ಕಾರವಾರ: ಉಸ್ತುವಾರಿ ಸಚಿವರ ಜನತಾ ದರ್ಶನದಲ್ಲಿ ಮನವಿಗಳ ಮಹಾಪೂರ

Source: S O News | By I.G. Bhatkali | Published on 1st December 2023, 10:22 PM | Coastal News |

ಕಾರವಾರ: ಕಾರವಾರದ ಕೊಡಿಭಾಗದ ಸಾಗರ ದರ್ಶನ ಹಾಲ್‌ನಲ್ಲಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ಎಸ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 175 ಕ್ಕೂ ಅಧಿಕ ಮನವಿಗಳು ಸ್ವೀಕೃತವಾದವು.

ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿಯ ಮೊತ್ತ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಜಮೆ ಆಗುತಿದ್ದು, ಗೃಹಲಕ್ಷಿ÷್ಕ ಯೋಜನೆಯ 2 ಮತ್ತು 3 ನೇ ಕಂತಿನ ಹಣ ಜಮೆ ಆಗದ ಕುರಿತಂತೆ ಮಹಿಳೆಯರು ಮನವಿ ಸಲ್ಲಿಸಿದರು. ಈ ಬಗ್ಗೆ ಕೂಡಲೇ ಪರಿಶೀಲಿಸಿ 3 ದಿನಗಳ ಒಳಗೆ ಸಂಪೂರ್ಣ ಅಂಕಿ ಅಂಶಗಳ ವಿವರ ಮತ್ತು ಅದನ್ನು ಸರಿಪಡಿಸುವಂತೆ ಹಾಗೂ ಜಿಲ್ಲೆಯ ಯಾವುದೆ ಫಲಾನುಭವಿ ಸೌಲಭ್ಯದಿಂದ ವಂಚಿತರಾದಗAತೆ ಎಚ್ಚರಿಕೆ ವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಸೀ ಬರ್ಡ್ ಯೋಜನೆಯ ನಿರಾಶ್ರಿತರು, ರುದ್ರಭೂಮಿಗೆ ಜಾಗ ನೀಡುವಂತೆ, ಭೂ ಸ್ವಾಧೀನದ ಪ್ರದೇಶದಲ್ಲಿನ ದೇವಸ್ಥಾನಕ್ಕೆ ಮತ್ತು ರುದ್ರಭೂಮಿಗೆ ತೆರಳಲು ಕಾಂಪೌAಡ್ ಅಡ್ಡವಾಗಿದ್ದು ಸೂಕ್ತ ದಾರಿಯ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು.

ಸೀ ಬರ್ಡ್ ಯೋಜನೆಯ ನಿರಾಶ್ರಿತರಿಗೆ ರುದ್ರಭೂಮಿಗೆ ಜಾಗ ನೀಡುವ ಕುರಿತಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮತ್ತು ಭೂ ಸ್ವಾಧೀನದ ಪ್ರದೇಶದಲ್ಲಿನ ದೇವಸ್ಥಾನಕ್ಕೆ ಮತ್ತು ರುದ್ರಭೂಮಿಗೆ ತೆರಳಲು ಅಗತ್ಯ ರಸ್ತೆ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ತಿಳಿಸಿದರು.

ಕೊಂಕಣ ರೈಲ್ವೆಯಿಂದ ನಿರಾಶ್ರಿತರಾದವರಿಗೆ 30 ವರ್ಷಗಳಿಂದಲೂ ಸೂಕ್ತ ಪರಿಹಾರ ದೊರೆಯುತಿಲ್ಲ ಈ ಬಗ್ಗೆ ಉಪ ವಿಭಾಗಾಧಿಕಾರಿ ಕೋರ್ಟ್ನಲ್ಲಿ ಹಿಯರಿಂಗ್ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರಿನ ಕುರಿತಂತೆ, ಒಂದು ತಿಂಗಳ ಅವಧಿಯೊಳಗೆ ಈ ಸಮಸ್ಯೆಗೆ ಅಗತ್ಯ ಪರಿಹಾರ ಒದಗಿಸುವಂತೆ ಸಚಿವರು ಸೂಚನೆ ನೀಡಿದರು.

ಐ.ಆರ್.ಬಿ.ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ಥಳೀಯ ಕಾರ್ಮಿಕರಿಗೆ ಕಾರ್ಮಿಕ ನಿಯಮಾವಳಿಗಿಂತ ಕಡಿಮೆ ವೇತನ ನೀಡುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಅಗತ್ಯ ನೆರವು ಒದಗಿಸುವಂತೆ ಕಾರ್ಮಿಕರು ಸಲ್ಲಿಸಿದ್ದ ಮನವಿ ಕುರಿತಂತೆ, ಕಾರ್ಮಿಕ ಇಲಾಖೆ ವತಿಯಿಂದ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಸದರಿ ಕಾರ್ಮಿಕರನ್ನು ಒದಗಿಸಿರುವ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡುವಂತೆ ಸೂಚನೆ ನೀಡಿದರು.
ಶಿರವಾಡದ ಡಂಪಿಗ್ ಯಾರ್ಡ್ನ 500 ಮೀ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡದ ಕುರಿತಂತೆ ನಗರಸಭೆಯಿಂದ ಅಗತ್ಯ ಕ್ರಮ ಕೈಗೊಂಡು ಅಲ್ಲಿನ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವAತೆ ನಿರ್ದೇಶನ ನೀಡಿದರು.

