ನೂತನ ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್ ಅಧಿಕಾರ ಸ್ವೀಕಾರ; ರಾಜ್ಯದಲ್ಲಿ 37 ವರ್ಷಗಳ ಸುದೀರ್ಘ ಸೇವೆಯ ಬಳಿಕ ಕೇಂದ್ರೀಯ ತನಿಖಾ ಸಂಸ್ಥೆಯ ವರಿಷ್ಠ ಹುದ್ದೆ

Source: Vb | By I.G. Bhatkali | Published on 26th May 2023, 2:58 PM | State News | National News |

ಹೊಸದಿಲ್ಲಿ: ರಾಜ್ಯದಲ್ಲಿ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಪ್ರವೀಣ್ ಸೂದ್ ಅವರು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ನ ನಿರ್ದೇಶಕರಾಗಿ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.

1986ನೇ ಸಾಲಿನ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾದ ಸೂದ್ ಅವರು ತನ್ನ 37 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಹಲವಾರು ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದರು. ಬಳ್ಳಾರಿ ಹಾಗೂ ರಾಯಚೂರಿನಲ್ಲಿ ಪೊಲೀಸ್‌ ಅಧೀಕ್ಷಕ (ಎಸ್‌ಪಿ), ಬೆಂಗಳೂರುನಗರದ ಹೆಚ್ಚುವರಿ ಪೊಲೀಸ್ ಆಯುಕ್ತ (ಸಾರಿಗೆ), ಮೈಸೂರು ಹಾಗೂ ಬೆಂಗಳೂರು ನಗರಗಳ ಪೊಲೀಸ್ ಆಯುಕ್ತ ಎಡಿಜಿಪಿ, ರಾಜ್ಯ ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಡಿಜಿಪಿ (ಆಂತರಿಕ ಭದ್ರತೆ) ಹಾಗೂ ಡಿಜಿಪಿ (ಸಿಐಡಿ)ಯಾಗಿ ಕಾರ್ಯನಿರ್ವಹಿಸಿದ್ದರು. ಮಾರಿಷಸ್ ಸರಕಾರದ ಸಲಹೆಗಾರರಾಗಿಯೂ ಅವರು ಕೆಲಸ ಮಾಡಿದ್ದರು.

ಭಾರೀ ಆದಾಯದ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಮುಖ ಪ್ರಕರಣಗಳಲ್ಲಿ ಮತ್ತು ಅಂತರ್ ರಾಜ್ಯ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದ ಪರಿಣಾಮವನ್ನುಂಟು ಮಾಡುವ ಪ್ರಕರಣಗಳಲ್ಲಿಯೂ ಅವರು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಸೈಬರ್ ಅಪರಾಧ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ತನಿಖೆ ಹಾಗೂ ಪತ್ತೆ ಕಾರ್ಯಾಚರಣೆಗಳಲ್ಲಿಯೂ ಅವರು ಮೇಲ್ವಿಚಾರಣೆ ವಹಿಸಿದ್ದರು.

ಐಐಟಿ, ದಿಲ್ಲಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವೀಧರರಾದ ಪ್ರವೀಣ್‌ ಸೂದ್ ಅವರು ಬೆಂಗಳೂರಿನ ಐಐಎಂ ಹಾಗೂ ನ್ಯೂಯಾರ್ಕ್‌ ಸಿರಾಕ್ಯೂಸ್ ವಿವಿಯ ಮ್ಯಾಕ್ಸ್‌ವೆಲ್ ಸ್ಕೂಲ್ ಆಫ್ ಗವರ್ನನನಲ್ಲಿ ಸಾರ್ವಜನಿಕ ನೀತಿ ಹಾಗೂ ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಪೊಲೀಸ್ ಇಲಾಖೆಯಲ್ಲಿನ ವಿಶಿಷ್ಟ ಸೇವೆಗಾಗಿ ಪ್ರವೀಣ್ ಸೂದ್ ಅವರಿಗೆ 2011ರಲ್ಲಿ ರಾಷ್ಟ್ರಪತಿಯವರ ಪೊಲೀಸ್‌ ಪದಕ ಹಾಗೂ 2002ರಲ್ಲಿ ಅಸಾಧಾರಣ ಸೇವೆಗಾಗಿನ ಪೊಲೀಸ್ ಪದಕ ಪಡೆದಿದ್ದರು. 1996ರಲ್ಲಿ ಉತ್ಕೃಷ್ಟ ಸೇವೆಗಾಗಿ ಮುಖ್ಯಮಂತ್ರಿಯವರ ಚಿನ್ನದ ಪದಕ, 2011ರಲ್ಲಿ ಟ್ರಾಫಿಕ್ ನಿರ್ವಹಣೆಯಲ್ಲಿ ಅತ್ಯಂತ ತಂತ್ರಜ್ಞಾನದ ಸಂಶೋಧನಾತ್ಮಕ ಬಳಕೆ ಹಾಗೂ ಸುರಕ್ಷತೆ, ಸಂಚಾರ ನಿರ್ವಹಣೆಗೆ ಸಂಬಂಧಿಸಿ 2006ರಲ್ಲಿ ರಾಜಕುಮಾರ ಮೈಕೆಲ್ ಇಂಟರ್‌ ನ್ಯಾಶನಲ್ ರಸ್ತೆ ಸುರಕ್ಷತಾ ಪ್ರಶಸ್ತಿ ಪಡೆದಿದ್ದರು.

