ಜೋಯಿಡಾ: ಬಸ್ ಇಲ್ಲದೇ ಶಾಲಾ, ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರ ಪರದಾಟ: ಹೊಸ ಬಸ್‌ಗೆ ಆಗ್ರ

Source: KM/S O News | By I.G. Bhatkali | Published on 27th November 2023, 6:07 PM | Coastal News |

ಜೋಯಿಡಾ: ಜೋಯಿಡಾ' ದಾಂಡೇಲಿ ಮಾರ್ಗದಲ್ಲಿ ಶನಿವಾರ 5 ತಾಸಿಗೂ ಹೆಚ್ಚು ಕಾಲ ಬಸ್ ಸಂಚಾರ ಇಲ್ಲದೇ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡುವಂತಾಯಿತು. ಉಳವಿ-ಹುಬ್ಬಳ್ಳಿ ಬಸ್ ಜೊಯಿಡಾ ಬಸ್ ತಂಗುದಾಣ ಬರುತ್ತಿದ್ದಂತೆ ನೂಕುನುಗ್ಗಲು ಉಂಟಾಯಿತು. ಚಾಲಕ ಮತ್ತು ನಿರ್ವಾಹಕರು ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೆ ಬಸ್ ಬಿಟ್ಟು ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ ಆಡುವ ನಿಷ್ಕಾಳಜಿ ಎದ್ದು ಕಾಣುತಿತ್ತು.

ಚಾಲಕ-ನಿರ್ವಾಹಕರ ನಿರ್ಲಕ್ಷ್ಯ
ಬಸ್ ನಿರ್ವಾಹಕರು ಬಸ್ ಏರುವ ಪ್ರಯಾಣಿಕರನ್ನು ನಿಯಂತ್ರಿಸಿ ಅಗತ್ಯ ಇರುವ ಪ್ರಯಾಣಿಕರಿಗೆ ಅವಕಾಶ ನೀಡಿ ಬಸ್‌ನಲ್ಲಿ ತುಂಬಿಸಿ ನಂತರ ಬಸ್ ಬಿಡಬೇಕಾಗಿತ್ತು. ಆದರೆ ಪ್ರಯಾಣಿಕರು ಬಸ್ ಹತ್ತುತ್ತಿರುವಾಗಲೇ ಬಸ್ ಚಾಲನೆ ಮಾಡಿರುವುದು ಅಪಾಯ ಸೂಚಿಸುತ್ತಿತ್ತಲ್ಲದೇ ಚಾಲಕ ಮತ್ತು ನಿರ್ವಾಹಕರ ನಿರ್ಲಕ್ಷ್ಯ ಕಂಡು ಬರುತ್ತಿತ್ತು.


ಬಸ್ ಬಿಡಲಾಗಿದೆ
ಈ ಮಾರ್ಗದ ಮೂಲಕ ಸಂಚಾರ ಮಾಡಬೇಕಾದ ಕೆಲ ಬಸ್‌ಗಳು ವಿಳಂಬವಾಗಿದೆ. ಜೋಯಿಡಾ ದಾಂಡೇಲಿ ಮಾರ್ಗ ಮೂಲಕ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಬಸ್ ವ್ಯವಸ್ಥೆ ಮಾಡಲಾಗಿದೆ.
# ವ್ಯವಸ್ಥಾಪಕರು, ದಾಂಡೇಲಿ ಘಟಕ.

 

 

 

ಶನಿವಾರದಮದು ಶಾಲಾ ಕಾಲೇಜುಗಳನ್ನು ಮಧ್ಯಾಹ್ನವೇ ಬಿಡಲಾಗಿತ್ತು. ಗಾವಡೇವಾಡಾ ಖಾಪ್ರಿದೇವರ ಜಾತ್ರೆ ಇರುವುದರಿಂದ ನೂರಾರು ಸಂಖ್ಯೆಯಲ್ಲಿ ಈ ಮಾರ್ಗದ ಪ್ರಯಾಣ ಮಾಡುವವರು ಸಹ ಇದ್ದರೂ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನದ ತನಕ ಜೊಯಿಡಾ ದಾಂಡೇಲಿ ಮಾರ್ಗಕ್ಕೆ ಯಾವ ಬಸ್ ಸಂಚಾರವಿರಲಿಲ್ಲ. ಸಂಜೆ ಮೂರು ಗಂಟೆಗೆ ಉಳವಿ ಹುಬ್ಬಳ್ಳಿ ಬಸ್ ಜೊಯಿಡಾ ಬಸ್ ತಂಗುದಾಣಕ್ಕೆ ಬಂದಾಗ ಬಸ್ ಏರಲು ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳು ತಾನು ಮುಂದೆ. ತಾ ಮುಂದೆ ಎನ್ನುತ್ತ ಬಸ್ ಏರಲು ನೂಕು ನುಗ್ಗಲು ಉಂಟಾಯಿತು. ಅನೇಕರು ಬಸ್ ಕಿಟಕಿಯಿಂದ ಒಳ ಹೋಗಲು ಪ್ರಯತ್ನಿಸಿದರು

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...