ಭಟ್ಕಳ ಅಂಜುಮನ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಸಂಶೋಧನೆ ಮತ್ತು ಉದ್ಯಮ ಕೇಂದ್ರ ಉದ್ಘಾಟನೆ

Source: S O News service | By I.G. Bhatkali | Published on 18th January 2021, 7:12 PM | Coastal News |

ಭಟ್ಕಳ: ತಾಲೂಕಿನ ಅಂಜುಮನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೇಜ್‍ಮೆಂಟ್ ಕಾಲೇಜಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಂಶೋಧನೆ ಹಾಗೂ ಉದ್ಯಮ ಕೇಂದ್ರವನ್ನು ಕಾಲೇಜ್ ಬೋರ್ಡ ಕಾರ್ಯದರ್ಶಿ ಮೊಹಿದ್ದೀನ್ ರುಕ್ನುದ್ದೀನ್ ಉದ್ಘಾಟಿಸಿದರು.

ಆನ್‍ಲೈನ್‍ನಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಣಿಪಾಲದ ಡಾ.ಅರುಣ್ ಶ್ಯಾನಭಾಗ ಮಾತನಾಡಿ, ಸರಕಾರದಿಂದಲೇ ಎಲ್ಲರಿಗೂ ಉದ್ಯೋಗ ನೀಡುವುದು ಅಸಾಧ್ಯವಾದ ಸಂಗತಿಯಾಗಿದೆ. ಸಂಶೋಧನಾ ಮಾರ್ಗದಲ್ಲಿ ಹೊಸ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬೇಕಾಗಿದೆ ಎಂದರು. ಭಟ್ಕಳ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಜಾಮಿಲ್ ಖಾಜಿಯಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಿಡಾಕ್ ಉಪನಿರ್ದೇಶಕ ಶಿವಾನಂದ ಎಲ್ಲಿಗಾರ್, ಡಾ.ವೀರಣ್ಣ ಎಸ್. ಹವಾಲ್ದಾರ ಧಾರವಾಡ, ಪ್ರೋ.ಸೂರ್ಯನಾರಾಯಣ ರಾವ್ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳಾದ ಕಿರಣ ವಿಠ್ಠಲ್, ವಿಶ್ವನಾಥ, ನೂತನ ಕೇಂದ್ರ ಉದ್ದೇಶವನ್ನು ವಿವರಿಸಿದರು.  ಪ್ರಾಚಾರ್ಯ ಮುಷ್ತಾಕ್ ಬಾವಿಕಟ್ಟೆ ಎಲ್ಲರನ್ನೂ ಸ್ವಾಗತಿಸಿದರು. ಆನಂದ ಮೂರ್ತಿ ಶಾಸ್ತ್ರೀ ವಂದಿಸಿದರು. ಶ್ರೀಶೈಲ್ ಭಟ್ ಹಾಗೂ ಉಮ್ಮೇ ಫರ್ವಾ ಕಾರ್ಯಕ್ರಮ ನಿರೂಪಿಸಿದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...