ಕಾಮಗಾರಿ ಮುಗಿದ ಮೇಲೆ ಟೆಂಡರ್ ಕರೆಯುವುದಕ್ಕೆ ಆಕ್ರೋಶ; ನಗರಸಭೆಯಲ್ಲಿ ಧರಣಿ ಕುಳಿತ ಸೈಲ್;

Source: S O News | By I.G. Bhatkali | Published on 30th June 2022, 10:08 AM | Coastal News |

ಕಾರವಾರ: ನಗರಸಭೆಯಿಂದ ಕಾಮಗಾರಿಗಳನ್ನು ಪೂರ್ಣ ಗೊಳಿಸಿದ ಬಳಿಕ ನಿಯಮಬಾಹಿರವಾಗಿ ಟೆಂಡರ್ ಕರೆದು ಆರೋಪಿಸಿ ಬುಧವಾರ ಮಾಜಿ ಶಾಸಕ ಸತೀಶ ಸೈಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ಇದಕ್ಕೆ ಲಿಖಿತ ಸ್ಪಷ್ಟಿಕರಣ ನೀಡುವಂತೆ ಒತ್ತಾಯಿಸಿ ಪೌರಾಯುಕ್ತರ ಕೊಠಡಿಯಲ್ಲಿ 
ಸಂಜೆಯವರೆಗೂ ಧರಣಿ ನಡೆಸಿದರು.

ಬುಧವಾರ ನಗರಸಭೆಗೆ ಭೇಟಿ ನೀಡಿದ ಸೈಲ್, ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳಿಗೆ ಈಗ ಟೆಂಡರ್ ಕರೆಯಲಾಗಿದೆ. ಕೆಲಸ ಪೂರ್ಣವಾದ ಬಳಿಕ ಟೆಂಡರ್ ಕರೆಯುವ ಅವಶ್ಯಕೆತೆ ಏನಿತ್ತು ಎಂದು ಪೌರಾಯುಕ್ತರನ್ನು ಪ್ರಶ್ನಿಸಿದರು. ಅಲ್ಲದೇ, ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲವೇ? ಏಕೆ ಈ ರೀತಿ ಮಾಡಿದ್ದೀರಿ? ಎಂದು ಗದರಿದರು.

ಜಿಲ್ಲಾಧಿಕಾರಿಗೆ ಪತ್ರ 
ಕಾರವಾರ ನಗರಸಭೆಯ 179 ಕಾಮಗಾರಿಗಳಲ್ಲಿ ಸುಮಾರು 37 ಕಾಮಗಾರಿಗಳಿಗೆ ಇ- ಪ್ರೊಕ್ಯೂರ್‌ಮೆಂಟ್‌ನಲ್ಲಿ ಕರೆಯಲಾಗಿದ್ದು, ಬಾಕಿ ಕಾಮಗಾರಿಗಳನ್ನು ಟೆಂಡರ್ ಬಾಕ್ಸ್ ಮೂಲಕ ಆಹ್ವಾನಿಸಲಾಗಿದೆ. ಆದರೆ ಈ ಕಾಮಗಾರಿಗಳಲ್ಲಿ ಶೇ 90ರಷ್ಟು ಈಗಾಗಲೇ ಪೂರ್ಣಗೊಂಡಿವೆ ಎಂದು ಸತೀಶ್ ಸೈಲ್ ಜಿಲ್ಲಾಧಿಕಾರಿಗೆ ಪತ್ರ ಬರೆದು ತಿಳಿಸಿದ್ದಾರೆ. ಮುಂದುವರಿದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಮೇ, ಜೂನ್ ತಿಂಗಳನಲ್ಲಿ ಟೆಂಡರ್ ಬಾಕ್ಸ್‌ಗಳನ್ನ ತೆ ರೆದು ನೋಡಲಾಗಿದೆ. ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳ ಮಾಹಿತಿ ಹಾಗೂ ಗುತ್ತಿಗೆದಾರರ ಮಾಹಿತಿ ಪಡೆದು, ಅವರಿಗೆ ಅನ್ಯಾಯ ಆಗದಂತೆ ಕ್ರಮವಹಿಸಬೇಕು. ಆಯುಕ್ತರನ್ನು ತಕ್ಷಣ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಪೌರಾಯುಕ್ತ ರ್ ಪಿ ನಾಯ್ಕ್ ಪ್ರತಿಕ್ರಿಯಿಸಿ, ಜನರ ಹಾಗೂ ನಗರಸಭೆ ಪ್ರತಿನಿಧಿಗಳ ಒತ್ತಾಯದ ಮೇಲೆ ತುರ್ತಾಗಿ ಮಾಡುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ  ಆಕ್ರೋಶಗೊಂಡ ಎನ್ನುತ್ತಿದ್ದಂತೆ ಸೈಲ್, ಒಂದೋ ಎರಡೋ ಕೆಲಸವಾಗಿದ್ದರೆ ತುರ್ತು ಎಂದು ಹೇಳಬಹುದಿತ್ತು. ಆದರೆ ಇಷ್ಟೊಂದು ಕೆಲಸ ತುರ್ತಾಗಿ ಮಾಡುವ ಅವಶ್ಯಕತೆಯಿತ್ತೇ? ನಿಮ್ಮದೇ ದರ್ಬಾರ್ ಆಗಿದೆ. ನಿಮ್ಮನ್ನು ನಿಯಂತ್ರಿಸುವವರು ಯಾರೂ ಇಲ್ಲ. ಹೀಗಾಗಿ ಮನಸ್ಸಿಗೆ ಬ೦ದ೦ತೆ ವರ್ತಿಸುತ್ತಿದ್ದೀರಿ ಎಂದು ಅಸಮಾಧಾನ ಹೊರಹಾಕಿದರು. ಎಂಜಿನಿಯರರ ಬಳಿ ಲಿಖಿತವಾಗಿ ಬರೆದುಕೊಂಡು ವಂತೆ ಸೈಲ್ ಕೇಳಲು ಹೋದಾಗ ಪೌರಾಯುಕ್ತರು ಅವಕಾಶ ನೀಡಲಿಲ್ಲ. ಅಲ್ಲದೇ ತಾವು ಲಿಖಿತ ರೂಪದಲ್ಲಿ ಮೊದಲು ಬರೆದುಕೊಡಿ, ಬಳಿಕ ನಾವು ಸ್ಪಷ್ಟನೆ ಕೊಡುತ್ತೇವೆ ಎಂದು ಸೈಲ್ ಅವರಿಗೆ ಆರ್.ಪಿ.ನಾಯ್ಕ ತಿಳಿಸಿದರು. ಇದರಿಂದ ಕೋಪಗೊಂಡ ಪೌರಾಯುಕ್ತರ ಕೊಠಡಿಯಲ್ಲಿ ನೆಲಕ್ಕೆ ಕುಳಿತು, ಸಂಜೆಯವರೆಗೂ ಧರಣಿ ನಡೆಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...