ಡಿಸಿ ಕಚೇರಿಯ ಮೂವರಿಗೆ ಮಾಸಶ್ರೇಷ್ಠ ಗೌರವ

Source: sonews | By Staff Correspondent | Published on 5th February 2018, 11:01 PM | Coastal News | State News | Don't Miss |

ಕಾರವಾರ: ಆಡಳಿತದಲ್ಲಿ ವೇಗ ಹೆಚ್ಚಿಸಲು ಹಾಗೂ ಸಿಬ್ಬಂದಿಯಲ್ಲಿ ಕರ್ತವ್ಯದ ಸ್ಫೂರ್ತಿಗಾಗಿ ಜಿಲ್ಲಾಧಿಕಾರಿ ಕಚೇರಿಯ ಮೂವರು ಸಿಬ್ಬಂದಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಾಸಶ್ರೇಷ್ಠ ಗೌರವ ನೀಡಿ ಸತ್ಕರಿಸಿದ್ದಾರೆ.

ಜನವರಿ ತಿಂಗಳಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳಾದ ಭಾಸ್ಕರ್ ಕೊಚ್ರೇಕರ, ರಾಜೇಶ್ವರಿ ಗೌಡರ್ ಹಾಗೂ ಈಶ್ವರ ಭಟ್ ಅವರಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದ ಬಹುಮಾನ ನೀಡಿದರು ಹಾಗೂ ಅವರ ಭಾವಚಿತ್ರಗಳನ್ನು ಎರಡು ಮಾಸಶ್ರೇಷ್ಠರು ಸೂಚನಾಫಲಕಗಳಲ್ಲಿ ಅಳವಡಿಸಿದರು.

ಕಚೇರಿ ಸಿಬ್ಬಂದಿಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ಪ್ರತಿ ತಿಂಗಳು ಅವರ ಹಾಜರಾತಿ, ಇ ಆಫೀಸ್‍ನಲ್ಲಿ ಕಡತಗಳ ವಿಲೇವಾರಿ ಹಾಗೂ ಬಾಕಿ ಕಡತಗಳ ವಿಲೇವಾರಿ ಕ್ರಮಾಂಕದ ಜೇಷ್ಠತೆ ಆಧಾರದಲ್ಲಿ ಮೊದಲ ಮೂರು ಸ್ಥಾನಗಳು ಬಹುಮಾನಗಳಿಗೆ ಮಾನದಂಡವಾಗಿದೆ. ಇದರಿಂದ ಪ್ರತಿ ತಿಂಗಳು ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಉತ್ತಮ ಸಾಧನೆ ತೋರಲು ಇದು ನೆರವಾಗಲಿದೆ ಎಂದರು.

ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರು, ಈ ಹಿಂದೆ ಪ್ರತಿ ವರ್ಷ ಇಂತಹ ಸಾಧಕರನ್ನು ಗುರ್ತಿಸಿ ಗೌರವಿಸಲಾಗುತ್ತಿತ್ತು. ಇದೀಗ ಪ್ರತಿ ತಿಂಗಳೂ ಮಾಸಶ್ರೇಷ್ಠ ಹೆಸರಿನಲ್ಲಿ ಉತ್ತಮ ಕೆಲಸ ಮಾಡಿದವರನ್ನು ಬಹುಮಾನ ನೀಡಿ ಗೌರವಿಸಲಾಗುತ್ತಿದೆ. ಅವರ ಭಾವಚಿತ್ರಗಳನ್ನು ಜಿಲ್ಲಾಧಿಕಾರಿ ಕಚೇರಿ ಸೂಚನಾಫಲಕದಲ್ಲಿ ತಿಂಗಳುಪೂರ್ತಿ ಮಾಸಶ್ರೇಷ್ಠ ಹೆಸರಿನಲ್ಲಿ ಅಳವಡಿಸಲಾಗುವುದು. ಮುಂದಿನ ದಿನಗಳಲ್ಲಿ ಬೇರೆ ಇಲಾಖೆಗಳೂ ಇದರಿಂದ ಸ್ಫೂರ್ತಿಪಡೆದು ತಮ್ಮ ತಮ್ಮ ಇಲಾಖೆಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದವರನ್ನು ಗೌರವಿಸುವ ಮೂಲಕ ಸುಗಮ ಆಡಳಿತಕ್ಕೆ ಮುಂದಾಗಬೇಕು ಎಂದರು.

