ಕಾರವಾರ; ಆ ೨೧ರಂತೆ ಜಿಲ್ಲೆಯಲ್ಲಾದ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

Source: so english | By Arshad Koppa | Published on 22nd August 2017, 8:27 AM | Coastal News | Guest Editorial |

ಕಾರವಾರ ಆಗಸ್ಟ 21 : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 167.2 ಮಿ.ಮೀ ಮಳೆಯಾಗಿದ್ದು ಸರಾಸರಿ 15.2 ಮಿ.ಮೀ ಮಳೆ ದಾಖಲಾಗಿದೆ. ಆಗಸ್ಟ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 598.3 ಮಿ.ಮೀ ಇದ್ದು ಇದುವರೆಗೆ ಸರಾಸರಿ 226.4 ಮಿ.ಮೀ. ಮಳೆ ದಾಖಲಾಗಿದೆ. 
       ಅಂಕೋಲಾ 11 ಮಿ.ಮೀ,  ಭಟ್ಕಳ 42 ಮಿ.ಮೀ, ಹಳಿಯಾಳ 8.8 ಹೊನ್ನಾವರ 25.8 ಮಿ.ಮೀ, ಕಾರವಾರ 8 ಮಿ.ಮೀ, ಕುಮಟಾ 8.8 ಮಿ.ಮೀ, ಮುಂಡಗೋಡ 3 .ಮಿ.ಮೀ, ಸಿದ್ದಾಪುರ 22.6 ಮಿ.ಮೀ, ಶಿರಸಿ 20 ಮಿ.ಮೀ., ಜೋಯಡಾ 14.6 ಮಿ.ಮೀ, ಯಲ್ಲಾಪುರ 2.6 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ :. 
ಕದ್ರಾ: 34.50ಮೀ (ಗರಿಷ್ಟ), 31.05 ಮೀ (ಇಂದಿನ ಮಟ್ಟ), 1157 ಕ್ಯೂಸೆಕ್ಸ್ (ಒಳಹರಿವು)  (ಹೊರ ಹರಿವು ಇರುವದಿಲ್ಲ) ಕೊಡಸಳ್ಳಿ: 75.50ಮೀ (ಗರಿಷ್ಟ), 68.70 ಮೀ. (ಇಂದಿನ ಮಟ್ಟ), 552 ಕ್ಯೂಸೆಕ್ಸ್ (ಒಳ ಹರಿವು)  (ಹೊರ ಹರಿವು ಇರುವದಿಲ್ಲ ) ಸೂಪಾ: 564ಮೀ (ಗ),544.50 ಮೀ (ಇ.ಮಟ್ಟ), 4996.827 ಕ್ಯೂಸೆಕ್ಸ್  (ಒಳ ಹರಿವು), (ಹೊರ ಹರಿವು ಇರುವದಿಲ್ಲ)  ತಟ್ಟಿಹಳ್ಳ: 468.38ಮೀ (ಗ), 451.54 ಮೀ (ಇ.ಮಟ್ಟ),  (ಒಳ ಹರಿವು ಇರುವದಿಲ್ಲ) 24 ಕ್ಯೂಸೆಕ್ಸ (ಹೊರ ಹರಿವು) ಬೊಮ್ಮನಹಳ್ಳಿ: 438.38 ಮೀ (ಗ), 435.95 ಮೀ (ಇ.ಮಟ್ಟ), 3626 ಕ್ಯೂಸೆಕ್ಸ್ (ಒಳ ಹರಿವು) 102 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 51.51 ಮೀ (ಇ.ಮಟ್ಟ) 2557 ಕ್ಯೂಸೆಕ್ಸ್ (ಒಳ ಹರಿವು) 1348 ಕ್ಯೂಸೆಕ್ಸ್  ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1787.15 ಅ (ಇಂದಿನ ಮಟ್ಟ).  17183 ಕೂಸೆಕ್ಸ (ಒಳ ಹರಿವು) (ಹೊರ ಹರಿವು ಇರುವದಿಲ್ಲ) 

 ‘ಪ್ಯಾರಾಲೀಗಲ್ ವಾಲಂಟೀಯರ್ಸ್’ಗೆ ಪುನರ ಮನನ ಶಿಬಿರ  
ಕಾರವಾರ ಆಗಸ್ಟ 21 : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ 22 ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾ ವಕೀಲರ ಸಂಘದ ಸಭಾಭವನದಲ್ಲಿ ‘ಪ್ಯಾರಾಲೀಗಲ್ ವಾಲಂಟೀಯರ್ಸ್’ಗೆ ಪುನರ ಮನನ ಶಿಬಿರ ಆಯೋಜಿಸಲಾಗಿದೆ.
  ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಮತ್ತು  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿ.ಎಸ್.ಧಾರವಾಡಕರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಾರವಾರ ವಕೀಲರ ಸಂಘದ ಅಧ್ಯಕ್ಷ ಉದಯ ಎನ್.ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಶಿವಕುಮಾರ ಬಿ ಸೇರಿದಂತೆ ನ್ಯಾಯಾಲಯದ ಗಣ್ಯರು ಭಾಗವಹಿಸುವರು. 

Read These Next

ಐಸಿಎಸ್‍ಇ 10ನೇತರಗತಿ ಫಲಿತಾಂಶ; ನ್ಯೂ ಶಮ್ಸ್ ಸ್ಕೂಲ್‍ಗೆ ಸತತ ನಾಲ್ಕನೇ ವರ್ಷವೂ ಶೇ.100 ಫಲಿತಾಂಶ

ಭಟ್ಕಳ: ಇಲ್ಲಿನ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯಿಂದ ನಡೆಸಲ್ಪಸಡುವ ನ್ಯೂ ಶಮ್ಸ್ ಸ್ಕೂಲ್ (ಐಸಿಎಸ್‍ಇ ಪಠ್ಯಕ್ರಮ)ದ ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...