ಬಿಜೆಪಿಯ ಗೆಲುವಿಗಾಗಿ ದೇಶಾದ್ಯಂತ ಬಾಂಬ್ ಸ್ಫೋಟಿಸಿದ ಆರೆಸ್ಸೆಸ್‌: ಪದಾಧಿಕಾರಿ ಹೇಳಿಕೆ; ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಕೆ

Source: Vb | By I.G. Bhatkali | Published on 2nd September 2022, 10:04 AM | National News |

ಮುಂಬೈ: ಆರೆಸ್ಸೆಸ್ ಪದಾಧಿಕಾರಿಯೋರ್ವರು ಆ.30ರಂದು ನಾಂದೇಡ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿಗೆ ನೆರವಾಗಲು ಆರೆಸ್ಸೆಸ್‌ ವಿನಾಶಕಾರಿ ಗುಪ್ತ ಚಟುವಟಿಕೆಗಳ ಬಗ್ಗೆ ದಿಗ್ಧಮೆಗೊಳಿಸುವ ಅಂಶಗಳನ್ನು ಬಹಿರಂಗಗೊಳಿಸಿದ್ದಾರೆ.

ಆರೆಸ್ಸೆಸ್ ಮತ್ತು ಸಂಘಪರಿವಾರ ಸಂಘಟನೆಗಳು ದೇಶಾದ್ಯಂತ ಬಾಂಬ್ ಸ್ಫೋಟಗಳನ್ನು ನಡೆಸಿದ್ದವು ಮತ್ತು ಬಾಂಬ್ ಸ್ಫೋಟಗಳಿಗೆ ತರಬೇತಿ ನೀಡಿದ್ದ ಶಿಬಿರಗಳಲ್ಲಿ ತಾನೂ ಉಪಸ್ಥಿತನಿದ್ದೆ ಎಂದು ಸಂಘಟನೆಯ ಪದಾಧಿಕಾರಿಯೆಂದು ಹೇಳಿಕೊಂಡಿರುವ ಯಶವಂತ ಶಿಂದೆ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಆಯ್ದ ಹೋರಾಗಾರರ ಸಂಘಟನೆಯಿಂದ ಹಿಡಿದು ಸಂಚನ್ನು ರೂಪಿಸಿ ಅದನ್ನು ಕಾರ್ಯಗತಗೊಳಿಸುವವರೆಗೆ ಬಾಂಬ್ ಸ್ಫೋಟ ಯೋಜನೆಯ ವಿವಿಧ ಹಂತಗಳಲ್ಲಿ ಪಾಲ್ಗೊಂಡಿದ್ದ ಹಲವಾರು ಆರೆಸ್ಸೆಸ್ ಮತ್ತು ವಿಹಿಂಪ ಪದಾಧಿಕಾರಿಗಳನ್ನು ಶಿಂದೆ ಅಫಿಡವಿಟ್‌ನಲ್ಲಿ ಹೆಸರಿಸಿದ್ದಾರೆ.