Read These Next

ಎದ್ದೇಳು ಕರ್ನಾಟಕದ ಪ್ರತಿನಿಧಿಗಳ ತಂಡದಿಂದ ಮುಖ್ಯಮಂತ್ರಿಗಳೊಂದಿಗೆ ಭೇಟಿ ಮತ್ತು ಸಂವಾದ

ಬೆಂಗಳೂರು: ಎದ್ದೇಳು ಕರ್ನಾಟಕದ ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳು ಮತ್ತು ವಿವಿಧ ಸಮುದಾಯಗಳ ಸಂಘಟನೆಗಳ ಮುಂದಾಳುಗಳ ನಿಯೋಗವು ...

ಉಡಾಫೆ, ಅಸಡ್ಡೆ ಮಾಡುವ ಅಧಿಕಾರಿಗಳಿಗೆ ಜಾಗ ಇಲ್ಲ. ಅಧಿಕಾರಿಗಳ ಸಭೆಯಲ್ಲಿ ಖಡಕ್ ಎಚ್ಚರಿಕೆ ನೀಡಿದ ಸಿ.ಎಂ. ಸಿದ್ದರಾಮಯ್ಯ

ದಾವಣಗೆರೆ : ಪ್ರಜಾಪ್ರಭುತ್ವದಲ್ಲಿ ಜನರೇ ಮಾಲಿಕರಾಗಿದ್ದು ಜನರ ಆಶೋತ್ತರಗಳಿಗೆ ಸ್ಪಂಧಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ...

ಒಡಿಶಾ ರೈಲು ದುರಂತ; ತನಿಖೆ ಸಿಬಿಐಗೆ ಹಸ್ತಾಂತರಿಸಲು ರೈಲ್ವೆ ಮಂಡಳಿ ಶಿಫಾರಸು; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಒಡಿಶಾದ ಬಾಲಾಸೋರ್‌ನಲ್ಲಿ 275 ಮಂದಿಯನ್ನು ಬಲಿತೆಗೆದುಕೊಂಡ ತ್ರಿವಳಿ ರೈಲು ದುರಂತದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ರೈಲ್ವೆ ...

ಕುಸ್ತಿಪಟುಗಳ ವಿರುದ್ಧ ಪೊಲೀಸ್‌ ದೌರ್ಜನ್ಯ; 45 ದಿನಗಳೊಳಗೆ ಡಬ್ಲ್ಯುಎಫ್‌ಐಗೆ ಚುನಾವಣೆ ನಡೆಸದೇ ಇದ್ದಲ್ಲಿ ಅಮಾನತುಗೊಳಿಸುವ ಎಚ್ಚರಿಕೆ; ಇಂದು ರೈತರ ಮಹಾ ಪಂಚಾಯತ್

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್ ಭೂಷಣ್ ...

ಕುಸ್ತಿಪಟುಗಳ ವಿರುದ್ಧ ಪೊಲೀಸ್‌ ದೌರ್ಜನ್ಯ; ಜಾಗತಿಕ ಕುಸ್ತಿ ಸಂಘಟನೆ ಖಂಡನೆ; ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಆಗ್ರಹ

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ...

ಪ್ರಧಾನಿಯ ರಾಜಸ್ಥಾನ ರಾಲಿಗೆ ಮುನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಂಡ್; 'ಗೋ ಬ್ಯಾಕ್‌ ಮೋದಿ'

ಪ್ರಧಾನಿ ನರೇಂದ್ರ ಮೋದಿಯವರ ಬುಧವಾರದ ರಾಜಸ್ಥಾನ ರಾಲಿಗೆ ಮುನ್ನ 'ಗೋ ಬ್ಯಾಕ್‌ ಮೋದಿ' ಹ್ಯಾಷ್ ಟ್ಯಾಗ್ ಸಾಮಾಜಿಕ ಮಾಧ್ಯಮಗಳಲ್ಲಿ ...

ಕುಸ್ತಿಪಟುಗಳು ಸರ್ಕಾರಕ್ಕೆ 5 ದಿನಗಳ ಗಡುವು; ರಾಷ್ಟ್ರಪತಿ ಮೌನ, ಪ್ರಧಾನಿ ನಿರ್ಲಕ್ಷ್ಯ; ಸಾಕ್ಷಿ ಮಲಿಕ್ ಆಕ್ರೋಶ

ಒಲಿಂಪಿಕ್ ಪದಕ ವಿಜೇತ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಮಂಗಳವಾರ ಪೋಸ್ಟ್;ನಲ್ಲಿ ಕುಸ್ತಿಪಟುಗಳ ಪ್ರತಿಭಟನೆಗೆ ಸ್ಪಂದಿಸಿದ ...