ಕಾರವಾರ: ವೋಟರ್ ಕಾರ್ಡಗಳಿಗೆ ಆಧಾರ ಲಿಂಕ್ ಮಾಡಿಸಬೇಕು; ಚುನಾವಣಾಧಿಕಾರಿ

Source: S O News | By I.G. Bhatkali | Published on 6th August 2022, 5:25 PM | Coastal News |

ಕಾರವಾರ :  ಜಿಲ್ಲೆಯಲ್ಲಿರುವ ಎಲ್ಲಾ ವೋಟರ್ ಕಾರ್ಡಗಳಿಗೆ ಆಧಾರ ಲಿಂಕ್ ಮಾಡಿಸಬೇಕು ಹಾಗೂ ಅದರ ಕುರಿತು ಅರಿವು ಮೂಡಿಸುವುದು ಎಲ್ಲಾ ಜಿಲ್ಲಾಧಿಕಾರಿಗಳ ಜವಾಬ್ದಾರಿ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ ಕುಮಾರ ಮೀನಾ ಹೇಳಿದರು.

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಶನಿವಾರದಂದು ನಡೆದ  ಪೋಟೋ ಎಲೆಕ್ಟ್ರೋಲ್ ರೂಲ್‍ಗಳ ವಿಶೇಷ ಸಾರಾಂಶ ಪರಿಷ್ಕರಣೆಯ ವಿಡೀಯೋ ಕಾನ್ಪರೆನ್ಸ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಮತದಾರರ ಗುರುತಿನ ಚೀಟಿಗಳಿಗೆÉ ಆದಾರ್ ಕಾರ್ಡ ಜೋಡಣೆಯ ಕುರಿತು ಜಿಲ್ಲೆಯ ಎಲ್ಲಾ ಸಿ.ಇ.ಒ, ಡಿ.ಡಿ.ಪಿ.ಐ ಡಿ.ಡಿ.ಪಿ.ಒ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳ  ಜೊತೆ ಚರ್ಚೆ ನಡೆಸಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಅಧಿಕಾರಿಗಳು ಗರುಡ  ಆ್ಯಪ್‍ನ್ನು ಡೌನಲೋಡ್ ಮಾಡಿಕೊಳ್ಳಬೇಕು ಹಾಗೂ ಈ ಕುರಿತು ಎಲ್ಲರಿಗು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಸೂಚನೆ ನೀಡಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟೂ 3503 ಮತದಾರರ ಗುರುತಿನ ಚೀಟಿಗಳಿಗೆ ಆಧಾರ್ ಕಾರ್ಡ ಲಿಂಕ್ ಮಾಡಲಾಗಿದೆ ಎಂದು ವರದಿ ನೀಡಿದರು ಹಾಗೂ ಬಾಕಿ ಇರುವ ಆಧಾರ ಲಿಂಕ್‍ನ್ನು ಕೂಡಲೇ ಮಾಡಲಾಗುವುದು ಎಂದು ತಿಳಿಸಿದರು.

 ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆಧಾರ ಲಿಂಕ್‍ನ ವರದಿ ನೀಡಿದರು ಹಾಗೂ ಇನ್ನೂ ಬಾಕಿ ಉಳಿದಂತಹ ಆಧಾರ ಜೋಡಣೆಗಳನ್ನೂ ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. 

ಸಭೆಯಲ್ಲಿ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...