ಟರ್ಕಿಯಿಂದ ಭಾರತಕ್ಕೆ ಸಾಗುತ್ತಿದ್ದ ಹಡಗು ಹೈಜಾಕ್ ಶಂಕಿತ ಯಮನ್‌ನ ಹೌದಿ ಬಂಡುಕೋರರ ಕೃತ್ಯ ಶಂಕೆ

Source: Vb | By I.G. Bhatkali | Published on 20th November 2023, 7:41 AM | National News |

ಹೊಸದಿಲ್ಲಿ: ಟರ್ಕಿಯಿಂದ ಭಾರತಕ್ಕೆ ಸಾಗುತ್ತಿದ್ದ ಸರಕು ಸಾಗಣೆ ಹಡಗನ್ನು ಕೆಂಪು ಸಮುದ್ರದಲ್ಲಿ ಯಮನ್‌ ಶಂಕಿತ ಹೌದಿ ಬಂಡುಕೋರರು ಹೈಜಾಕ್ ಮಾಡಿದ್ದಾರೆ. ಹಡಗಿನಲ್ಲಿ ವಿವಿಧ ದೇಶಗಳಿಗೆ ಸೇರಿದ ಸುಮಾರು 25 ಸಿಬ್ಬಂದಿಯಿದ್ದಾರೆ. ತಾವು ಇಸ್ರೇಲ್ ಹಡಗನ್ನು ವಶಪಡಿಸಿಕೊಂಡಿರುವುದಾಗಿ ಹೌದಿಗಳು ಹೇಳಿಕೊಂಡಿದ್ದಾರೆ, ಆದರೆ ಇದನ್ನು ಇಸ್ರೇಲ್ ನಿರಾಕರಿಸಿದೆ. 'ಗೆಲಾಕ್ಸಿ ಲೀಡರ್' ಹೆಸರಿನ ಈ ಹಡಗಿನಲ್ಲಿ ಯಾವುದೇ ಭಾರತೀಯರಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಅವರ ಕಚೇರಿಯು ಸುಳಿವು ನೀಡಿದೆ.

ಹಡಗು ಹೈಜಾಕ್ ಆಗಿರುವುದನ್ನು ದೃಢಪಡಿಸಿರುವ ಇಸ್ರೇಲಿ ರಕ್ಷಣಾ ಪಡೆಗಳು, ಇದು ಜಾಗತಿಕ ಪರಿಣಾಮವನ್ನು ಬೀರಬಲ್ಲ ಅತ್ಯಂತ ಗಂಭೀರ ಘಟನೆಯಾಗಿದೆ. ಹಡಗು ಟರ್ಕಿಯಿಂದ ಭಾರತಕ್ಕೆ ಪ್ರಯಾಣ ಆರಂಭಿಸಿದ್ದು, ವಿವಿಧ ದೇಶಗಳ ಪ್ರಜೆಗಳು ಸಿಬ್ಬಂದಿಯಾಗಿದ್ದಾರೆ. ಅದರಲ್ಲಿ ಇಸ್ರೇಲಿಗಳಿಲ್ಲ ಮತ್ತು ಹಡಗು ಇಸ್ರೇಲಿಗೆ ಸೇರಿದ್ದಲ್ಲ' ಎಂದು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿವೆ.

'ಅಂತರ್ ರಾಷ್ಟ್ರೀಯ ಹಡಗಿನ ಮೇಲಿನ ದಾಳಿಯನ್ನು ಇಸ್ರೇಲ್ ಬಲವಾಗಿ ಖಂಡಿಸುತ್ತದೆ. ಬ್ರಿಟಿಷ್ ಸಂಸ್ಥೆಯ ಒಡೆತನದ ಈ ಹಡಗನ್ನು ಜಪಾನಿನ ಸಂಸ್ಥೆಯೊಂದು ನಿರ್ವಹಿಸುತ್ತಿದೆ. ಇರಾನ್ ಮಾರ್ಗದರ್ಶನದಲ್ಲಿ ಯಮನ್‌ ಹೌದಿ ಬಂಡುಕೋರರು ಅದನ್ನು ಹೈಜಾಕ್ ಮಾಡಿದ್ದಾರೆ' ಎಂದು ನೆತನ್ಯಾಹು ಅವರ ಕಚೇರಿಯು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಹಡಗನ್ನು ಯಮನ್‌ನ ಸಲಿಫ್ ಬಂದರು ನಗರಿಗೆ ಒಯ್ಯಲಾಗಿದೆ ಎಂದು ಹೌದಿ ನಾಯಕನೋರ್ವನನ್ನು ಸುದ್ದಿಸಂಸ್ಥೆಯು ವರದಿ ಮಾಡಿದೆ. ಉಲ್ಲೇಖಿಸಿ ಬಹಾಮಾ ಧ್ವಜವನ್ನು ಹೊಂದಿರುವ ಹಡಗು బ్రిటెషో ಕಂಪೆನಿಯಡಿ ನೋಂದಣಿಯನ್ನು ಹೊಂದಿದೆ ಮತ್ತು ಇಸ್ರೇಲಿ ಉದ್ಯಮಿ ಅಬ್ರಹಾಂ ಉಂಗರ್ ಅದರ ಭಾಗಶಃ ಒಡೆತನವನ್ನು ಹೊಂದಿದ್ದಾರೆ. ಹೈಜಾಕ್ ಸಂದರ್ಭದಲ್ಲಿ ಅದನ್ನು ಜಪಾನಿ ಕಂಪೆನಿಗೆ ಲೀಸ್‌ನಲ್ಲಿ ನೀಡಲಾಗಿತ್ತು ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

Read These Next

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...