ಕರ್ನಾಟಕ ಸರಕಾರದ ಆಹ್ವಾನದ ಮೇರೆಗೆ ಲಂಡನ್‌ನಿಂದ ಆಗಮಿಸಿದ್ದ ಲೇಖಕಿಯ ಬಂಧನ, ಗಡಿಪಾರು

Source: Vb | By I.G. Bhatkali | Published on 27th February 2024, 12:29 AM | State News | National News |

ಬೆಂಗಳೂರು: ಕರ್ನಾಟಕ ಸರಕಾರದ ಆಹ್ವಾನದ ಮೇರೆಗೆ 'ಸಂವಿಧಾನ ಹಾಗೂ ಭಾರತದ ಏಕತೆ' ಸಮಾವೇಶದಲ್ಲಿ ಉಪನ್ಯಾಸ ನೀಡಲು ಭಾರತಕ್ಕೆ ಆಗಮಿಸಿದ್ದ ಖ್ಯಾತ ಲೇಖಕಿ, ಕವಯತ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನಿತಾಶಾ ಕೌಲ್ ಅವರನ್ನು ವಲಸೆ ಇಲಾಖೆಯ ಅಧಿಕಾರಿಗಳು ಶುಕ್ರವಾರ ಬೆಂಗಳೂರಿನ ವಿಮಾನನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡು, ಆನಂತರ ಅವರನ್ನು ಬ್ರಿಟನ್‌ಗೆ ಗಡಿಪಾರು ಮಾಡಿದ ಘಟನೆ ರವಿವಾರ ವರದಿಯಾಗಿದೆ.

ಬ್ರಿಟನ್‌ನ ವೆಸ್ಟ್‌ಮಿನ್‌ಸ್ಟರ್‌ ವಿವಿಯಲ್ಲಿ ಪ್ರೊಫೆಸ‌ರ್ ಆಗಿರುವ ನಿತಾಶಾ ಅವರು ಕಾಶ್ಮೀರಿ ಪಂಡಿತ ಸಮುದಾಯದವರಾಗಿದ್ದು, ಸಂಘಪರಿವಾರದ ನೀತಿಗಳನ್ನು ತೀಕ್ಷ್ಮವಾಗಿ ಟೀಕಿಸುತ್ತಾ ಬಂದಿದ್ದಾರೆ. ಫೆ.24 ಹಾಗೂ 25ರಂದು ಬೆಂಗಳೂರಿನಲ್ಲಿ ಆಯೋಜಿಸಲಾದ 'ಸಂವಿಧಾನ ಹಾಗೂ ಭಾರತದ ಏಕತೆ' ವಿಷಯದ ಕುರಿತ ಸಮಾವೇಶದಲ್ಲಿ ಉಪನ್ಯಾಸ ನೀಡಲು ಅವರನ್ನು ಕರ್ನಾಟಕ ಸರಕಾರ ಆಹ್ವಾನಿಸಿತ್ತು. ಶುಕ್ರವಾರ ಬೆಂಗಳೂರು ವಿಮಾನನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆಯೇ ಯಾವುದೇ ಕಾರಣ ನೀಡದೆ ವಲಸೆ ಇಲಾಖೆಯ ಅಧಿಕಾರಿಗಳು ತನ್ನನ್ನು ಬಂಧಿಸಿದ್ದಾರೆಂದು ನಿತಾಶಾ ಅವರು ಆಪಾದಿಸಿದ್ದಾರೆ. ಆರೆಸ್ಸೆಸ್ ವಿರುದ್ಧ ಟೀಕೆಗಳನ್ನು 2 ಮಾಡುತ್ತಿರುವುದಕ್ಕಾಗಿ ತನಗೆ ಭಾರತ ಪ್ರವೇಶವನ್ನು ನಿರಾಕರಿಸಲಾಗಿದೆಯೆ೦ದು ಅಧಿಕಾರಿಗಳು ತನಗೆ ಅನಧಿಕೃತವಾಗಿ ತಿಳಿಸಿದ್ದಾರೆಂದು ನಿತಾಶಾ ಆರೋಪಿಸಿದ್ದಾರೆ. ಸುಮಾರು 24 ತಾಸುಗಳ ಕಾಲ ತನ್ನನ್ನು ಬಂಧನದಲ್ಲಿರಿಸಲಾಗಿತ್ತು ಎಂದವರು ಹೇಳಿದ್ದಾರೆ. 

'ಕೆಲವು ವರ್ಷಗಳ ಹಿಂದೆ ಆರೆಸ್ಸೆಸ್ ವಿರುದ್ಧ ನಾನು ಮಾಡಿದ್ದ ಟೀಕೆಗಳ ಬಗ್ಗೆ ಈ ಅಧಿಕಾರಿಗಳು ಅನೌಪಚಾರಿಕವಾಗಿ ಪ್ರಸ್ತಾವಿಸಿದ್ದರು. ನನ್ನನ್ನು ರಾಜ್ಯ ಸರಕಾರವು ಆಹ್ವಾನಿಸಿತ್ತು. ಆದರೆ ಕೇಂದ್ರ ಸರಕಾರವು ನನಗೆ ಪ್ರವೇಶವನ್ನು ನಿರಾಕರಿಸಿದೆ'' ಎಂದು ನಿತಾಶಾ ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಬರೆದಿದ್ದಾರೆ. ತಾನು ಬ್ರಿಟನ್ ಪಾಸ್‌ಪೋರ್ಟ್ ಹಾಗೂ ಸಾಗರೋತ್ತರ ಭಾರತೀಯ ಪೌರತ್ವ ಕಾರ್ಡ್ (ಒಸಿಐ) ಹೊಂದಿರುವುದಾಗಿಯೂ ಆಕೆ ಹೇಳಿದ್ದಾರೆ.

