ಮುಂಡಳ್ಳಿ ದೇವಾಲಯ ಕಳ್ಳತನ ಪ್ರಕರಣ. ಪರಾರಿಯಾಗಿದ್ದ ಅರ್ಚಕ ಸತೀಶ ಭಟ್ ಸಾಗರದಲ್ಲಿ ವಶಕ್ಕೆ.

Source: SO News | By Laxmi Tanaya | Published on 23rd October 2020, 8:22 AM | Coastal News |

ಭಟ್ಕಳ : ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ‌ ದೇವರ ಆಭರಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನ ಸಾಗರದಲ್ಲಿ ಬಂಧಿಸಿದ್ದಾರೆ. 

ಪ್ರಕರಣವನ್ನ ಬೇಧಿಸಲು ಎಎಸ್ಪಿ ನಿಖಿಲ್ ಮಾರ್ಗದರ್ಶನದಲ್ಲಿ ತಂಡವನ್ನ ರಚಿಸಲಾಗಿತ್ತು. ಪೊಲೀಸರ ವಿವಿಧ ತಂಡ ಯಲ್ಲಾಪುರ, ಮೈಸೂರು, ಬೆಂಗಳೂರು‌ ಹೀಗೆ ಆರೋಪಿ ಪತ್ತೆಗಾಗಿ ಜಾಲ ಬೀಸಲಾಗಿತ್ತು. ಆರೋಪಿ ಪೊಲೀಸರಿಂದ ತಪ್ಪಿಸಲು ಊರೂರು ಬದಲಾಯಿಸುತ್ತಿದ್ದ ಎನ್ನಲಾಗಿದೆ.

ಅಂತೂ ಸಾಗರದಲ್ಲಿ ಈ ಹಿಂದೆ ಸಹಾಯಕ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಸತೀಶ ಭಟ್ ಎಂಬಾತನನ್ನ ವಶಕ್ಕೆ ಪಡೆಯಲಾಗಿದ್ದು ತನಿಖೆ ನಡೆಸಲಾಗಿದೆ. ದೇವರ ಬಂಗಾರವನ್ನ ಏಲ್ಲಿ ಇಡಲಾಗಿದೆ ಎಂಬುದರ ಬಗ್ಗೆ ಪೊಲೀಸರ ತನಿಖೆ ಮುಂದುವರಿದಿದೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...