ತಾನು ಹಿಂದುತ್ವದಲ್ಲಿ ಗಾಢ ನಂಬಿಕೆ ಹೊಂದಿದ್ದೇನೆ ಮತ್ತು ಹಿಂದೂ ಧರ್ಮವು ಯಾವುದೇ ಭಯೋತ್ಪಾದನೆ ಪ್ರವೃತ್ತಿಯನ್ನು ಹೊಂದಿರದ ಉದಾತ್ತ ಧರ್ಮವೆಂದು ಪರಿಗಣಿಸಿದ್ದೇನೆ ಎಂದು ಹೇಳಿಕೊಂಡಿರುವ ಶಿಂದೆ, ಆರೆಸ್ಸೆಸ್ ಮತ್ತು ವಿಹಿಂಪಗಾಗಿ ಸ್ಫೋಟಗಳ ರೂವಾರಿಗಳಾಗಿದ್ದ ಮೂವರು ವ್ಯಕ್ತಿಗಳ ಹೆಸರುಗಳನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇಂದ್ರೇಶ್ ಕುಮಾರ್ ಮತ್ತು ಹಿಮಾಂಶು ಪತ್ತೆ ಜೊತೆಗೆ ಮಿಲಿಂದ ಪರಾಂಡೆ, ರಾಕೇಶ್ ಧಾವಡೆ ಮತ್ತು ರವಿ ದೇವ (ಮಿಥುನ ಚಕ್ರವರ್ತಿ) ಅವರನ್ನು ಈ ಪ್ರಕರಣದಲ್ಲಿ ಮುಖ್ಯ ಸಂಚುಕೋರರನ್ನಾಗಿ ಅಫಿಡವಿಟ್ ನಲ್ಲಿ ಹೆಸರಿಸಲಾಗಿದೆ. ಪರಾಂಡೆ ಮತ್ತು ಧಾವಡೆ ತರಬೇತಿ ಶಿಬಿರಗಳನ್ನು ಸಂಘಟಿಸಿದ್ದರೆ,ರವಿ ದೇವ ಬಾಂಬ್ ತಯಾರಿಕೆಯ ತರಬೇತಿಯನ್ನು ನೀಡಿದ್ದ ತಾನು ಆರೆಸ್ಸೆಸ್‌ನ ಧೋರಣೆಗೆ ವಿರುದ್ಧವಾಗಿದ್ದೆ ಮತ್ತು ಹೇಯ ಅಪರಾಧಗಳಲ್ಲಿ ಭಾಗಿಯಾಗಲು ಬಯಸಿರಲಿಲ್ಲ ಎಂದು ತಿಳಿಸಿರುವ ಶಿಂದೆ, ಸಂಘಟನೆಯಲ್ಲಿ ತನ್ನೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಬಾಂಬ್ ಸ್ಫೋಟಗಳನ್ನು ನಡೆಸದಂತೆ ನಿರುತ್ತೇಜಿಸಿದ್ದೆ ಮತ್ತು ತನ್ಮೂಲಕ ಅನೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರೈಸ್ತರ ಜೀವಗಳನ್ನು ಉಳಿಸಿದ್ದೆ ಎಂದು ಅಫಿಡವಿಟ್‌ನಲ್ಲಿ ಹೇಳಿದ್ದಾರೆ.

ದೇಶಾದ್ಯಂತ ಬಾಂಬ್ ಸ್ಫೋಟಗಳನ್ನು ನಡೆಸುವ ಆರೆಸ್ಸೆಸ್ ಮತ್ತು ವಿಹಿಂಪ ಯೋಜನೆಯು ನಿರೀಕ್ಷಿಸಿದ್ದಷ್ಟು ಯಶಸ್ವಿಯಾಗಿರಲಿಲ್ಲ,ಹೀಗಾಗಿ ಬಿಜೆಪಿಗೆ ರಾಜಕೀಯ ಲಾಭವುಂಟಾಗಿರಲಿಲ್ಲ. ನಂತರದ 2004ರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಬಹುಮತವನ್ನು ಗೆದ್ದುಕೊಂಡಿತ್ತು. ಪರಾಂಡೆಯಂತಹ ಮುಖ್ಯ ರೂವಾರಿಗಳು ಗಾಬರಿಗೊಂಡಿದ್ದರು ಮತ್ತು ಭೂಗತರಾಗಿದ್ದರು,ಆದರೆ ರಹಸ್ಯವಾಗಿ ಸಂಚುಗಳನ್ನು ರೂಪಿಸುವುದನ್ನು ಅವರು ಮುಂದುವರಿಸಿದ್ದರು.

ಭೂಗತರಾಗಿದ್ದುಕೊಂಡೇ ಅವರು ದೇಶಾದ್ಯಂತ ಅನೇಕ ಬಾಂಬ್ ಸ್ಫೋಟಗಳನ್ನು ನಡೆಸಿದ್ದರು ಹಾಗೂ ಪಕ್ಷಪಾತಿ ಪೊಲೀಸರು ಮತ್ತು ಮಾಧ್ಯಮಗಳ ನೆರವಿನಿಂದ ಬಾಂಬ್ ಸ್ಫೋಟಗಳ ಹೊಣೆಯನ್ನು ಮುಸ್ಲಿಮರ ಮೇಲೆ ಹೊರಿಸಿದ್ದರು. ಇದು 2014ರ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿಗೆ ನೆರವಾಗಿತ್ತು ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...