ತನ್ನನ್ನು ಬಂಧಿಸಿದ ಅಧಿಕಾರಿಗಳು ತನಗೆ ಮೂಲಭೂತ ಸೌಕರ್ಯಗಳನ್ನು ಕೂಡಾ ನಿರಾಕರಿಸಿದ್ದರು. ವಿಮಾನನಿಲ್ದಾಣದ ಅಧಿಕಾರಿಗಳಿಗೆ ಹಲವಾರು ಸಲ ಕರೆ ಮಾಡಿದ ಹೊರತಾಗಿಯೂ ಅವರು ನನಗೆ ಆಹಾರ, ನೀರು, ತಲೆದಿಂಬು ಹಾಗೂ ಹೊದಿಕೆಯನ್ನು ನೀಡಲು ನಿರಾಕರಿಸಿದರೆಂದು ಆಕೆ ಆಪಾದಿಸಿದ್ದಾರೆ.

ತನ್ನ ವಿರುದ್ದ ಕೇಂದ್ರ ಸರಕಾರದ ಕ್ರಮದ ಬಗ್ಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿರುವ ನಿತಾಶಾ ಅವರು, ಇಂತಹ ಲೋಪವನ್ನು ಸರಿಪಡಿಸದೆ ಇದ್ದಲ್ಲಿ, ನಾನು ದೇಶಭ್ರಷ್ಟ ಟಿಬೆಟಿಯನ್ನರು ಹಾಗೂ ಉಕ್ರೇನಿಗರು ಮತ್ತು ಇತಿಹಾಸದುದ್ದಕ್ಕೂ ಅತಾರ್ಕಿಕವಾದ ಅಧಿಕಾರದ ದಬ್ಬಾಳಿಕೆಗೆ ಒಳಗಾದ ಜನರ ಸಾಲಿಗೆ ಸೇರುತ್ತೇನೆ'' ಎಂದವರು ಎಕ್ಸ್ ಹೇಳಿದ್ದಾರೆ.

ಕೇಂದ್ರ ಸರಕಾರವನ್ನು ತೀವ್ರವಾಗಿ ಖಂಡಿಸಿದ ಅವರು, ನನ್ನ ಲೇಖನಿ ಹಾಗೂ ಪದಗಳಿಗೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವು ಯಾಕೆ ಹೆದರುತ್ತದೆ?. ರಾಜ್ಯ ಸರಕಾರದಿಂದ ಆಹ್ವಾನಿತಳಾದ ಪ್ರೊಫೆಸರ್‌ಗೆ ಸಂವಿಧಾನದ ಕುರಿತ ಸಮಾವೇಶದಲ್ಲಿ ಪಾಲ್ಗೊಳ್ಳಲು ಕೇಂದ್ರ ಸರಕಾರ ಅನುಮತಿ ನೀಡದಿರುವುದು ಹೇಗೆ ಸರಿ? ನಾವು ಪೋಷಿಸಿದ ಭಾರತವು ಇದೇನಾ? ಎಂದು ಆಕೆ ಪ್ರಶ್ನಿಸಿದ್ದಾರೆ.

Read These Next

ಹುಬ್ಬಳ್ಳಿ-ಧಾರವಾಡ ಕೊಲೆ ಪ್ರಕರಣಗಳು ವರದಿ ಸಲ್ಲಿಸಲು ಎಡಿಜಿಪಿಗೆ ಸೂಚನೆ; ಪರಮೇಶ್ವ‌ರ್

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪದೇ ಪದೇ ಸಂಭವಿಸುತ್ತಿರುವ ಕೊಲೆ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ ಕೂಡಲೇ ವರದಿ ಸಲ್ಲಿಸುವಂತೆ ...

ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆ; ಆರೋಪಿ ಪರಾರಿ | ಹುಬ್ಬಳ್ಳಿಯಲ್ಲಿ ನಡೆದ ಎರಡನೇ ಬರ್ಬರ ಕೃತ್ಯ

ಹುಬ್ಬಳ್ಳಿಯ ನೇಹಾ ಹಿರೇಮಠ, ಕೊಡಗು ಜಿಲ್ಲೆಯ ಸೋಮವಾರಪೇಟೆಯ ಮೀನಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಪ್ರೀತಿ ನಿರಾಕರಿಸಿದ ಕಾರಣಕ್ಕೆ ...

ತಿಹಾರ್ ಜೈಲಿನಿಂದ ಹೊರಬಂದ ಕೇಜ್ರಿವಾಲ್ ಸರ್ವಾಧಿಕಾರದಿಂದ ದೇಶವನ್ನು ರಕ್ಷಿಸಬೇಕಿದೆ: ದಿಲ್ಲಿ ಸಿಎಂ

ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಬಳಿಕ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರು ಶುಕ್ರವಾರ ತಿಹಾರ್ ಜೈಲಿನಿಂದ ...

ಕೇಜ್ರವಾಲ್‌ಗೆ ಜೂ.1ರವರೆಗೆ ಮಧ್ಯಂತರ ಜಾಮೀನು; ಮುಖ್ಯಮಂತ್ರಿ ಕಚೇರಿಗೆ ಹೋಗಬಾರದು: ಸುಪ್ರೀಂ ಕೋರ್ಟ್

ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ...

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...