆ ತಿಳಿಸಿದರು. ಭಟ್ಕಳ ಬಸ್ ನಿಲ್ದಾಣಕ್ಕೆ ಇನ್ನು ಸ್ವಲ್ಪ ದಿನದಲ್ಲಿ ಹೈಟೆಕ್ ನಿಲ್ದಾಣವನ್ನಾಗುವ ಬಗ್ಗೆ ಈ ಸಭೆಯಲ್ಲಿ ಶಾಸಕರು ತಿಳಿಸಿದರು. ತಾಲೂಕಿನಲ್ಲಿನ ಎಲ್ಲಾ ಹಾಸ್ಟೆಲ್‌ಗಳಿಗೆ ಕುದ್ದಾಗಿ ಶಾಸಕರೇ ಭೇಟಿ ನೀಡುವೇ ಹಾಗು ಮನೆಯಲ್ಲಿ ಸಮಸ್ಯೆಯಿರುವ ಮಕ್ಕಳು ವಾಸಿಸುವ ಹಾಸ್ಟೆಲ್‌ನಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಿ ಎಂಬ ಎಚ್ಚರಿಕೆ ನೀಡಿದರು. ಜೊತೆಗೆ ಇನ್ನುಳಿದ ಇಲಾಖೆಗಳಿಗೆ ಅವರ ಅವರ ವ್ಯಾಪ್ತಿಯಲ್ಲಿ ಬರುವಂತಹಾ ಕಾಮಗಾರಿ ಅಥವಾ ಕೆಲಸಗಳು ಅತೀ ಶೀಘ್ರದಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು. ಈ ಸಂದಭದಲ್ಲಿ ಶಾಸಕರಾದ ಮಂಕಾಳ ಎಸ್ ವೈದ್ಯ ಇವರು ರಾಜ್ಯ ಸರಕಾರ ಮಕ್ಕಳ ಹಾಗು ಮಹಿಳಾ ಕಲ್ಯಾಣ ಇಲಾಖೆಯ ಯೋಜನೆಯಡಿಯಲ್ಲಿ ಬರುವ ಅನುದಾನವಾದ ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್‌ನ್ನು ವಿತರಿಸಿದರು. ಹಾಗೆಯೇ ಹೋಲಿಗೆ ಯಂತ್ರ ವಿತರಣೆ, ಮಳೆಯಿಂದ ನಿರಾಶ್ರಿತರಾದ ಸಂತ್ರಸ್ಥರಿಗೆ ಪರಿಹಾರದ ಚೆಕ್, ಮೀನುಗಾರಿಕೆಯಲ್ಲಿ ಮರಣ ಸಂಭವಿಸಿದ ಮೀನುಗಾರರ  ಕುಟುಂಬಗಳಿಗೆ ಸಹಾಯಧನದ ಚೆಕ್ ಹಾಗು ಪರಿಶಿಷ್ಠ ಪಂಗಡದ ನಿಗಮದಿಂದ ತೆರೆದಬಾವಿ ನಿರ್ಮಾಣಕ್ಕೆ ಸಹಾಯ ಧನದ ಚೆಕ್‌ನ್ನು ವಿತರಿಸಿದರು. ಒಟ್ಟಾರೆ ತಾಲೂಕಿನ ಜನರಿಗೆ ಯಾವ ಯಾವ ಯೋಜನೆಯಡಿಯಲ್ಲಿ ಸಲ್ಲಿತಕ್ಕ ಅನುದಾನವನ್ನು ವಿತರಣೆ ಮಾಡಿದರು. ಹಾಗು ಸಭೆಯಲ್ಲಿ ತಾಲೂಕಾ ಪಂಚಾಯತ್ ಅಧ್ಯಕ್ಷರಾದ ಈಶ್ವರ ನಾಯ್ಕ, ಉಪಾಧ್ಯಕ್ಷೆ ರಾಧಾ ವೈದ್ಯ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಆಲ್ಬಟ ಡಿಕೋಸ್ತಾ, ಸಿಂಧೂ ಭಾಸ್ಕರ ನಾಯ್ಕ ತಾಲೂಕಾ ಕಾರ್ಯನಿರ್ವಾಹಕಾಧಿಕಾರಿ ಸಿ.ಟಿ.ನಾಯ್ಕ, ತಹಸೀಲ್ದಾರ್ ವಿ.ಎನ್.ಬಾಡಕರ್, ಉಪ ತಹಸೀಲ್ದಾರ್ ಡಿ.ಜಿ.ಹೆಗಡೆ ಹಾಗೂ ಇನ್ನುಳಿದ ಅಧಿಕಾರಿಗಳು ಉಪಸ್ಥಿತರಿದ್ದರು.  


 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...