ಭಟ್ಕಳದಲ್ಲಿ ಮ್ಯಾಂಗೋ ಬ್ಯೆರೀಸ್ ಪ್ರೆಶ್ ನ್ಯಾಚುರಲ್ ಐಸ್ ಕ್ರೀಂ ಮಳಿಗೆ ಉದ್ಘಾಟನೆ.

Source: SO News | By Laxmi Tanaya | Published on 4th October 2020, 10:29 PM | Coastal News |

ಭಟ್ಕಳ : ತ್ರಿಸ್ಟಾರ್ , ಪೈವ್ ಸ್ಟಾರ್ ಹೊಟೇಲ್ಗಳಲ್ಲಿ‌ ಸಿಗುವ ಗುಣಮಟ್ಟದ ಟೇಸ್ಟಿ ಟೇಸ್ಟಿಯಾಗಿರುವ ಐಸ್ ಕ್ರೀಂ ಇನ್ನು ಮುಂದೆ ಭಟ್ಕಳದಲ್ಲಿ ಲಭ್ಯವಾಗಲಿದೆ.

ಪಟ್ಟಣದ ಮದೀನಾ ಕಾಲೋನಿಯಲ್ಲಿ ಮ್ಯಾಂಗೋ ಬ್ಯಾರಿಸ್ ಪ್ರೆಶ್ ನ್ಯಾಚುರಲ್ ಐಸ್ ಕ್ರೀಂ ಮಳಿಗೆಯನ್ನ ಇಂದು ಗಣ್ಯರು ಉದ್ಘಾಟನೆಗೊಳಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷರಾದ ಇನಾಯತ್ಉಲ್ಲಾ ಶಾಬಾಂದ್ರಿ, ತಂಜೀಮ್ ಉಪಾಧ್ಯಕ್ಷರಾದ ಅತಿಕುರ್ ರಹಮಾನ್ ಮುನೀರಿ ನೂತನ ಔಟ್ ಲೆಟ್ ಉದ್ಘಾಟನೆಗೊಳಿಸಿದರು.

ಬಳಿಕ ಮಾತನಾಡಿದ ಶಾಬಾಂದ್ರಿ, ನಮ್ಮ ಭಟ್ಕಳ ಜನರು ಒಂದೇ ಉದ್ಯೋಗ ಮಾಡುತ್ತಾ ಗುದ್ದಾಡುವುದಕ್ಕಿಂತ  ಬೇರೆ ಬೇರೆ ವ್ಯವಹಾರ ಮಾಡಬೇಕು. ಆ ಮೂಲಕ ಸೇವೆ ನೀಡಬೇಕೆಂದರು.

ಅತಿಕುರ್ ರಹಮಾನ್ ಮುನೀರಿ ಮಾತನಾಡಿ, ಭಟ್ಕಳ ನವಾಯತರಲ್ಲಿ ವ್ಯವಹಾರವೇ ರಕ್ತಗತವಾಗಿ ಬಂದಿದೆ. ಹೀಗಾಗಿ ದೇಶ ವಿದೇಶಗಳಲ್ಲಿ ವ್ಯವಹಾರ ಮಾಡುತ್ತಿರುವುದು ಸಂತಸದಾಯಕವಾಗಿದೆ ಎಂದರು.
ನೂನತವಾಗಿ ಆರಂಭಗೊಂಡ ಐಸ್ ಕ್ರೀಂ ಮಳಿಗೆ ಜನತೆಯ ರುಚಿ ನೀಗಿಸಲಿ ಎಂದರು.

ಭಟ್ಕಳದ ಖಾಜಿ ಜಮಾತುಲ್ ಮುಸ್ಲಿಮಿನ್ ಮೌಲಾನ ಆದ  ಅಬ್ದುರಬ್ಬಾ ನದ್ವಿ, ಮಹಮದ್ ಅಬ್ದುಲ್ಲಾ , ಎಂ ಎಂಡ್ ಎಂ ನ್ಯಾಚುರಲ್ ಐಸ್ ಕ್ರೀಂ ಪ್ರೈ. ಲಿಮಿಟೆಡ್ ನ ಸಿಇಓ ಮಹಮದ್ ಅಬ್ದುಲ್ಲಾ, ಎಕ್ಸಕ್ಯೂಟಿವ್ ಡೈರೆಕ್ಟರ್ ಮಹಮದ್ ಇರ್ಷಾದ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮಾಲೀಕರಾದ ಅಬ್ದುಲ್ ಅಜೀಜ್ ಅಕ್ರಮಿ, ಬಿಲಾಲ್ ಅಕ್ರಮಿ  ಮತ್ತು ಸಲ್ನಾನ್ ರುಕ್ನುದ್ದೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...