ಭಟ್ಕಳ: ಗ್ರಾಮೀಣ ಪೊಲೀಸ್ ಠಾಣೆಯಿಂದ ಅಂತರಾಷ್ಟ್ರೀಯ ಮಾದಕ ವಿರೋಧಿ ದಿನ

Source: S O News service | By Staff Correspondent | Published on 27th June 2016, 8:03 PM | Coastal News | Don't Miss |


ಭಟ್ಕಳ: ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ರವಿವಾರ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. 
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮತನಾಡಿದ ಗ್ರಾಮೀಣ ಠಾಣಾ ಪಿ.ಎಸ್.ಐ ಮಂಜಪ್ಪ ಬಿ. ಮಾದಕ ವ್ಯಸನಿಗಳಿಂದಾಗಿ ದೇಶ ಅಧೋಗತಿಗೆ ಇಳಿಯುತ್ತಿದೆ ವಿದ್ಯಾರ್ಥಿಗಳು ತಮ್ಮ ಕುಟುಂಬ, ನೆರೆಹೊರೆಗಳಲ್ಲಿ ಯಾರಾದರೂ ಇಂತಹ ದುಷ್ಚಟಗಳಿಗೆ ಬಲಿಯಾಗಿದ್ದಲ್ಲಿ ಅದನ್ನು ಬಲವಾಗಿ ವಿರೋಧಿಸಬೇಕು ಮತ್ತು ಅವರನ್ನು ಈ ಕೆಡಕಿನಿಂದ ತಡೆಯಬೇಕು ಎಂದು ಕರೆ ನೀಡಿದರು. 
ಎ.ಎಸ್.ಐ ನವೀನ್ ಬೋರ್ಕರ್ ಮಾತನಾಡಿ ಸಿಗರೇಟ್, ಮಧ್ಯಪಾನ ಮತ್ತಿತರ ಚಟಗಳಿಂದಾಗಿ ಮನುಷ್ಯನ ಸಾವು ಬೇಗನೆ ಬರುತ್ತದೆ ಧೂಮಪಾನಿಯಾದವರು ಕೇವಲ ತಾವು ಮಾತ್ರ ರೋಗಿಷ್ಠರಾಗುವುದಿಲ್ಲ ಬದಲಾಗಿ ಇಡೀ ಪರಿಸರವನ್ನು ರೋಗಿಷ್ಠವನ್ನಾಗಿ ಮಾಡುತ್ತಾನೆ  ಮಾದಕ ವ್ಯಸನಿಗಳು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ ಆದ್ದರಿಂದ ಪ್ರತಿಯೊಬ್ಬರು ಇಂತಹ ಕೆಡುಗಳಿಂದ ತಡೆದುಕೊಂಡು ಸಮಾಜವನ್ನು ಕೆಡುಕು ಮುಕ್ತವನ್ನಾಗಿ ಮಾಡಬೇಕು ಎಂದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಹಾಗೂ ಜಮಾ‌ಅತೆ ಇಸ್ಲಾಮಿ ಹಿಂದ್ ಉತ್ತರಕನ್ನಡ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ, ಸಮಾಜವನ್ನು ಕೆಡುಕು ಮುಕ್ತಗೊಳಿಸಲು ಇಸ್ಲಾಮ್ ಧರ್ಮ ಮನುಕುಲ ಕರೆ ನೀಡುತ್ತದೆ. ಕೆಲ ಅಧರ್ಮಿಗಳು ಇದನ್ನು ಲೆಕ್ಕಿಸದೆ ವ್ಯಸನಿಗಳಾಗಿ ಬದುಕುತ್ತಿದ್ದಾರೆ. ಪ್ರತಿಯೊಂದು ಕೆಡುಕಿನ ಮೂಲಕ ಮಧ್ಯಪಾನವಾಗಿದ್ದು ಇಸ್ಲಾಮ್ ಧರ್ಮವು ಮಧ್ಯಪಾನವನ್ನು ಅತ್ಯಂತ ಕೆಟ್ಟ ಕಾರ್ಯವನ್ನು ಜರಿದಿದ್ದು ಇದರ ಹತ್ತಿರ ಸುಳಿಯಬೇಡಿ ಎಂದು ಆದೇಶಿಸಿದೆ. ಧರ್ಮಗಳಲ್ಲಿ ಮಧ್ಯಪಾನ, ಜೂಜಾಟ ಹಾಗೂ ಮಾದಕ ವ್ಯಸನಕ್ಕೆ ಯಾವುದೇ ಸ್ಥಾನವಿಲ್ಲ. ಪೊಲೀಸ್ ಇಲಾಖೆ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಕರೆ ನೀಡಿದರು. 
ಪ್ರಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಮುಖ್ಯಾಧ್ಯಾಪಕ ಎಂ.ಆರ್. ಮಾನ್ವಿ, ಬೇರೆ ಕಡೆಗೆ ಹೋಲಿಸಿದ್ದಲ್ಲಿ ಭಟ್ಕಳದ ಯುವಕರು ದುಷ್ಚಟಗಳಿಂದ ಮುಕ್ತರಾಗಿದ್ದಾರೆ. ಕೆಲ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಇಂತಹ ಕೆಡುಕುಗಳು ಕಂಡು ಬರುತ್ತಿದ್ದು ಅವರಲ್ಲಿ ಈ ಕುರಿತು ಜಾಗೃತಿ ತರುವುದರ ಮೂಲಕ ಕೆಡುಕು ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. 
ವಿದ್ಯಾರ್ಥಿ ನಾಯಕರಾದ ಅಸ್ಬಾ ಉದ್ಯಾವರ್ ಹಾಗೂ ಅಸ್ಬಾತ್ ಆಹ್ಮದ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮಹೇಶ ನಾಯ್ಕ ಧನ್ಯವಾದ ಅರ್ಪಿಸಿದರು.
ಜಮಾ‌ಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಾಫಾ, ಮಾಣೇಶ್ವರ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...