ಮಂಜುಸುತ ವಿರಚಿತ ಬಸವನಬಾಯಿ ಮಹಾಗಣಪತಿ ಭಕ್ತಿಗೀತೆಗಳ ಕೃತಿ "ಜಲಧಾರೆ" ಲೋಕಾರ್ಪಣೆ.

Source: SO News | By Laxmi Tanaya | Published on 20th January 2021, 9:20 PM | Coastal News | Don't Miss |

ಭಟ್ಕಳ : ತಾಲೂಕಿನ ಕುರುಂದೂರು ಗ್ರಾಮದ ಬಸವನಬಾಯಿ ಮಹಾಗಣಪತಿ ಕುರಿತು ಮಂಜುಸುತ ಜಲವಳ್ಳಿ  ರಚಿಸಿ ಭಕ್ತಿಗೀತೆಗಳ ಕೃತಿ ಜಲಧಾರೆ ದೇವರ ವರ್ಧಂತಿ ಉತ್ಸವದಂದು ಲೋಕಾರ್ಪಣೆಗೊಂಡಿತು.

ಕೃತಿಯನ್ನು ಲೋಕಾರ್ಪಣೆ ಮಾಢಿದ ಮಂಜುಸುತ ಜಲವಳ್ಳಿ ಎರಡು ಗೀತೆಗಳನ್ನು ವಾಚಿಸಿ ಭಗವಂತನ ಪ್ರೇರಣೆ ಮತ್ತು ಅನುಗ್ರಹವೇ ಗೀತರಚನೆಗೆ ಕಾರಣವೇ ಹೊರತು ನನ್ನದೇನೂ ಇಲ್ಲ. ಎಲ್ಲಿಯದೋ ಗಿಡದ ಹೂವು ದೇವರ ಪಾದ ಸೇರುವಂತೆ ಎಲ್ಲಿಯವನೋ ಆದ ನಾನು ಈ ಕ್ಷೇತ್ರಕ್ಕೆ ಬಂದು ಶ್ರೀ ದೇವರ ಗೀತೆಗಳನ್ನು ರಚಿಸಿ  ಅರ್ಪಿಸುವಂತಾಗಿರುವ ನನ್ನ ಪಾತ್ರ ಕೇವಲ ನಿಮಿತ್ತ ಮಾತ್ರ ಎಂದು ನುಡಿದರು. 

ಕೃತಿ ಹಾಗೂ ಕೃತಿಕಾರರನ್ನು ಪರಿಚಯಿಸಿದ ಪ್ರಾರ್ಥನಾ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಮಂಜುಸುತ ತಾವು ಸಂದರ್ಶಿಸಿದ ಪುಣ್ಯಕ್ಷೇತ್ರಗಳ ಕುರಿತು ಗೀತೆಗಳನ್ನು ರಚಿಸಿ ಅವುಗಳನ್ನು ದಾನಿಗಳ ಅಥವಾ ಸ್ವಂತ ಖರ್ಚಿನಲ್ಲಿ ಮುದ್ರಿಸಿ ಸಂಬಂಧಿಸಿದ ದೇವಾಲಯಗಳಿಗೇ ಉಚಿತ ವಿತರಣೆಗಾಗಿ ಅರ್ಪಿಸುವ ಓರ್ವ ಭಕ್ತಕವಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಇವರು ಈಗಾಗಲೇ ಈ ದಿಸೆಯಲ್ಲಿ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಬೇರೆ ಬೇರೆ ದೇಗುಲಗಳಿಗೆ ಅರ್ಪಿಸಿದ್ದಾರೆ. ಅವುಗಳಲ್ಲಿ ಭಟ್ಕಳದ ಶ್ರೀಧರ ಪದ್ಮಾವತಿ ದೇವಿ ಹಾಗೂ ನಿಚ್ಛಲಮಕ್ಕಿ ತಿರುಮಲ ವೆಂಕಟರಮಣ ದೇವರ ಗೀತೆಗಳು ಧ್ವನಿಸುರುಳಿಗಳಾಗಿ ಬಿಡುಗಡೆಯಾಗಿದ್ದು ಅವುಗಳನ್ನು ಹಾಡುವ ಅವಕಾಶ ತನಗೆ ದೊರೆತದ್ದು ತನ್ನ ಸೌಭಾಗ್ಯ ಎಂದರಲ್ಲದೇ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣನನ್ನು ಆಧರಿಸಿದ ಧ್ವನಿಸುರುಳಿಯನ್ನು ದೇಗುಲದ ನೂತನ ಶಿಲಾಮಯ ಗರ್ಭಗುಡಿಯ ಲೋಕಾರ್ಪಣೆಯ ಸಂದರ್ಭದಲ್ಲಿ ಉಜಿರೆಯ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ಲೋಕಾರ್ಪಣೆಗೊಳಿಸಿದ್ದರು. 

 ಶ್ರೀಧರ ಪದ್ಮಾವತಿ ದೇವಿಯ ಭಕ್ತಿಗೀತೆಗಳ ಧ್ವನಿಸುರುಳಿಯನ್ನು ಖ್ಯಾತ ಹಿನ್ನೆಲೆ ಗಾಯಕ ರಾಜೇಶ ಕೃಷ್ಣನ್ ಹಾಗೂ ಸಂಗೀತ ನಿರ್ದೇಶಕ ಸಾಧುಕೋಕಿಲಾ ಬಿಡಗಡೆಗೊಳಿಸಿದ್ದನ್ನು ಸ್ಮರಿಸಿದರಲ್ಲದೇ ಬಸವನಬಾಯಿ ಮಹಾಗಣಪತಿಯ ಗೀತೆಗಳೂ ಕೂಡ ಧ್ವನಿಸುರುಳಿಯಾಗಿ ಬಿಡಿಗಡೆಗೊಂಡು ಎಲ್ಲ ಭಕ್ತರ ನಾಲಿಗೆಯಲ್ಲಿ ನಲಿದಾಡಲಿ ಎಂದು ಹಾರೈಸಿದರು. 

ಈ ಸಂದರ್ಭದಲ್ಲಿ ದೇವಾಲಯದ ವತಿಯಿಂದ ಮಂಜುಸುತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಅಧ್ಯಕ್ಷ ಮಂಜುನಾಥ ನಾಯ್ಕ, ಜಲಧಾರೆ ಕೃತಿಗೆ ಆರ್ಥಿಕ ನೆರವನ್ನು ಸೇವಾರೂಪದಲ್ಲಿ ನಿಡಿದ ದೇವಾಲಯದ ಮಾಜಿ ಅಧ್ಯಕ್ಷ ಗಿರೀಶ ನಾಯ್ಕ, ಮಾಜಿ ಅಧ್ಯಕ್ಷ ಶಂಕರ ನಾಯ್ಕ ಮುಠ್ಠಳ್ಳಿ, ಮಂಜುನಾಥ ನಾಯ್ಕ ಕರಾವಳಿ, ಎಂ.ಪಿ.ಶೈಲೇಂದ್ರ ಗೌಡ, ಮಾದೇವ ನಾಯ್ಕ ಹಿತ್ತಲಗದ್ದೆ, ಈರಪ್ಪ ನಾಯ್ಕ ಹಾಡವಳ್ಳಿ, ಮಂಜುನಾಥ ನಾಯ್ಕ ಹಂಡೀಮನೆ, ಪ್ರಧಾನ ಅರ್ಚಕ ಗಜಾನನ ಭಟ್, ಗಣಪತಿ ನಾಯ್ಕ ಮುಠ್ಠಳ್ಳಿ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...