ವೇತನ ಹೆಚ್ಚಳ ಬೇಡಿಕೆ ಕುರಿತಂತೆ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು. ಇದು ಸರ್ಕಾರದ ಮಟ್ದದಲ್ಲಿ ಬಗೆಹರಿಯಬೇಕಾದ ಸಮಸ್ಯೆ ಎಂದ ಸಚಿವರು ಈ ಬಗ್ಗೆ ಪರಿಶೀಲಿಸಿ ನೆರವು ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. 

ಜನತಾ ದರ್ಶನದಲ್ಲಿ ಮನವಿ ನೀಡಲು ಆಗಮಿಸಿದ್ದ ವಿಕಲಚೇತನ ಸೇನಾ ಸಿಬ್ಬಂದಿಯ ಗಾಲಿ ಕುರ್ಚಿಯ ಬಳಿಗೆ ತೆರಳಿ ಸಚಿವರು ಮನವಿ ಸ್ವೀಕರಿಸಿ, ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜನತಾ ದರ್ಶನದಲ್ಲಿ ಸಲ್ಲಿಕೆಯಾಗುವ ದೂರುಗಳನ್ನು ಆದ್ಯತೆಯಲ್ಲಿ ಪರಿಹರಿಸುತ್ತಿದ್ದು, ದೂರುಗಳನ್ನು ಇತ್ಯರ್ಥಪಡಿಸಿದ ಕುರಿತು ಅರ್ಜಿದಾರರಿಗೆ ಮಾಹಿತಿಯನ್ನೂ ಸಹ ನೀಡಲಾಗುತ್ತಿದೆ. ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಸೀ ಬರ್ಡ್ ನಿರಾಶ್ರಿತರ ಪರಿಹರದ ಮೊತ್ತ ವಿತರಣೆೆ ಕುರಿತಂತೆ ಈಗಾಗಲೆ 1.18 ಕೋಟಿ ಬಿಡುಗಡೆಯಾಗಿದೆ. ನಲ್ಲೂರು ಕಂಚಿನಬೈಲು ಪ್ರದೇಶವನ್ನು ಭೂ ಸ್ವಾಧೀನ ವ್ಯಾಪ್ತಿಗೆ ಒಳಪಡಿಸುವ ಕುರಿತಂತೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಜಿಲ್ಲಾಡಳಿತದ ವ್ಯಾಪ್ತಿಗೆ ಬಾರದ ಹಲವು ಸಮಸ್ಯೆಗಳನ್ನು ಮಾನವೀಯ ನೆಲೆಯಲ್ಲಿ ಸೂಕ್ತ ರೀತಿಯಲ್ಲಿ ಇತ್ಯರ್ಥಪಡಿಸುವುದರ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲಾಗುತ್ತಿದೆ ಎಂದರು.

ಶಿರಸಿ ಶಾಸಕ ಭೀಮಣ್ಣ ಟಿ ನಾಯ್ಕ್ ಮಾತನಾಡಿ, ಸರಕಾರದ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು, ಶಿರಸಿಯಲ್ಲೂ ಸಹ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.

ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸತೀಶ್ ಸೈಲ್ ಮಾತನಾಡಿ, ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಯಾಗಿ ಇಲ್ಲಿನ ಯುವಕರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಆಸಕ್ತ ಉದ್ದಿಮೆದಾರರಿಗೆ ಸಿಂಗಲ್ ವಿಂಡೋ ಮೂಲಕ ಎಲ್ಲಾ ಅಗತ್ಯ ಅನುಮತಿ ನೀಡಲಾಗುವುದು. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತಂತೆ ಅಂದಾಜು ಯೋಜನೆ ತಯಾರಾಗಿದ್ದು, ಬೆಳಗಾವಿಯ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ಪಡೆಯಲಾಗುವುದು. ಸೀಬರ್ಡ್ ಬಾಕಿ ಪರಿಹಾರದ ಸ್ಪಲ್ಪ ಮೊತ್ತವು ಬಿಡುಗಡೆಯಾಗಿದ್ದು ಶೀಘ್ರದಲ್ಲಿ ಸಂತ್ರಸ್ಥರಿಗೆ ವಿತರಿಸಲಾಗುವುದು. ಮೈಸೂರು ನಿಂದ ಮುರುಡೇಶ್ವರದ ವರೆಗೆ ಇರುವ ರೈಲನ್ನು ಕಾರವಾರದ ವರೆಗೆ ವಿಸ್ತರಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಸಭೆಯಲಿ ಜಿಲ್ಲಾ ಪಂಚಾಯತ್ ಸಿಇಒ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಕೆ.ಸಿ. ಪ್ರಶಾಂತ ಕುಮಾರ, ರವಿಶಂಕರ, ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಶಿಂದೆ ದೇವೋಬ, ಉಪ ವಿಭಾಗಾಧಿಕಾರಿಗಳಾದ ಜಯಲಕ್ಷಿö್ಮ ರಾಯಕೋಡ್, ಡಾ. ನಯನಾ, ಕಲ್ಯಾಣಿ ಕಾಂಬ್ಳೆ, ದೇವರಾಜ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next