ಭಟ್ಕಳ: ವೈಟಲ್ ಅಲೈನ್ ಫಿಸಿಯೋಥೆರಪಿ ಸೆಂಟರ್ ಉದ್ಘಾಟನೆ

Source: S O News | By I.G. Bhatkali | Published on 23rd February 2024, 11:56 PM | Coastal News |

ಭಟ್ಕಳ: ವೈಟಲ್ ಅಲೈನ್ ಪಿಜಿಯೋಥೆರೆಪಿ ಸಂಸ್ಥೆಯಿಂದ ಭಟ್ಕಳದ ರೋಗಿಗಳಿಗೆ ವರದಾನವಾಗಿದೆ ಎಂದು ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್ ಹೇಳಿದರು.

ಅವರು ನಗರದ ಸಾಗರ ರಸ್ತೆಯ ಶ್ರೀ ಗುರುಸುಧೀಂದ್ರ ಕಾಲೇಜಿನ ಸಮೀಪದ ವೈಟಲ್ ಅಲೈನ್ ಪಿಜಿಯೋಥೆರಪಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಪಘಾತ, ಪಾರ್ಶ್ವವಾಯು ಪೀಡಿತರು, ಶಸ್ತçಚಿಕಿತ್ಸೆಯ ನಂತರ ಫಿಜಿಯೋಥೆರಫಿ ಅತೀ ಅಗತ್ಯವಾಗಿದ್ದು ಇದರಿಂದ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ ಎಂದೂ ಅವರು ಹೇಳಿದರು.

ಕೆಲವೊಂದು ಬಾರಿ ರೋಗಿಗಳ ಆರ್ಥಿಕ ಪರಿಸ್ಥಿತಿಯನ್ನು ನೋಡಿ, ಉಚಿತವಾಗಿಯೂ ಸೇವೆ ನೀಡುವ ಅಗತ್ಯತೆ ಇದೆ ಎಂದು ಅವರು ಒತ್ತಿ ಹೇಳಿದರು. ಪಿಜಿಯೋಥೆರಪಿ ಕೇಂದ್ರದಿಂದ ಭಟ್ಕಳದಲ್ಲಿರುವವರು ಬೇರೆ ಬೇರೆ ಕಡೆಗಳಿಗೆ ಹೋಗುವುದು ತಪ್ಪಿದಂತಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದ ಡಾ. ಲಕ್ಷ್ಮೇಶ ನಾಯ್ಕ ಮಾತನಾಡಿ ಅಪಘಾತ ಮುಂತಾದ ಕಾರಣಗಳಿಂದ ತಮ್ಮ ಅಂಗಾಗಳ ಚಲನೆಯನ್ನು ಕಳೆದುಕೊಂಡು ತೊಂದರೆಗೊಳಗಾಗಿರುವವರಿಗೆ ಇದು ವರದಾನವಾಗಿದೆ.  ಪಿಜಿಯೋಥೆರಪಿ ಚಿಕಿತ್ಸೆಯಿಂದ ಶೇ.೧೦೦ರಷ್ಟು ಮರು ಚಲನೆಯನ್ನು ಪಡೆಯುವುದಕ್ಕೆ ಸಾಧ್ಯ ಎಂದು ತಮ್ಮನ್ನೇ ಉದಾಹರಿಸಿದ ಅವರು ಇದರ ಸದುಪಯೋಗ ಅಗತ್ಯವಿದ್ದವರು ಪಡೆದುಕೊಳ್ಳಲಿ ಎಂದು ಹಾರೈಸಿದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಾಸ್ಕರ ನಾಯ್ಕ ಕಾಯ್ಕಿಣಿ ಮಾತನಾಡಿ ಭಟ್ಕಳದಂತಹ ಪ್ರದೇಶದಲ್ಲಿ ಸುಸಜ್ಜಿತ ಫಿಜಿಯೋಥೆರಪಿ ಕೇಂದ್ರದ ಅಗತ್ಯತೆ ಇತ್ತು. ಇದರಿಂದ ದೂರದ ಊರುಗಳಿಗೆ ಹೋಗುವುದು ತಪ್ಪಿದಂತಾಗಿದ್ದು ಬಹಳಷ್ಟು ಜನರಿಗೆ ಅನುಕೂಲವಾಗಿದೆ ಎಂದರು. ಉಪಸ್ಥಿತರಿದ್ದ ಸಮಾಜ ಸೇವಕ ನರೇಂದ್ರ ನಾಯಕ,  ಪತ್ರಕರ್ತ ರಾಧಾಕೃಷ್ಣ ಭಟ್ಟ, ಸಮಾಜ ಸೇವಕ ನಜೀರ್ ಕಾಶೀಂಜಿ ಮಾತನಾಡಿದರು. 

ಕಾರ್ಯಕ್ರಮದಲ್ಲಿದ್ದ ವೈಟಲ್ ಅಲೈನ್ ಪಿಜಿಯೋಥೆರಪಿ ಕೇಂದ್ರದ ವೈದ್ಯೆ ಡಾ. ಧನ್ಯಾ ಪ್ರಭು ಪಿಜಿಯೋಥೆರಫಿಯ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸ ನೀಡಿ ಫಿಜಿಯೋಥೆರಪಿ ಕೇಂದ್ರದಲ್ಲಿ ಲಭ್ಯವಿರುವ ವಿವಿಧ ಮಾದರಿಯ ಫಿಜಿಯೋಥೆರಪಿ ಯಂತ್ರಗಳನ್ನು ಪರಿಚಯಿಸಿದರು.

Read These Next