ನ್ಯಾಯಾಧೀಶರಾಗುತ್ತಿರುವ ಮಾಧ್ಯಮಗಳು; ಪ್ರಜಾಪ್ರಭುತ್ವವನ್ನು ಹಿಂದಕ್ಕೊಯ್ಯುತ್ತಿರುವ ಪತ್ರಕರ್ತರು; ಸಿ ಜೆ ಐ ಆಕ್ರೋಶ

Source: Vb | By I.G. Bhatkali | Published on 25th July 2022, 6:28 AM | National News |

ರಾಂಚಿ (ಜಾರ್ಖಂಡ್): ಮಾಧ್ಯಮಗಳು ಇತ್ತೀಚೆಗೆ ನ್ಯಾಯಾಧೀಶರ ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಅನುಭವಿ ನ್ಯಾಯಾಧೀಶರಿಗೂ ನಿರ್ಧರಿಸಲು ಕಷ್ಟವೆನಿಸುವ ವಿಷಯಗಳ ಕುರಿತು ಕಾಂಗರೂ ನ್ಯಾಯಾಲಯಗಳನ್ನು ನಡೆಸುತ್ತಿವೆ ಎಂದು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎನ್.ವಿ. ರಮಣ ಅವರು ಶನಿವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನ್ಯಾಷನಲ್ ಯುನಿವರ್ಸಿಟಿ ಆಫ್ ಸ್ಟಡಿ ಆ್ಯಂಡ್ ರೀಸರ್ಚ್ ಇನ್ ಲಾ'ದಲ್ಲಿ ಆಯೋ ಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ನ್ಯಾಯ ವಿತರಣೆಯನ್ನೊಳಗೊಂಡ ವಿಷ ಯಗಳ ಬಗ್ಗೆ ಸೂಕ್ತ ಮಾಹಿತಿಗಳಿಲ್ಲದ ಮತ್ತು ಅಜೆಂಡಾ ಆಧಾರಿತ ಚರ್ಚೆಗಳು ಪ್ರಜಾ ಪ್ರಭುತ್ವದ ಆರೋಗ್ಯಕ್ಕೆ ಹಾನಿ ಕಾರಕವೆಂದು ಸಾಬೀ ತಾಗುತ್ತಿವೆ ಎಂದರು.

ಮುಂದಿನ ತಿಂಗಳು ವೃತ್ತರಾಗಿರುವ ನ್ಯಾ ರಮಣ, ಮುದ್ರಣ ಮಾಧ್ಯಮಗಳು ಈಗಲೂ ಕೆಲಮಟ್ಟಿಗೆ ಹೊಣೆ ಗಾರಿಕೆಯನ್ನು ಹೊಂದಿವೆ, ಆದರೆ ವಿದ್ಯುನ್ಮಾನ ಮಾಧ್ಯಮಗಳು ತೋರಿಸುವುದು ಗಾಳಿಯಲ್ಲಿ ಮಾಯವಾಗುವುದರಿಂದ ಅವು ಯಾವುದೇ ಉತ್ತರದಾಯಿತ್ವವನ್ನು ಹೊಂದಿಲ್ಲ. ಸಾಮಾಜಿಕ ಮಾಧ್ಯಮ ಗಳಂತೂ ಇನ್ನಷ್ಟು ಕೆಟ್ಟದ್ದಾಗಿವೆ ಎಂದರು. ಮಾಧ್ಯಮಗಳು ತಮ್ಮ ಎಲ್ಲೆಯನ್ನು ಮೀರುವ ಮೂಲಕ ಸರಕಾರದಿಂದ ಅಥವಾ ನ್ಯಾಯಾಲಯಗಳಿಂದ ಹಸ್ತಕ್ಷೇಪವನ್ನು ಆಹ್ವಾ ನಿಸಬಾರದು ಎಂದು ಹೇಳಿದ ನ್ಯಾ.ರಮಣ, ನ್ಯಾಯಾಧೀಶರು ತಕ್ಷಣಕ್ಕೆ ಪ್ರತಿಕ್ರಿಯಿಸದಿರಬಹುದು. ದಯವಿಟ್ಟು ಅದನ್ನು ದೌರ್ಬಲ್ಯ ಅಥವಾ ಅಸಹಾಯಕತೆ ಎಂದು ತಪ್ಪಾಗಿ ಭಾವಿಸ ಬೇಡಿ. ಸ್ವಯಂ ನಿಯಂತ್ರಣ ಮತ್ತು ತಮ್ಮ ಮಾತುಗಳನ್ನು ಅಳೆದು ತೂಗುವುದು ಮಾಧ್ಯಮಗಳ ಪಾಲಿಗೆ ಒಳ್ಳೆಯದು ಎಂದರು. ಇತ್ತೀಚಿನ ದಿನಗಳಲ್ಲಿ ನ್ಯಾಯಾಧೀಶರ ಮೇಲೆ ದೈಹಿಕ ಹಲ್ಲೆಗಳು ಹೆಚ್ಚುತ್ತಿವೆ ಎಂದ ಅವರು, ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಅವರ ಕೆಲಸದ ಸೂಕ್ಷ್ಮತೆಯಿಂದಾಗಿ ನಿವೃತ್ತಿಯ ಬಳಿಕವೂ ಭದ್ರತೆಯನ್ನು ಒದಗಿಸಲಾಗುತ್ತದೆ. ವಿಪರ್ಯಾಸವೆಂದರೆ ನ್ಯಾಯಾಧೀಶರಿಗೆ ಇಂತಹ ರಕ್ಷಣೆಯನ್ನು ಒದಗಿಸಲಾಗುವುದಿಲ್ಲ ಎಂದು ಬೆಟ್ಟು ಮಾಡಿದ್ದರು.

ಶಕ್ತಿಶಾಲಿ ಪ್ರಜಾಪ್ರಭುತ್ವವನ್ನು ಖಚಿತಪಡಿಸಲು ನ್ಯಾಯಾಂಗವನ್ನು ಬಲಪಡಿಸುವ ಮತ್ತು ನ್ಯಾಯಾಧೀಶರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಜು.3ರಂದು ಬಿಜೆಪಿ ನಾಯಕಿ ನೂಪುರ್ ಶರ್ಮಾ ತನ್ನ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ದಿಲ್ಲಿಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಜೆ.ಬಿ.ಪರ್ದಿವಾಲಾ ಅವರು ನ್ಯಾಯಾಧೀಶರ ಮೇಲೆ ವೈಯಕ್ತಿಕ ದಾಳಿಗಳು ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗಬಹುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನ್ಯಾ.ರಮಣ ಅವರ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...