ಭಟ್ಕಳ: ರೋಗಿಗಳಿಗೆ ಚಿಕಿತ್ಸೆ ನೀಡಲು ವಿಳಂಬ:ಡಾ:ಜನಾರ್ದನ ಮೋಗೇರ ವಿರುದ್ಧ ಸಾರ್ವಜನಿಕರು ಅಕ್ರೋಶ

Source: S O News | By MV Bhatkal | Published on 2nd December 2023, 12:15 AM | Coastal News |

ಭಟ್ಕಳ:ತಾಲೂಕಿನ ಸರಕಾರಿ ಆಸ್ಪತ್ರೆಯ ಮೂಳೆ ತಜ್ಞ ಜನಾರ್ದನ ಮೋಗೇರ ಅವರು ಆಸ್ಪತ್ರೆಯ ಕೆಲಸದ ಅವಧಿಯಲ್ಲಿಯೇ ಬೇರೆಡೆ ತೆರಳಿದ್ದ ಎಂಬ ಹಿನ್ನೆಲೆ ಮುಂಜಾನೆ ಅಪಘಾತದಲ್ಲಿ ಮೂಳೆ ಮುರಿತಕ್ಕೊಳಗಾಗಿ ರೋಗಿಗಳು ನೋವಿನಿಂದ ಪರಿತಪಿಸಿದ್ದು ತಡವಾಗಿ ಬಂದ ವೈದ್ಯರ ವಿರುದ್ಧ ಗಾಯಾಳುಗಳ ಸಂಬಂಧಿಕರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರದಂದು ನಡೆದಿದೆ.

ಇಲ್ಲಿನ ಸರ್ಪನಕಟ್ಟೆಯ ಬಳಿ ರಾಷ್ಟ್ರೀಯ ಹೆದ್ದಾರಿಯ ಪೋಲಿಸ್ ಚೆಕ್ ಪೋಸ್ಟ ಬಳಿ ಆಟೋ ರಿಕ್ಷಾ ಪಲ್ಟಿ ಆಗಿದ್ದು ಮತ್ತು ಇಲ್ಲಿನ ಮುಖ್ಯ ಪೇಟೆ ರಸ್ತೆಯ ಇಳಿಜಾರಿನಲ್ಲಿ ಬೈಕ್ ಸ್ಕಿಡ್ ಆಗಿ ಸವಾರನಿಗೆ ಪೆಟ್ಟಾಗಿದ್ದು ಈವೆರಡು ಪ್ರಕರಣದ ಗಾಯಾಳುಗಳು ತಕ್ಷಣಕ್ಕೆ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ಧಾವಿಸಿದ್ದಾರೆ. ಬೆಳಿಗ್ಗೆ 7 ಗಂಟೆಗೆ  ಮತ್ತು ಇನ್ನೊಂದು 9 ಗಂಟೆಗೆ ಅಪಘಾತ ನಡೆದಿದ್ದು ಎರಡು ಅಪಘಾತದ ಗಾಯಾಳುಗಳು ಚಿಕಿತ್ಸೆಗೆ ಬಂದಿದ್ದು ಆದರೆ ಅಪಘಾತದಲ್ಲಿ ಮೂಳೆಗೆ ಬಲವಾದ ಪೆಟ್ಟು ಬಿದ್ದ ಗಾಯಾಳುಗಳನ್ನು ಚಿಕಿತ್ಸೆ ಮಾಡಬೇಕಾದ ಆಸ್ಪತ್ರೆಯ ಮೂಳೆ ತಜ್ಞ ಜನಾರ್ದನ ಮೊಗೇರ ಅವರು ಆಸ್ಪತ್ರೆಯಲ್ಲಿ ಇಲ್ಲವಾಗಿದೆ. ಚಿಕಿತ್ಸೆಗಾಗಿ ಗಾಯಾಳುಗಳು ಗೋಗರೆಯುತ್ತಿದ್ದರೆ ಬೆಳಿಗ್ಗೆ ಆಸ್ಪತ್ರೆಗೆ ಕೆಲಸಕ್ಕೆ ಬಂದ ಮೂಳೆ ತಜ್ಞ ಜನಾರ್ದನ ಮೋಗೇರ ಅವರು 8.15 ಕ್ಕೆ ಹಾಜರಾಗಿ 9.30 ಗಂಟೆಗೆ ಆಸ್ಪತ್ರೆಯಿಂದ ತೆರಳಿದ್ದಾರೆಂದು ಸಾರ್ವಜನಿಕರು ಆರೋಪಿಸಿದರು. 

ಎಷ್ಟೊ ಹೊತ್ತಿನ ಬಳಿಕ ಆಸ್ಪತ್ರೆಗೆ ಆಗಮಿಸಿದ ಮೂಳೆ ವೈದ್ಯರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ತುರ್ತು ಚಿಕಿತ್ಸಾ ಘಟಕದಲ್ಲಿ ಗಾಯಾಳುಗಳಿದ್ದರು ಸಹ ಮೂಳೆ ತಜ್ಞ ಬರುವಂತೆ ಸಾರ್ವಜನಿಕರು ಕರೆದರು ಬಾರದೇ ಇರುವುದಕ್ಕೆ ಸಾರ್ವಜನಿಕರಿಂದ ವೈದ್ಯರ ನಡೆಯ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. 

