ಕೋಲಾರ: ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ ಹಾಗೂ ಕಲಿಕಾ ಗುಣಮಟ್ಟದಲ್ಲಿ ಮಹತ್ವದ ಬದಲಾವಣೆಗೆ ಕಾರ್ಯಾಗಾರ ಅಗತ್ಯ

Source: shabbir | By Arshad Koppa | Published on 12th July 2017, 7:42 PM | State News | Guest Editorial |

ಕೋಲಾರ ಜು.12: ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ ಹಾಗೂ ಕಲಿಕಾ ಗುಣಮಟ್ಟದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಸಂಪನ್ಮೂಲ ವ್ಯಕ್ತಿಗಳಿಗೆ ಅಗತ್ಯವಾಗಿ ಲರ್ನಿಂಗ್ ಲೀಡರ್ ಕಾರ್ಯಾಗಾರ ಬಹಳ ಮುಖ್ಯವೆಂದು ಸ್ಟರ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ರಘುರಾಮಾನುಜಂ ಅಭಿಪ್ರಾಯಪಟ್ಟರು.


    ನಗರದ ಡಯಟ್‍ನಲ್ಲಿ ಕೋಲಾರ ಜಿಲ್ಲೆಯ 6 ತಾಲ್ಲೂಕಿನ ಎಲ್ಲಾ ಬಿ.ಆರ್.ಪಿಗಳಿಗೆ 3 ದಿನಗಳ ಕಾಲ ಡಿ.ಎಸ್.ಎ.ಆರ್.ಟಿ ಹಾಗೂ ಸ್ಟರ್ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ ಲರ್ನಿಂಗ್ ಲೀಡರ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ಸ್ಟಾರ್ ಸಂಸ್ಥೆಯ ಉದ್ದೇಶಗಳಾದ ಗುಣಮಟ್ಟದ ಕಲಿಕೆ, ಶಿಕ್ಷಕರ ಅಭ್ಯಾಸಗಳನ್ನು ಸುಧಾರಿಸುವುದು, ಇಂಟನಿಕ್ಸ್ ಮೋಟಿವೇಷನ್ ಮತ್ತು ಮೈಂಡ್ ಸೆಟ್‍ಗಳನ್ನು ಬೆಳೆಸುವಲ್ಲಿ ಬಿ.ಆರ್.ಪಿ., ಸಿ.ಆರ್.ಪಿಗಳ ಪಾತ್ರ ಬಹಳ ಮುಖ್ಯವೆಂದು ತಿಳಿಸಿದರು.
    ಸ್ಟರ್ ಸಂಸ್ಥೆಯ ಮತ್ತೊಬ್ಬ ವ್ಯವಸ್ಥಾಪಕಿ ಕೃಷ್ಣಶ್ರೀವಲ್ಲಿಯವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ಶೈಕ್ಷಣ ಕ ರಂಗದಲ್ಲಿ ಸಿ.ಆರ್.ಪಿ. ಬಿ.ಆರ್‍ಪಿಗಳನ್ನು ಉತ್ತಮ ರೀತಿಯಲ್ಲಿ ವ್ಯವಸ್ಥೆ ಗೊಳಿಸಲು ಕಾರ್ಯಾಗಾರಗಳು ಬಹಳ ಮುಖ್ಯವೆಂದು ಹಾಗೂ ಉತ್ತಮ ರೀತಿಯಲ್ಲಿ ಧನಾತ್ಮಕವಾಗಿ ಚಿಂತನೆ ಮಾಡಬೇಕು. ಸಮಸ್ಯೆ ಎದುರಾದಾಗ ತಾಳ್ಮೆಯಿಂದ ನಿಬಾಯಿಸುವ ಜಾಣ್ಮೆ ಸಿ.ಆರ್.ಪಿ. ಬಿ.ಆರ್‍ಪಿಗಳು ವೃತ್ತಿ ಕ್ಷೇತ್ರದಲ್ಲಿ ಅಳವಡಿಸಕೊಳ್ಳಬೇಕು. ಅದಕ್ಕಾಗಿ ರಚನಾತ್ಮಕ ಕೌಶಲ್ಯಭರಿತ ಕಾರ್ಯಾಗಾರವನ್ನು ಆಯೋಜಿಸಬೇಕೆಂದರು.
    
ಕಾರ್ಯಾಗಾರದಲ್ಲಿ ಸ್ಟರ್ ಸಂಸ್ಥೆಯ ಮೌಲ್ಯಮಾಪನ ಮುಖ್ಯಸ್ಥ ಪರಿವಿಂದರ್ ಸಿಂಗ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ತಿಮ್ಮಸಂದ್ರ ನಾಗರಾಜ್ ಹಾಗೂ ಜಿಲ್ಲೆಯ ಎಲ್ಲಾ ಬಿ.ಆರ್.ಪಿಗಳು ಉಪಸ್ಥಿತರಿದ್ದರು.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...