ಕೋಲಾರ:ಪ.ಜಾ, ಪ ಪಂ.ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿರುವ ಅನುದಾನ ಸಂಪೂರ್ಣ ಬಳಕೆ ಮಾಡಿ: ಡಾ.ಕೆ.ವಿ. ತ್ರಿಲೋಕಚಂದ್ರ

Source: varthabhavan | By Arshad Koppa | Published on 23rd August 2017, 8:31 AM | Coastal News | Guest Editorial |

ಕೋಲಾರ, ಆಗಸ್ಟ್ 22 :ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿರುವ ಅನುದಾನ ಸಂಪೂರ್ಣ ಬಳಕೆ ಮಾಡುವ ಮೂಲಕ ಯಾವದೇ ಅನುದಾನವು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಹಾಗೂ ಸಂಪೂರ್ಣ ಪ್ರತಿಪಲವು ಪಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ. ವಿ.ತ್ರಿಲೋಕಚಂದ್ರರವರು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿ ಇಂದು ನಡೆದ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಲ್ಲಾ ಜಾಗೃತಿ ಸಮತಿಯ ಸಭೆಯಲ್ಲಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕನಿಷ್ಟ 2 ಎಕರೆ ಜಮೀನು ಇರುವವರಿಗೆ ಮಾತ್ರ ಗಂಗಾ ಕಲ್ಯಾಣ ಯೋಜನೆಯಡಿ ಕೋಳವೆ ಭಾವಿ ಕೋರೆಸಲು ಅವಕಾಶವಿದ್ದು ಕೆಲವರು 2 ಎಕರೆಗಿಂತ ಕಡಿಮೆ ಇದ್ದರೂ ಹೆಚ್ಚಿನ ಜಮೀನಿದೆ ಎಂದು ಯೋಜನೆಯ ದುರುಪಯೋಗಪಡಿಸಿಕೋಳ್ಳುತ್ತಿದ್ದು ಇದರ ಬಗ್ಗೆ ಎಚ್ಚರಿಕೆ ವಹಿಸಿ ಅರ್ಹ ಪಲಾನುಭವಿಗಳಿಗೆ ಯೋಜನೆ ಸದುಪಯೋಗವಾಗುವಂತೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಜಾಗೃತ ಸಮಿತಿ ಸದಸ್ಯರು ಟಿ.ಎಸ್.ಪಿ. ಯೋಜನೆಯಡಿ ಹಲವು ಕಾಮಾಗಾರಿಗಳ ಟೆಂಡರ್ ಪ್ರಕ್ರಿಯೆ ಆದರೂ ಕಾಮಾಗಾರಿ ಪ್ರಾರಂಭವಾಗದೆ 1 ಕೋಟಿ 10 ಲಕ್ಷ ಹಣ ವಾಪಾಸ್ ಹೋಗಿದೆ.. ಕೇಲವರು ಮೀಸಲಾತಿ ಅನುಕೂಲ ಪಡೆಯಲು ನಕಲಿ ಜಾತಿ ಪ್ರಮಾಣ ನೀಡುತ್ತಿದ್ದಾರೆ. ಗಂಗಕಲ್ಯಾಣ ಯೋಜನೆಯ ಕಳಪೆ ಮಟ್ಟದ ಪಂಪು ಮೋಟರ್ ಅಳವಡಿಕೆಯಾಗಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ. ಕಾವೇರಿರವರು ಈ ಬಗ್ಗೆ ಸಾಕಷ್ಟು ದೂರುಗಳಿದ್ದು ಕೋಳವೆ ಬಾವಿ ಅಕ್ರಮ ಕುರಿತು ಸಮಿತಿಯನ್ನು ರಚಿಸಿ ಸೂಕ್ತ ತನಿಖೆ ಮಾಡಿಸಿ ಕ್ರಮ ವಹಿಸಲಾಗುವುದು ಎಂದರು.
ದೌರ್ಜನ್ಯ ಪ್ರಕರಣಗಳಿಗೆ ವಿರುದ್ದ ಪ್ರಕರಣಗಳು ದಾಖಲಾಗುತ್ತಿವೆ. ಹಾಗೂ ಅಟ್ರಾಸಿಟಿ ಕಾಯ್ದೆಯಡಿ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬ ಸದಸ್ಯರ ಪ್ರಶ್ನೆಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ರೋಹಿಣ  ಕಟೋಚ್ ಸಫೆಟ್ ರವರು ಕೆಲವು ಸಂದರ್ಭಗಳಲ್ಲಿ ಎರಡು ಕಡೆಯ ದೂರುಗಳನ್ನು ದಾಖಲಿಸಿಕೋಂಡು ಸೂಕ್ತ ತನಿಖೆ ಮಾಡಿ ಕ್ರಮ ವಹಿಸಲಾಗುವುದು. 2015-16 ನೇ ಸಾಲಿನಲ್ಲಿ 53 ಪ್ರಕರಣಗಳು ಹಾಗೂ 2017-18 ನೇ ಸಾಲಿನಲ್ಲಿ 32 ಪ್ರಕರಣಗಳು ಅಟ್ರಾಸಿಟಿ ಕಾಯ್ದೆಯಡಿ ದಾಖಲಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಜಿ.ಎಪ್. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲೋಕೇಶ್, ಅಪರ ಪೊಲೀಸ್ ವರಿಷ್ಟಾಧಿಕಾರಿ ರಾಜೀವ್. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಜಯಣ್ಣ, ಜಾಗೃತ ಸಮಿತಿಯ ಸದಸ್ಯರುಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Read These Next

ಭಟ್ಕಳದಲ್ಲಿ ಮೇಲೇಳದೇ ಮಲಗಿದ ರಿಯಲ್ ಎಸ್ಟೇಟ್ ದಂಧೆ; ದುಬೈ ದುಡ್ಡು ಮೊದಲಿನಂಗಿಲ್ಲ; ಜಾಗ ಖರೀದಿ ಬರಕತ್ತಲ್ಲ!

ನೋಟ್ ಬ್ಯಾನ್ ದೇಶದ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ ಎಂದು ಇತ್ತಿತ್ತಲಾಗಿ ಆರ್ಥಿಕ ತಜ್ಞರೇ ದೊಡ್ಡ ದನಿಯಲ್ಲಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...