ಈ ಬಗ್ಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಕರೆ ಮಾಡಿದರೂ ಕ್ಯಾರೆ ಎನ್ನದೇ ವೈದ್ಯ ಜನಾರ್ದನ ಮೊಗೇರ ಅವರ ವರ್ತನೆಗೆ ಸಾರ್ವಜನಿಕರು ಇನ್ನಷ್ಟು ಆಕ್ರೋಶಭರಿತರಾದರು. ಸ್ಥಳಕ್ಕೆ ಬಂದ ಸಮಾಜ ಸೇವಕ ಇರ್ಷಾದ ಮತ್ತು ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಅವರು ಸಹ ವೈದ್ಯ ಜನಾರ್ದನ ಮೋಗೆರ ಅವರಿಗೆ ಗಾಯಾಳುಗಳ ಪರಿಸ್ಥಿತಿಯ ಗಂಭೀರತೆ ತಿಳಿಸಿದರು ಸಹ ವೈದ್ಯ ಮೊಗೇರ ಬಾರದೇ ತನ್ನ ಒ.ಪಿ.ಡಿ.ಯಲ್ಲಿಯೇ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಹಾಗೂ ವೈದ್ಯರ ವಿರುದ್ದ ಪ್ರತಿಭಟನೆಯ ಎಚ್ಚರಿಕೆ ನೀಡಿ ಗಾಯಾಳುಗಳನ್ನು ಬೇರೆ ಆಸ್ಪತ್ರೆಗೆ ಅಂಬ್ಯುಲೆನ್ಸ ಮೂಲಕ  ಚಿಕಿತ್ಸೆ ಕೊಡಿಸಿ ಕಳುಹಿಸಿದರು.ನಗರ ಠಾಣೆಯ ಪೊಲೀಸರ ಮದ್ಯಸ್ಥಿಕೆಯಿಂದ ಪ್ರತಿಬಟನಾಕಾರರನ್ನು ಪೊಲೀಸರು ಸಮಾಧಾನ ಪಡಿಸಿದ್ದಾರೆ. ‌

ವೈದ್ಯರ ಬದಲಾವಣೆಗೆ ಸಾರ್ವಜನಿಕರಿಂದ ಒತ್ತಾಯ ಮೂಳೆ ತಜ್ಞ ಜನಾರ್ದನ ಮೊಗೇರ ಅವರ ಈ ರೀತಿಯ ಉಪಾಡೆಯ ವರ್ತನೆ  ಪದೇ ಪದೇ ನಡೆಯುತ್ತಿದ್ದು ಇವರ ಬದಲಾವಣೆಗೆ ಸಾರ್ವಜನಿಕರಿಂದ ದೂರುಗಳು ನಿತ್ಯವು ಬರುತ್ತಲಿವೆ.ಶುಕ್ರವಾರದ ಘಟನೆಯಿಂದ ಬೇಸತ್ತ ಸಾರ್ವಜನಿಕರು ವೈದ್ಯರನ್ನು ಬದಲಿಸುವಂತೆ ಟಿಎಚ್‌ಒ, ಡಿಎಚ್‌ಒ ಅವರಿಗೆ ಅವರನ್ನು ಒತ್ತಾಯಿಸಿದ್ದಾರೆ. ಇಲ್ಲವಾದರೆ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.ಶನಿವಾರ ಡಿಎಚ್‌ಒ ಸ್ಥಳಕ್ಕೆ ಬರುವದಾಗಿ ತಿಳಿಸಿದ್ದಾರೆ. 

ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಹಾಗೂ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ-ಮಾತನಾಡಿ ಮೂಳೆ ತಜ್ಞ ಜನಾರ್ದನ ಮೊಗೇರ ಅವರ ಬಗ್ಗೆ ಈ ಹಿಂದೆಯೂ ಹಲವಾರು ಬಾರಿ ಸಾರ್ವಜನಿಕರಿಂದ ಹೊರ ರೋಗಿಗಳಿಂದ  ಕರ್ತವ್ಯಕ್ಕೆ ಚ್ಯುತಿ ಎಸಗಿದ ಬಗ್ಗೆ ದೂರುಗಳು ಬಂದಿದ್ದವು. ಈ ಬಗ್ಗೆ ವೈದ್ಯರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದೇವು. ಆದರೆ ಯಾವುದೇ ನೋಟಿಸಗೆ ಪ್ರತಿಕ್ರಿಯೆ ನೀಡಿಲ್ಲವಾಗಿತ್ತು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ‌ ಗಮನಕ್ಕೆ ತಂದಿದ್ದು ಶನಿವಾರದಂದು ಭಟ್ಕಳಕ್ಕೆ ಬರಲಿದ್ದು ಘಟನೆಯ ತನಿಖೆ ನಡೆಸಲಿದ್ದಾರೆ.

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...