ಸಪ್ಟೆಂಬರ್ ಮೂರರಂದು ಭಟ್ಕಳದಲ್ಲಿ ಮುದ್ದು- ರಾಧೆ , ಮುದ್ದು - ಕೃಷ್ಣ ಸ್ಪರ್ಧೆ

Source: SO News | By Laxmi Tanaya | Published on 31st August 2023, 8:56 AM | Coastal News | Don't Miss |

ಭಟ್ಕಳ : ಪ್ರತಿ ವರ್ಷದಂತೆ ಭಟ್ಕಳದ  ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ  ಮುದ್ದು ರಾಧೆ , ಮುದ್ದು ಕೃಷ್ಣ ಸ್ಪರ್ಧೆಯನ್ನು ಭಟ್ಕಳ ತಾಲೂಕಾ ಗಾಣಿಗ ಸೇವಾ ಸಂಘ , ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ,  ಶ್ರೀ ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ  ಹಮ್ಮಿಕೊಳ್ಳಲಾಗಿದೆ. 

ಸಪ್ಟೆಂಬರ್ 3 ರಂದು ಭಾನುವಾರ ಮಧ್ಯಾಹ್ನ 2.00 ಗಂಟೆಗೆ 6 ವರ್ಷದ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸ ಬಹುದು. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಮಕ್ಕಳಿಗೆ ನಗದು ಪುರಸ್ಕಾರ, ಫಲಕ , ಹಾಗೂ ಪ್ರಶಸ್ತಿ ಪತ್ರವನ್ನು ಮತ್ತು ಎರಡೂ ವಿಭಾಗಗಳಲ್ಲಿ ಸಮಾಧಾನಕರ ನಗದು ಪುರಸ್ಕಾರವನ್ನು ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಮುದ್ದು ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಭಟ್ಕಳ ತಾಲೂಕಾ ಗಾಣಿಗ ಸೇವಾ ಸಂಘದ ಅಧ್ಯಕ್ಷರಾದ ಸುಭಾಷ್ ಎಮ್ ಶೆಟ್ಟಿ ಹೇಳಿದರು.
ಕಾರ್ಯಕ್ರಮದ  ಸಂಯೋಜಕರಾದ ಪ್ರಕಾಶ ಶಿರಾಲಿ ಮಾತನಾಡಿ, ಭಾಗವಹಿಸುವ ಎಲ್ಲಾ ಮುದ್ದು ಮಕ್ಕಳಿಗೆ ಪ್ರಶಸ್ತಿ ಪತ್ರ, ಹಾಗೂ ಗಿಪ್ಟ್ ಬಾಕ್ಸ್ ನೀಡಲಾಗುವುದು. ಹೆಸರು ನೋಂದಾಯಿಸಲು ಕೊನೆಯ  ದಿನಾಂಕ : 01/09/2023 ವಿಶೇಷ ಆಕರ್ಷಣೆಯಾಗಿ ದಿ. ನ್ಯೂ ಇಂಗ್ಲೀಷ್ ಪಿ ಯು ವಿದ್ಯಾರ್ಥಿಗಳಿಂದ ಕೃಷ್ಣ ರೂಪಕ ನೃತ್ಯೋತ್ಸವ, ಮಕ್ಕಳಿಂದ ಭಗವದ್ಗೀತೆ ಪಠಣ , ಭಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ವಿನಂತಿಸಲಾಗಿದೆ.

 ಪತ್ರಿಕಾಗೋಷ್ಠಿಯಲ್ಲಿ  ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಶೆಟ್ಟಿ, ಸಂಘದ ಉಪಾಧ್ಯಕ್ಷ ಗಜಾನನ ಶೆಟ್ಟಿ ಮುರ್ಡೆಶ್ವರ, ಸದಸ್ಯರಾದ  ವಿಶಾಲಾಕ್ಷಿ ಶೆಟ್ಟಿ,      ಪೂರ್ಣಿಮಾ ಶೆಟ್ಟಿ,ಉಪಸ್ಥಿತರಿದ್ದರು. ಕಾರ್ಯದರ್ಶಿ ಮನೋಜ ಶೆಟ್ಟಿ ಸ್ವಾಗತಿಸಿದರು. ಖಜಾಂಚಿ ರಾಜೇಶ ಶೆಟ್ಟಿ ವಂದಿಸಿದರು.

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...