ಮಂಗಳೂರಲ್ಲಿ ಗಾಂಜಾ ನಶೆಯಲ್ಲಿ ಯುವತಿಯ ರಾದ್ಧಾಂತ

Source: manju | By Arshad Koppa | Published on 7th July 2016, 9:51 AM | Coastal News | Incidents |

ಮಂಗಳೂರು: ಇತ್ತೀಚೆಗೆ ಯುವತಿಯರು ನಶೆಯಲ್ಲಿ ಅವಾಂತರ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಯುವತಿಯೋರ್ವಳು ಗಾಂಜಾ ನಶೆ ಏರಿಸಿ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.


ನಗರದ ತೊಕ್ಕೊಟು ಬಳಿಯ ಕುತ್ತಾರು ಜಂಕ್ಷನ್‍ನ ಅಂಗಡಿಯೊಂದರ ಮುಂದೆ ಸಾರ್ವಜನಿಕವಾಗಿ ಸಿಗರೇಟು ಸೇದಿ ಮಾದಕ ಪದಾರ್ಥ ಸೇವಿಸಿ ಸಂಪೂರ್ಣ ನಶೆ ಏರಿಸಿಕೊಂಡಂತೆ ವರ್ತಿಸುತ್ತಿದ್ದ ಯುವತಿಯೋರ್ವಳು ಸುಮಾರು ಒಂದು ಗಂಟೆಗೂ ಅಧಿಕ ಕಾಲ ರಾದ್ದಾಂತ ನಡೆಸಿದ್ದಾಳೆ.
ದ್ವಿಚಕ್ರ ವಾಹನದಲ್ಲಿ ಬಂದಿದ್ದ ಈಕೆ ಮುಡಿಪು ಐಟಿ ಕಂಪೆನಿಯಲ್ಲಿ ಎಂಜಿನಿಯರಿಂಗ್ ಕೆಲಸದಲ್ಲಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಳು. ಈಕೆ ಸಾರ್ವಜನಿಕವಾಗಿ ನಶೆಯಲ್ಲಿದ್ದ ಹಾಗೆ ವರ್ತಿಸಿ ಸಿಗರೇಟು ಸೇದುತ್ತಿದ್ದು ಎಲ್ಲರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಶ್ಲೀಲವಾಗಿ ಸನ್ನೆ ಮಾಡುತ್ತಿದ್ದಳು. ಈ ಬಗ್ಗೆ ಸ್ಥಳೀಯರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಪೊಲೀಸರು ಬಂದಾಗ ಯುವತಿ ಇಲ್ಲಿನ ದೇವಸ್ಥಾನದೊಳಗೆ ಚಪ್ಪಲಿ ಹಾಕಿಕೊಂಡೇ ಒಳ ನುಗ್ಗಲು ಯತ್ನಿಸಿದ್ದು ಜನರು ತಡೆದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆಕೆ ಪೊಲೀಸರು ಸೇರಿ ನೆರೆದವರನ್ನೆಲ್ಲರನ್ನು ಹೈಕೋರ್ಟ್ ಮೆಟ್ಟಿಲೇರಿಸುತ್ತೇನೆಂದು ಆವಾಝ್ ಹಾಕಿದ್ದಾಳೆ.


ಇದಾದ ಬಳಿಕ ಸ್ಥಳಕ್ಕೆ ಬಂದ ಉಳ್ಳಾಲ ಇನ್ಸ್‍ಪೆಕ್ಟರ್ ಶಿವಪ್ರಕಾಶ್‍ರಲ್ಲೂ ಯುವತಿಯು ಅಸಂಬದ್ಧವಾಗಿ ಮಾತಾಡಿದ್ದು ಕೊನೆಗೆ ಆಕೆಯ ತಾಯಿಗೆ ಕರೆ ಮಾಡಿ ಅಂಗಡಿಯಲ್ಲಿ ಖಾಲಿ ಒಂದು ಸಿಗರೇಟು ಸೇದಿದಕ್ಕೆ ರಾದ್ಧಾಂತ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ತಾಯಿ ಬರುವವರೆಗೂ ದೇವಸ್ಥಾನದ ಅಂಗಳದಲ್ಲೇ ಯುವತಿಯನ್ನು ಕುಳ್ಳಿರಿಸಿ ದೇವಸ್ಥಾನದ ಊಟ ನೀಡಲಾಗಿತ್ತು. ಊಟ ಮಾಡುತ್ತಿದ್ದಂತೆಯೇ ಯುವತಿಯು ನೆರದವರಿಗೆ ಅಶ್ಲೀಲ ಪದಗಳಿಂದ ಬೈದು, ಸೆಕೆ ಆಗುತ್ತಿದೆಂದು ವಿವಸ್ತ್ರಗೊಳ್ಳಲು ಸಿದ್ಧಳಾದಾಗ ಸ್ಥಳದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಸ್ಥಳೀಯ ಇಬ್ಬರು ಮಹಿಳೆಯರ ಸಹಕಾರದಿಂದ ಯುವತಿಯನ್ನು ಪೊಲೀಸ್ ವಾಹನದಲ್ಲಿ ಕೂರಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಯುವತಿ ಮೂಲತಃ ಮಗಳೂರಿನ ಕ್ರೈಸ್ತ ಕುಟುಂಬಕ್ಕೆ ಸೇರಿದವಳಾಗಿದ್ದು, ಆಕೆಯ ತಾಯಿ ಆಸ್ಪತ್ರೆಗೆ ಬಂದು ಸಮಾಧಾನಿಸಿದರೂ ಯುವತಿ ವಿಚಿತ್ರವಾಗಿಯೇ ವರ್ತಿಸಿ ಆಸ್ಪತ್ರೆಗೆ ಸಾಗಿಸಿದ ಉಳ್ಳಾಲ ಪೊಲೀಸ್ ಪೇದೆಗಳ ಮೇಲೆ ಕೇಸ್ ಹಾಕಿ ಹೈಕೋರ್ಟ್ ಮೆಟ್ಟಿಲೇರಿಸುತ್ತೇನೆಂದು ಧಮ್ಕಿ ಹಾಕಿದ್ದಾಳೆ ಎಂದು ತಿಳಿದುಬಂದಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...