ಭಟ್ಕಳದಲ್ಲಿ ಕೋವಿಡ್ ನಿಯಮ ಇನ್ನಷ್ಟು ಕಠಿಣ; ಮುರುಡೇಶ್ವರ ಬ್ರಹ್ಮರಥೋತ್ಸವ ರದ್ಧತಿಗೆ ಆದೇಶ; ಸೋಡಿಗದ್ದೆ ಜಾತ್ರೆಗೂ ಸಂಕಟ

Source: S O News | By V. D. Bhatkal | Published on 15th January 2022, 4:13 PM | Coastal News |

ಭಟ್ಕಳ: ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಎಲ್ಲೆಡೆ ವ್ಯಾಪಿಸುತ್ತಿದ್ದು, ಕೋವಿಡ್ ತಡೆಗೆ ಇನ್ನಷ್ಟು ಕಠಿಣ ನಿಯಮಗಳನ್ನು ಹೇರಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಗುರುವಾರ ಸಂಜೆಯ ಸಭೆಯ ನಂತರ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಮುರುಡೇಶ್ವರ ಬ್ರಹ್ಮರಥೋತ್ಸವವನ್ನು ರದ್ದುಗೊಳಿಸಲು ಆದೇಶ ನೀಡಲಾಗಿದೆ.

ಈ ಕುರಿತು ಶುಕ್ರವಾರ ಮಧ್ಯಾಹ್ನ ಭಟ್ಕಳ ಸಹಾಯಕ ಆಯುಕ್ತೆ

ಆಡಳಿತದೊಂದಿಗೆ ಸಂಘರ್ಷಕ್ಕೆ ಇಳಿದರೆ ಕಾನೂನು ಕ್ರಮ
 
ಬ್ರಹ್ಮರಥೋತ್ಸವದ ಅಂಗವಾಗಿ ನಾವು ಅಂಗಡಿ ಮಳಿಗೆ ತೆರೆಯುತ್ತೇವೆ ಎಂದು ಮಾವಳ್ಳಿ-1 ಪಂಚಾಯತ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿರುವ ಬಗ್ಗೆ ಪಂಚಾಯತ ಪಿಡಿಓ ಕುಮಾರ ಮೊಗೇರ, ಸಹಾಯಕ ಆಯುಕ್ತರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಸಹಾಯಕ ಆಯುಕ್ತೆ ಮಮತಾದೇವಿ, ಹೈಕೋರ್ಟ, ಸರಕಾರದ ಆದೇಶಗಳ ಅನುಸಾರವಾಗಿ ಅಧಿಕಾರಿಗಳು ನಡೆದು ಕೊಳ್ಳಬೇಕಾಗುತ್ತದೆ. ನಾವು ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸುತ್ತಿದ್ದೇವೆ. ಬೇರೆ ಬೇರೆ ಕಾರಣ ನೀಡಿ ಆಡಳಿತದೊಂದಿಗೆ ಸಂಘರ್ಷಕ್ಕೆ ಇಳಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮಮತಾದೇವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಿನ ಮಾಹಿತಿಯ ಪ್ರಕಾರ ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಕೊರೊನಾ ಸೋಂಕಿನ ಪ್ರಭಾವ ಕಡಿಮೆಯಾಗಿದೆ. ಲಸಿಕೆ ಪಡೆಯದವರು ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಪರಿಸ್ಥಿತಿಯನ್ನು ನೋಡಿಕೊಂಡು ಸರಕಾರ ಕೋವಿಡ್ ತಡೆಗೆ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತಿದೆ. ಹೊಸ ನಿಯಮದ ಪ್ರಕಾರ ಹಬ್ಬ, ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಒಳಾಂಗಣದಲ್ಲಿ ಪೂಜೆ, ಧಾರ್ಮಿಕ ವಿಧಾನಗಳನ್ನು ನಡೆಸಲು 50 ಜನರಿಗೆ ಅವಕಾಶ ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ 2 ಡೋಸ್ ಕೊರೊನಾ ಲಸಿಕೆಯನ್ನು ಪಡೆದಿರಬೇಕು ಮತ್ತು ಕೊರೊನಾ ಪರೀಕ್ಷೆಗೂ ಒಳಪಟ್ಟಿರಬೇಕು, ಆದರೆ ರಥ ಎಳೆಯುವುದಕ್ಕೆ ಅವಕಾಶವೇ ಇಲ್ಲ.

ಜಾತ್ರಾ ಪ್ರಯುಕ್ತ ಅಂಗಡಿ ಮಳಿಗೆ ತೆರೆಯುವುದು, ವ್ಯಾಪಾರ ವಹಿವಾಟು ನಡೆಸುವುದು, ಮನರಂಜನಾ ಕಾರ್ಯಕ್ರಮ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಇದು ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ಜಾತ್ರಾಮಹೋತ್ಸವಕ್ಕೂ ಅನ್ವಯಿಸುತ್ತದೆ ಎಂದರು.

ತಹಸೀಲ್ದಾರ ಎಸ್.ರವಿಚಂದ್ರ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ಸಿಪಿಐ ಮಹಾಬಲೇಶ್ವರ ನಾಯ್ಕ, ಎಸೈ ರವೀಂದ್ರ ಬಿರಾದಾರ, ಮ್ಹಾತೋಬಾರ ಶ್ರೀ ಮುರುಡೇಶ್ವರ ದೇವಸ್ಥಾನದ ಪರವಾಗಿ ನಾಗರಾಜ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...