ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ರೇಲ್ವೆ ಸ್ಟೇಶನ್ ಮಾಹಿತಿ ಕಾರ್ಯಗಾರ 

Source: varthabhavan | By Arshad Koppa | Published on 22nd July 2017, 2:52 PM | Coastal News | Guest Editorial |

ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.), ಮುರ್ಡೇಶ್ವರದ ವತಿಯಿಂದ, ಸಂಸ್ಥೆಯ “ನಿರಂತರ ಶಿಕ್ಷಣ ಯೋಜನೆ’ ಯಡಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ, “ರೇಲ್ವೇ ಸ್ಟೇಶನ್ ಮಾಹಿತಿ ಕಾರ್ಯಗಾರ’ವನ್ನು ಮುರ್ಡೇಶ್ವರದ ಕೊಂಕಣ ರೇಲ್ವೆ ಸ್ಟೇಶನ್ ನಲ್ಲಿ ಏರ್ಪಡಿಸಲಾಗಿತ್ತು. ಸಂಸ್ಥೆಯ ಒಂದು ಭಾಗದ 40 ವಿದ್ಯಾರ್ಥಿಗಳನ್ನು ರೇಲ್ವೆ ಸ್ಟೇಶನ್‍ಗೆ ಕರೆದುಕೊಂಡು ಹೋಗಿ, ಅಲ್ಲಿನ ವೇಳಾಪಟ್ಟಿ, ಟಿಕೇಟ್ ಪಡೆಯುವ ಸ್ಥಳ, ವಾಹನಗಳ ನಿಲುಗಡೆಯ ಸ್ಥಳ ಮುಂತಾದವುಗಳನ್ನು ಅವರಿಗೆ ಪರಿಚಯಿಸಿ, ಸ್ಟೇಶನ್ ಮಾಸ್ಟರ್ ನ್ನು ಸಂಪರ್ಕಿಸಿ, ಬಂದು ಹೋಗುವ ರೈಲುಗಳ ಸಂಪುರ್ಣ ಮಾಹಿತಿ ಹಾಗೂ ಸ್ಟೇಶನ್‍ನಲ್ಲಿ ಅವುಗಳ ನಿಯಂತ್ರಣ, ನಿರ್ವಹಣೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ನಂತರ ರೇಲ್ವೆ ನಿಯಂತ್ರಣ ಕೊಠಡಿ, ಬ್ಯಾಟರಿ ಕೊಠಡಿ, ಪ್ರಯಾಣ ಕರ ವಿಶ್ರಾಂತಿ ಪಡೆಯುವ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ರೇಲ್ವೆಯ ಉತ್ಸುಕ ಸಿಬ್ಬಂದಿಗಳು ತಿಳಿಸಿಕೊಟ್ಟರು. ಅದೇ ವೇಳೆಯಲ್ಲಿ ಬೆಂಗಳೂರಿನಿಂದ ಕಾರವಾರಕ್ಕೆ ಬರುವ ರೈಲು ಮುರ್ಡೇಶ್ವರದಲ್ಲಿ ನಿಂತಾಗ, ಎಲ್ಲಾ ವಿದ್ಯಾರ್ಥಿಗಳಿಗೆ ರೇಲ್ವೆ ಭೋಗಿಗಳ ಪರಿಚಯವನ್ನು ರೇಲ್ವೆ ಅಧಿಕಾರಿಗಳು ಮಾಡಿಕೊಟ್ಟರು. ನಂತರ ಬಂದ ರೇಲ್ವೆ ಗೂಡ್ಸ್‍ಗಾಡಿ ಮುರ್ಡೇಶ್ವರದಲ್ಲಿ ನಿಂತಾಗ, ಕೊಂಕಣ ರೇಲ್ವೆಯ ಮುಖಾಂತರ ಸರಕು ಸಾಗಾಣ ಕೆಯ ವ್ಯವಸ್ಥೆಗಳ ಮಾಹಿತಿಯನ್ನು ನೀಡಲಾಯಿತು. ನಂತರ, ವಿದ್ಯಾರ್ಥಿಗಳ ಜೊತೆಯಲ್ಲಿದ್ದ, ಸಂಸ್ಥೆಯ ಆಡಳಿತ ಧರ್ಮದರ್ಶಿಗಳಾದ ಶ್ರೀ ಎಸ್.ಎಸ್. ಕಾಮತ್ ರವರು, ಸಂಸ್ಥೆಯ ಯೋಜನಾ ನೀರ್ದೇಶಕಿಯರಾದ ಶ್ರೀಮತಿ  ಆಶಾ ಕಾಮತ್ ರವರು, ಸಂಸ್ಥೆಯ ವಿದ್ಯಾರ್ಥಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಭಾರತೀಯ ರೇಲ್ವೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಚಾರ್ಯೆ ಲತಾ ನಾಯ್ಕ ಹಾಗೂ ಸಂಸ್ಥೆಯ ಶಿಕ್ಷಕಿ ಗುಲಾಬಿ ದೇವಡಿಗ ಈ ಕಾರ್ಯಗಾರದಲ್ಲಿ ಭಾಗವಹಿಸಿ, ಸಹಕರಿಸಿದ್ದರು. ವಿದ್ಯಾರ್ಥಿಗಳು ಕೂಡಾ ತಮ್ಮ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಕೊಂಕಣ ರೇಲ್ವೆಯ ವತಿಯಿಂದ ವಿದ್ಯಾರ್ಥಿಗಳಿಗೆ ಚಾಕಲೇಟ್ ವಿತರಿಸಲಾಯಿತು. ಸಂಸ್ಥೆಯ ವತಿಯಿಂದ ರೇಲ್ವೆಯ ಎಲ್ಲಾ ಸಿಬ್ಬಂದಿಗಳಿಗೆ ಸಿಹಿ ವಿತರಿಸಿ, ಧನ್ಯವಾದ ಸಮರ್ಪಿಸಲಾಯಿತು. ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಹೋಗಿ ಬರಲು ವಾಹನದ ವ್ಯವಸ್ಥೆಯನ್ನು ಸಂಸ್ಥೆಯ ವತಿಯಿಂದ ಮಾಡಲಾಗಿತ್ತು. 

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...