ಭಟ್ಕಳದಲ್ಲಿ ಸಂಭ್ರಮದಿ ಕಳೆ ಕಟ್ಟಿದ ಕನ್ನಡನಾಡ ಹಬ್ಬ

Source: SO News | By MV Bhatkal | Published on 2nd November 2023, 12:00 AM | Coastal News |

ಭಟ್ಕಳ:ತಾಲೂಕಾ ಆಡಳಿತ, ತಾಲ್ಲೂಕು ಪಂಚಾಯತ, ಪುರಸಭೆ ಭಟ್ಕಳ ಹಾಗೂ ಪಟ್ಟಣ ಪಂಚಾಯತ ಜಾಲಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವು ತಾಲ್ಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸುವುದರ ಮೂಲಕ ಬುಧವಾರದಂದು ಅದ್ದೂರಿಯಾಗಿ ನಡೆಸಲಾಯಿತು.

ನಂತರ ಮಾತನಾಡಿದ ಸಹಾಯಕ ಆಯುಕ್ತೆ ಡಾ.ನಯನಾ ಎನ್.ಕನ್ನಡ ರಾಜ್ಯೋತ್ಸವವು ಒಂದು ದಿನದ ಕಾರ್ಯಕ್ರಮವಾಗದೇ ನಮ್ಮೆಲ್ಲರ ಕಣಕಣದಲ್ಲು ಕನ್ನಡದ ಕಂಪು ಬೆರೆಯಬೇಕು. ನವೆಂಬರ್ 1 1956 ರಲ್ಲಿ ಮೈಸೂರು ರಾಜ್ಯವು ಹಿಂದಿನ ಮೈಸೂರು ಸಂಸ್ಥಾನದ ಬಹುತೇಕ ಪ್ರದೇಶಗಳನ್ನು ಒಳಗೊಂಡಿತ್ತು. ಹಲವು ಕಾರಣಗಳಿಂದ ಮೈಸೂರು ಎಂದು ಕರೆಯಲ್ಪಡುತ್ತಿದ್ದ ರಾಜ್ಯವನ್ನು ನವೆಂಬರ್ 1 1973 ಅಂದರೆ ಸರಿ ಸುಮಾರು 50 ವರ್ಷಗಳ ಹಿಂದೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಕರ್ನಾಟಕಕ್ಕೆ ಬಂದ ಅನ್ಯಭಾಷಿಕರಿಗೆ ಕನ್ನಡವನ್ನು ಕಲಿಸಿ ನಾವು ಸಹ ಕನ್ನಡ ಭಾಷೆಯನ್ನು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿಹಿಡಿಯಬೇಕು. ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ. ಬರೆಯುತ್ತೇನೆ. ನಿತ್ಯ ವ್ಯವಹಾರವನ್ನು ಕನ್ನಡವನ್ನೇ ಬಳಸುತ್ತೇನೆ. ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು,ನುಡಿ, ಸಂಸ್ಕ್ರತಿ ಪರಂಪರೆ ಉಳಿಸಲು ಸದಾ ಬದ್ದರಾಗಿರುತ್ತೇನೆ ಎಂದರು.

ನಂತರ ಕನ್ನಡ‌ ಸಾಹಿತ್ಯ ಪರಿಷತ್ತ ಅಧ್ಯಕ್ಷ ಗಂಗಾಧರ ನಾಯ್ಕ ಅವರಿಂದ ಕನ್ನಡ ನಾಡಿನ ಇತಿಹಾಸ ಪರಂಪರೆ ಗಥವೈಭವದ ಕುರಿತಾದ ಉಪನ್ಯಾಸ ಕಾರ್ಯಕ್ರಮ ನಡೆಸಿದರು. ನಂತರ ಗಂಧದಗುಡಿ ಚಲನಚಿತ್ರದ ನಾವಾಡುವ ನುಡಿಯೇ ಕನ್ನಡ ನುಡಿ ಎಂಬ ಹಾಡನ್ನು ಹಾಡಿ ಕನ್ನಡಮಯಗೊಳಿಸಿದರು.

ಸಾಧಕರಿಗೆ ಸನ್ಮಾನ

ಸಾಹಿತ್ಯ ಕ್ಷೇತ್ರದಲ್ಲಿ ಎಂ.ಜಿ.ತಿಲೋತ್ತಮೆ ಕೋಣಾರ

ಸಮಾಜ ಸೇವೆಯಲ್ಲಿ ಮಂಜುನಾಥ ನಾಯ್ಕ ಮುಟ್ಟಳ್ಳಿ 

ಕ್ರೀಡಾ ಕ್ಷೇತ್ರದಲ್ಲಿ ಶ್ರೀರಂಗ ಪಟಗಾರ, ಶ್ವೇತಾ ನಾಯ್ಕ ಮತ್ತು ಪ್ರಣವಿ ರಾಮಚಂದ್ರ ಕಿಣಿ

ಸಂಗೀತ ಕ್ಷೇತ್ರದಲ್ಲಿ ಬಾಲಚಂದ್ರ ಹೆಬ್ಬಾರ ಮತ್ತು ಸಾಹಿಲ್ ಗೋಮ್ಸ

ಜನಪದ ಕ್ಷೇತ್ರದಲ್ಲಿ ಕುಪ್ಪಾ ಮರಾಠಿ ಮತ್ತು ಗಣಪತಿ ಕಾಯ್ಕಿಣಿ

ಆಡಳಿತದಲ್ಲಿ ಕನ್ನಡ ವಿ.ಡಿ.ಮೋಗೇರ, ಸೋಜಿಯಾ ಸೋಮನ್ ಮತ್ತು ಮಹ್ಮದ್ ದಪೇದಾರ

ವಿಶೇಷ ಸನ್ಮಾನಿತರು 
ಅಗ್ನಿ ಶಾಮಕ ದಳ‌ ಭಟ್ಕಳ ಠಾಣಾಧಿಕಾರಿ ಎಸ್. ರಮೇಶ
ಸನ್ಮಾನಿಸಿ ಗೌರವಿಸಿದರು.


ವೇದಿಕೆಯಲ್ಲಿ ತಹಸೀಲ್ದಾರ ತಿಪ್ಪೇಸ್ವಾಮಿ, ತಾಲುಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಪುರಸಭೆ ಮುಖ್ಯಾಧಿಕಾರಿ ನೀಲಕಂಟ ಮೇಸ್ತ, ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಂಜಪ್ಪ ಎನ್., ಡಿವೈಎಸ್ಪಿ ಶ್ರೀಕಾಂತ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೋಗೇರ ಮುಂತಾದವರು ಇದ್ದರು. 

ನಂತರ ಶಾಲಾ ಮಕ್ಕಳಿಂದ ಕನ್ನಡ ಕುರಿತಾದ ಹಾಡುಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇದಕ್ಕೂ ಪೂರ್ವದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಕನ್ನಡ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿ ಕನ್ನಡ ತೇರಿನ ಮೆರವಣಿಗೆಯು ಸಂಶುದ್ದೀ‌ನ ಸರ್ಕಲ ಮಾರ್ಗವಾಗಿ ತಾಲೂಕಾ ಕ್ರೀಡಾಂಗಣದ ತನಕ ತಲುಪಿತು. ಮೆರವಣಿಗೆಯಲ್ಲಿ ಸ್ದಬ್ದ ಚಿತ್ರಗಳು ವಿಶೇಷ ಆಕರ್ಷಣೆಗೊಂಡಿತು

Read These Next