                  
ಕೌಶಲ್ಯಾಭಿವೃದ್ಧಿ ತರಬೇತಿಗೆ ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ
ಕಾರವಾರ: 2017-18 ಸಾಲಿನಲ್ಲಿ ಪರಿಶಿಷ್ಟ ವರ್ಗದ ನಿರುದ್ಯೋಗಿ ಯುವಕರಿಗೆ ಕೌಶಾಲ್ಯಾಭಿವೃದ್ಧಿ ತರಬೇತಿಗೆ ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ. 

ಪರಿಶಿಷ್ಟ ವರ್ಗದ ನಿರುದ್ಯೋಗಿ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲು ಅಭ್ಯರ್ಥಿಗಳನ್ನು  ನೋಂದಾಯಿಸಿಕೊಳ್ಳಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲು ಅನುಮತಿ ನೀಡಿರುತ್ತಾರೆ. ತರಬೇತಿಯನ್ನು ಬಯಸುವ ಪರಿಶಿಷ್ಟ ವರ್ಗಗ¼ ಯುವಕ/ಯುವತಿಯರು ಇಲಾಖೆಯ ವೆಬ್‍ಸೈಟ್ www.stskillkar.in  ರಲ್ಲಿ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08382-226514 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
  
ಎಫ್‍ಡಿಎ ಪರೀಕ್ಷೆ ಫೆ.25 ರಂದು
ಕಾರವಾರ: ರಾಜ್ಯದ ವಿವಿಧ ಇಲಾಖೆಯಲ್ಲಿನ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳು ಫೆ.25 ರಂದು ನಡೆಯಲಿವೆ. 

ಫೆಬ್ರವರಿ 04 ರಂದು ನಡೆಸಲು ಉದ್ದೇಶಿಸಿದ್ದ ಪರೀಕ್ಷೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಕರ್ನಾಟಕ ಲೋಕಸೇವಾ ಆಯೋಗ ಮುಂದೂಡಿತ್ತು. ಆದುದರಿಂದ ಫೆಬ್ರವರಿ 25 ರಂದು ಪರೀಕ್ಷೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
  
ಫೆ.6ರಮದು ಸ್ಪರ್ಶ ಕುಷ್ಟರೋಗ ಅರಿವು ಆಂದೋಲನ 
ಕಾರವಾರ: ಕುಷ್ಟರೋಗ ನಿವಾರಣೆ ಕಾರ್ಯಕ್ರಮದನ್ವಯ ಸ್ಪರ್ಶ ಕುಷ್ಟ ಅರಿವು ಆಂದೋಲನವನ್ನು ಫೆಬ್ರವರಿ 6ರಂದು ಬೆಳಗ್ಗೆ 10.30 ಕ್ಕೆ ಶಿವಾಜಿ ಬಿ.ಎಡ್ ಕಾಲೇಜು ಬಾಡ, ಕಾರವಾರದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಾದ್ಯಂತ  ಜನವರಿ 31 ರಿಂದ ಫೆಬ್ರವರಿ 13 ರವರೆಗೆ ಆಂದೋಲನ ನಡೆಯುತ್ತಿದೆ. “ಕೈ ಕೈ ಜೋಡಿಸಿ, ಕುಷ್ಟ ನಿವಾರಿಸಿ ಹಾಗೂ ಬನ್ನಿ ಎಲ್ಲರೂ ಭಾರತವನ್ನು ಕುಷ್ಟರೋಗ ಮುಕ್ತ ಮಾಡಲು ಪ್ರತಿಜ್ಞೆ ಮಾಡೋಣ” ಈ ವರ್ಷದ ಘೋಷಣೆಯಾಗಿದ್ದು, ಕಾರ್ಯಕ್ರಮದ ನಿಮಿತ್ಯ ಉದ್ಘಾಟಣೆ ಹಾಗೂ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
  
ಪ್ರಕಾಶಕರ ನೊಂದಣಿಗೆ ಅರ್ಜಿ ಆಹ್ವಾನ
ಕಾರವಾರ: ಕನ್ನಡ ಪುಸ್ತಕ ಪ್ರಾಧಿಕಾರವು ನೊಂದಣಿ ಯೋಜನೆಯೊಂದನ್ನು ಆರಂಭಿಸಿದ್ದು, ರಾಜ್ಯದಲ್ಲೆಡೆಯಲ್ಲಿರುವ ಪ್ರಕಾಶಕರು ನೊಂದಾಯಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ. 

ರಾಜ್ಯದಲ್ಲಿ ಪ್ರಕಟಿತ ಪುಸ್ತಕಗಳ ಹಾಗೂ ಪ್ರಕಾಶಕರ ವಿವರಗಳು ಒಂದೆಡೆ ಲಭ್ಯವಾದಲ್ಲಿ ಸಾಹಿತ್ಯಾಸಕ್ತರಿಗೆ ಅನುಕೂಲಕರವಾಗುವ ದೃಷ್ಠಿಕೋನದಿಂದ ನೊಂದಣಿ ಯೋಜನೆಯನ್ನು ಆರಂಭಿಸಿದೆ. ಅರ್ಹ ಅರ್ಜಿದಾರರು ಇಲಾಖೆಯ ವೆಬ್‍ಸೈಟ್ www.kannadapustakapradhikara.com ನಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 20 ರೊಳಗೆ  ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ,  ಕನ್ನಡ ಭವನ, ಜೆ.ಸಿ ರಸ್ತೆ ಬೆಂಗಳೂರು-02 ಇಲ್ಲಿಗೆ ಕಳುಹಿಸಬಹುದಗಿದೆ. ಹೆಚ್ಚಿನ ಮಾಹಿತಿಗಾಗಿ 080-22107704,22484516 ನ್ನು ಸಂಪರ್ಕಿಸಬಹುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬೋಧಕೇತರರಿಗೆ ಅರ್ಜಿ ಆಹ್ವಾನ
ಕಾರವಾರ: ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ಅರೆಕಾಲಿಕ ಉಪನ್ಯಾಸಕರ ಹುದ್ದೆಗೆ ತಾತ್ಕಾಲಿಕ  ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 
ಆಸಕ್ತ ಅಭ್ಯರ್ಥಿಗಳು jr msc (forestry) 2Sem ವಿದ್ಯಾರ್ಥಿಗಳಿಗೆ ಬೋಧಿಸಲು ಅರೆಕಾಲಿಕ ಉಪನ್ಯಾಸಕರನ್ನು  ತಾತ್ಕಾಲಿಕ ನೇಮಿಸಲು ಫೆಬ್ರುವರಿ 14 ರಂದು ಬೆಳಗ್ಗೆ12 ಗಂಟೆಗೆ  ಶಿರಸಿ ಅರಣ್ಯ ಇಲಾಖೆಯ ಮಹಾವಿದ್ಯಾಲಯದ  ಡೀನ್ ಕಚೇರಿಯಲ್ಲಿ ನಡೆಯುವ ಸಂದರ್ಶದಲ್ಲಿ ಮೂಲ ದಾಖಲೆಯೊಂದಿಗೆ ಎರಡು  ದೃಢೀಕೃತ ಪ್ರತಿಗಳನ್ನು ತರಬೇಕು ಎಂದು ಅರಣ್ಯ ಇಲಾಖೆಯ ಡೀನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
  


 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...